Home News Shivrajkumar: ಕಾರು ಅಡ್ಡಗಟ್ಟಿ ಶಿವಣ್ಣ ಕಾಲಿಗೆ ಬಿದ್ದು ಕ್ಷಮೆ ಕೇಳಿ ಮಡೆನೂರು ಮನು..!! ಶಿವಣ್ಣನ ರಿಯಾಕ್ಷನ್...

Shivrajkumar: ಕಾರು ಅಡ್ಡಗಟ್ಟಿ ಶಿವಣ್ಣ ಕಾಲಿಗೆ ಬಿದ್ದು ಕ್ಷಮೆ ಕೇಳಿ ಮಡೆನೂರು ಮನು..!! ಶಿವಣ್ಣನ ರಿಯಾಕ್ಷನ್ ಏನು?

Hindu neighbor gifts plot of land

Hindu neighbour gifts land to Muslim journalist

Shivrajkumar : ಯುವ ನಟ ಮಡೆನೂರು ಮನು ಸ್ಯಾಂಡಲ್ ವುಡ್ ಚಕ್ರವರ್ತಿ ಶಿವಣ್ಣ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ರಾಜ್ಯಾಧ್ಯಂತ ವಿವಾದಕ್ಕೆ ಗುರಿಯಾಗಿದ್ದರು. ಆದರೆ ಇದೀಗ ಅವರು ನೇರವಾಗಿ ಶಿವಣ್ಣ ಅವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾರೆ.

ಹೌದು, ಕೆಲವು ದಿನಗಳ ಹಿಂದೆ ಮಡೆನೂರು ಮನು ವಿರುದ್ಧ ಸಹ ನಟಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮನು ಮಾತನಾಡಿದ್ದಾರೆ ಎನ್ನಲಾದ ಅಡಿಯೋ ಒಂದು ವೈರಲ್ ಆಗಿತ್ತು. ಈ ಅಡಿಯೋದಲ್ಲಿ ಶಿವಣ್ಣ ಕೆಲವೇ ದಿನಗಳಲ್ಲಿ ಸತ್ತೋಗ್ತಾರೆ ಎಂದು ಮನು ಹೇಳಿದ ಧ್ವನಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಚಿತ್ರರಂಗದಿಂದ ನಿಷೇಧಿಸಲಾಗಿತ್ತು. ಬಳಿಕ ಕ್ಷಮೆ ಕೇಳಿ ಪತ್ರ ಬರೆದ ಹಿನ್ನಲೆಯಲ್ಲಿ ನಿಷೇಧ ಹಿಂತೆಗೆಯಲಾಗಿತ್ತು. ಇದೀಗ ಮನು ಶಿವಣ್ಣ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ಕಾರಿನ ಬಳಿ ಬಂದು ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾರೆ.

ಇದೀಗ ನಟ ಶಿವರಾಜ್‌ ಕುಮಾರ್ ಅವರನ್ನ ನೇರವಾಗಿ ಭೇಟಿ ಮಾಡಿ, ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ತಮ್ಮ ‘ಕುಲದಲ್ಲಿ ಕೀಳ್ಯಾವುದೋ ‘ ಚಿತ್ರವನ್ನು ಮರು ಬಿಡುಗಡೆ ಮಾಡಲು ಬಯಸಿದ್ದು, ನಿಮ್ಮ ಒಪ್ಪಿಗೆ ಬೇಕು ಅಣ್ಣ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ಶಿವರಾಜ್‌ಕುಮಾರ್, ನಟ ಮಡೆನೂರು ಮನುಗೆ ಒಳ್ಳೆಯದಾಗಲಿ, `ಒಳ್ಳೆಯ ಟೈಟಲ್‌ನ ಸಿನಿಮಾ ರಿಲೀಸ್ ಮಾಡಿ. ಕುಲದಲ್ಲಿ ಯಾರೂ ಕೀಳಲ್ಲ, ಮೇಲಲ್ಲ. ಯಾರೇ ಬೈದ್ರೂ, ಹೊಗಳಿದ್ರು ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ’ ಎಂದು ತಮ್ಮ ದೊಡ್ಡತನ ಮೆರೆದಿದ್ದಾರೆ.

https://x.com/shivannaupdates/status/1959935578780098839?t=kKybE5mFZ8k-TcV60t7UZQ&s=19

ಇನ್ನು ಜೈಲಿನಿಂದ ಹೊರ ಬಂದ ಬಳಿಕ ನಟ ಮಡೆನೂರು ಮನು ಫಿಲ್ಮ್ ಚೇಂಬರ್‌ಗೂ ಭೇಟಿ ನೀಡಿ ತಮ್ಮ ಮೇಲೆ ಹೇರಿದ್ದ ಬ್ಯಾನ್ ತೆರುವುಗೊಳಿಸಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಲು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದರು.