Home News Vartur Santosh : ಮಡೆನೂರು ಮನುಗೆ ವರ್ತೂರು ಸಂತೋಷ್ ಓಪನ್ ಚಾಲೆಂಜ್ – ಇಬ್ಬರ ನಡುವೆ...

Vartur Santosh : ಮಡೆನೂರು ಮನುಗೆ ವರ್ತೂರು ಸಂತೋಷ್ ಓಪನ್ ಚಾಲೆಂಜ್ – ಇಬ್ಬರ ನಡುವೆ ಹಿಂದೆ ನಡೆತ್ತು ಕಿರಿಕ್, ಏನದು?

Hindu neighbor gifts plot of land

Hindu neighbour gifts land to Muslim journalist

Vartur Santosh: ಅತ್ಯಾಚಾರ ಆರೋಪ ಹೊತ್ತಿರುವ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಅವರು ಇದೀಗ ಜಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಈ ಬೆನ್ನಲ್ಲೇ ಅವರು ತಾವು ಜೈಲಿಗೆ ಹೋದ ಸಂದರ್ಭದಲ್ಲಿ ವೈರಲ್ ಆಗಿದ್ದ, ಕನ್ನಡ ಸಿನಿಮಾ ನಟರ ಕುರಿತು ತಾವು ಆಡಿದ್ದ ಮಾತುಗಳ ಕುರಿತಾಗಿ ಪಶ್ಚಾತಾಪ ಪಡುತ್ತಾ ಎಲ್ಲ ನಟರ ಬಳಿ ತೆರಳಿ ಕ್ಷಮೆ ಕೇಳುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ನಡೆಯನೂರು ಮನು ಅವರಿಗೆ ಓಪನ್ ಚಾಲೆಂಜ್ ಒಂದನ್ನು ಹಾಕಿದ್ದಾರೆ.

ಹೌದು, ಬಿಗ್‌ಬಾಸ್‌ ಖ್ಯಾತಿಯ ವರ್ತೂರು ಸಂತೋಷ್‌ ಅವರು ಮನು ವಿರುದ್ಧ ತೊಡೆತಟ್ಟಿದ್ದಾರೆ. ಸಂತೋಷ್ ಅವರು ನಡೆಯನೂರು ಮನು ಅವರಿಗೆ ಓಪನ್ ಚಾಲೆಂಜ್ ಒಂದನ್ನು ಹಾಕಿದ್ದಾರೆ. ಇಷ್ಟಕ್ಕೂ ಮನು ಹಾಗೂ ವರ್ತೂರು ಸಂತೋಷ್‌ ನಡುವಿನ ಕಿರಿಕ್‌ ಏನು ಗೊತ್ತಾ?

ಅಂದಹಾಗೆ ವರ್ತೂರು ಸಂತೋಷ್‌ ಅವರು ನೋವಿನಿಂದ ಹೇಳಿದ್ದ ಮಾತುಗಳನ್ನು ಮನು ಈ ಹಿಂದೆ ಮಿಮಿಕ್ರಿ ಮಾಡಿದ್ದರು. ಇದರಿಂದ ಸಂತೋಷ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬರ ನೋವನ್ನು ಆ ರೀತಿ ಅನುಕರಣೆ ಮಾಡುವುದು ಸರಿಯೇ ಎಂದು ಮನುಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ‘ಕಲೆಗೆ ಬೆಲೆ ಕೊಟ್ಟವನು ಕಲಾವಿದ. ನಾನು ಎಷ್ಟೋ ಒಳ್ಳೆಯ ಮಾತುಗಳನ್ನ ಹೇಳಿದ್ದೀನಿ, ಅದನ್ನ ಮನು ಇಮಿಟೇಟ್‌ ಮಾಡಿಲ್ಲ. ಆದರೆ ಒಬ್ಬ ವ್ಯಕ್ತಿ ದುಃಖದಲ್ಲಿ ಹೇಳಿದ ಮಾತುಗಳು ನಿನಗೆ ಅಷ್ಟೊಂದು ಜೋಕ್‌ ಅನಿಸಿತಾ? ಎಂದು ಕೇಳಿದ್ದಾರೆ. ಯಾರೇ ಆಗಲಿ ನೈತಿಕತೆ ಅನ್ನೋದು ಇರಬೇಕು. ಇಂತಹ ಅವಿವೇಕಿ ಹೀಗೆ ಮಾಡುವಾಗ ದೂರವಾದ್ರೂ ಸರಿಯಬೇಕಿತ್ತು. ನನ್ನ ಮಿಮಿಕ್ರಿ ಮಾಡಿರುವ ವಿಡಿಯೋ ನೋಡಿ ಮನಸ್ಸಿಗೆ ಬೇಜಾರಾಯ್ತು, ಅದು ಒಬ್ಬರನ್ನ ಕೆಳಗೆ ಹಾಕುವಂತಿತ್ತು’ ಎಂದು ವರ್ತೂರು ಹರಿಹಾಯ್ದಿದ್ದಾರೆ.

‘ನಾನು ನನ್ನ ಮನಸ್ಸಿನಿಂದ ಹೇಳಿದ ದುಃಖದ ವಿಚಾರವನ್ನು ಜನ ಈ ರೀತಿ ಹಾಸ್ಯ ಮಾಡ್ತಾರಲ್ಲ ಅಂತ ಬೇಸರವಾಯ್ತು. ಆದರೆ ಇವತ್ತು ಮನು ಗತಿ ಏನಾಯ್ತು? ಈಗ ಇದೇ ಮಾಧ್ಯಮಗಳ ಮುಂದೆ ಆವತ್ತು ಮಾತನಾಡಿದಂತೆ ಬಂದು ಮಾತನಾಡು, ನಿನಗೆ ನಾನೇ ಹಾರ ಹಾಕ್ತೀನಿ ಎಂದು ಮಡೆನೂರು ಮನುಗೆ ವರ್ತೂರು ಸಂತೋಷ್‌ ಚಾಲೆಂಜ್‌ ಹಾಕಿದ್ದಾರೆ.

ಇದನ್ನೂ ಓದಿ;Hariyana: ತನ್ನ 66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ – ಅಜ್ಜ ಸತ್ತ ಬಳಿಕ ‘ಏನೇನೋ’ ಆಯ್ತು ಗೊತ್ತಾ?