Home News ಮಕ್ಕಿಮನೆ ಕಲಾವೃಂದ ಮಂಗಳೂರು ಹಾಗೂ ಜಿನಗಾನ ವಿಶಾರದೆ ಫೇಸ್ಬುಕ್ ಬಳಗದ ವತಿಯಿಂದ ಜೈನಧರ್ಮದ ದಶಲಕ್ಷಣ ಪರ್ವದ...

ಮಕ್ಕಿಮನೆ ಕಲಾವೃಂದ ಮಂಗಳೂರು ಹಾಗೂ ಜಿನಗಾನ ವಿಶಾರದೆ ಫೇಸ್ಬುಕ್ ಬಳಗದ ವತಿಯಿಂದ ಜೈನಧರ್ಮದ ದಶಲಕ್ಷಣ ಪರ್ವದ ನಿಮಿತ್ತ ಕ್ಷಮಾವಾಣಿ ಕಾರ್ಯಕ್ರಮ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗ ಹಾಗೂ ಜಿನಗಾನ ವಿಶಾರದೆ ಫೇಸ್ಬುಕ್ & ಯೂಟ್ಯೂಬ್ ಚಾನೆಲ್ ಬಳಗದ ವತಿಯಿಂದ ಜೈನ ಧರ್ಮದ ಪರಮೋಚ್ಛ ಪರ್ವವಾದ ದಶಲಕ್ಷಣ ಮಹಾಪರ್ವದಲ್ಲಿ ಕ್ಷಮಾವಾಣಿ ಕಾರ್ಯಕ್ರಮ ಮಂಗಳವಾರ (21/9/2021) ಆನ್ಲೈನ್ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಎನ್.ಆರ್.ಪುರ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಪಾವನ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಜೈನ ಧರ್ಮ ಆಚರಿಸುವ ಹಲವಾರು ಪರ್ವಗಳಲ್ಲಿ ದಶಲಕ್ಷಣ ಮಹಾಪರ್ವ ಅತ್ಯಂತ ಶ್ರೇಷ್ಠವಾಗಿದೆ. ಈ ದಶಧರ್ಮಗಳನ್ನು ಜೀವನಪೂರ್ತಿ ಯಾರು ಆಚರಿಸುತ್ತಾರೋ ಅವರೇ ಮೋಕ್ಷದ ಫಲಾನುಭವಿಗಳಾಗಿರುತ್ತಾರೆ ಎಂದರು.

ನಾಡಿನ ಖ್ಯಾತ ಸಂಗೀತಗಾರದ ಶ್ರೀಮತಿ ಜಯಶ್ರೀ ಡಿ. ಜೈನ್ ಹೊರನಾಡು ಅವರ ಸುಮಧುರ ಕಂಠದಿಂದ ದಶಲಕ್ಷಣ ಮಹಾಪರ್ವದ ಹಾಡುಗಳು ಸುಮಧುರವಾಗಿ ಮೂಡಿಬಂದವು. ಖ್ಯಾತ ವಾಗ್ಮಿಗಳಾದ ನಿತೇಶ್ ಬಳ್ಳಾಲ್ ಉಳಿಯಬೀಡು ಹಾಗೂ ಮಹಾವೀರ ಜೈನ್ ಇಚ್ಲಂಪಾಡಿ ಅವರುಗಳಿಂದ ದಶಧರ್ಮದ ಕುರಿತು ವಿಶೇಷ ವ್ಯಾಖ್ಯಾನ ನಡೆಯಿತು. ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡ, ಶ್ರೇಯಾ ಭಟ್ ನೃತ್ಯ ತಂಡ ಬೋಳಾರ್ ಮಂಗಳೂರು, ಆರ್.ಜೆ .ಗರ್ಲ್ ಡ್ಯಾನ್ಸ್ ಟೀಮ್ ಮಾರ್ನಮಿಕಟ್ಟೆ ಮಂಗಳೂರು ತಂಡಗಳಿಂದ ನೃತ್ಯ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಸಂಯೋಜಕರಾದ ಧರಣೇಂದ್ರ ಜೈನ್ ಹೊರನಾಡು, ಸುದೇಶ್ ಜೈನ್ ಮಕ್ಕಿಮನೆ ಮಂಗಳೂರು, ಧೀರಜ್ ಡಿ ಜೈನ್ ಹೊರನಾಡು, ನಿರಂಜನ್ ಜೈನ್ ಕುದ್ಯಾಡಿ, ಮಹಾವೀರ ಪ್ರಸಾದ್ ಹೊರನಾಡು, ಧನುಷ್ ಡಿ ಜೈನ್ ಹೊರನಾಡು , ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಅರ್ಕಕೀರ್ತಿ ಜೈನ್ ಹೊರನಾಡು ಕಾರ್ಯಕ್ರಮ ನಿರೂಪಿಸಿದರು.

ಜೈನ ಧರ್ಮದ ಯುವ ಪ್ರತಿಭೆಗಳಿಂದ ದಶದಿನಗಳ ಪರ್ಯಂತ ನಡೆದಂತಹ ದಶಲಕ್ಷಣ ಮಹಾಪರ್ವದ ವಿಚಾರಧಾರೆ ಕಾರ್ಯಕ್ರಮದಲ್ಲಿ
ಸಂಸ್ಕೃತಿ ಎಂ ಜೈನ್ ಎಳನೀರು, ನೇಹಾ ಡಿ ಜೈನ್ ಹೊರನಾಡು ,ಪ್ರಮಯಿ ಜೈನ್ ಮೂಡುಬಿದಿರೆ, ಅನನ್ಯಾ ಜೈನ್ ವಿಟ್ಲ, ಅನನ್ಯ ಬೆಳ್ತಂಗಡಿ, ಶ್ರೇಯಾ ಎಸ್ ಜೈನ್ ಮಂಗಳೂರು, ಲೇಖನ್ ವಿ. ಜೈನ್ ಕಾರ್ಕಳ, ಪಂಚಮಿ ಮಾರೂರು ಮೂಡುಬಿದಿರೆ, ಅರ್ಚಿತ್ ಎ ಜೈನ್ ಸಂಸೆ, ಉಜ್ವಲ್ ಜೈನ್ ಮೇಗುಂದ ಭಾಗವಹಿಸಿದ್ದರು.
ಅಕ್ಷಯ್ ಜೈನ್ ಕೇರ್ವಾಶೆ ಮೊದಲಾದವರು ಸಹಕರಿಸಿದರು.