Home News ಕದ್ದು ಮುಚ್ಚಿ ಪ್ರೇಯಸಿಯನ್ನು ಭೇಟಿಯಾಗಲು ಹೊರಟ ಪ್ರಿಯಕರನಿಗೆ ಕಾದಿತ್ತು ಬಿಗ್ ಶಾಕ್ !! | ಇವರಿಬ್ಬರನ್ನು...

ಕದ್ದು ಮುಚ್ಚಿ ಪ್ರೇಯಸಿಯನ್ನು ಭೇಟಿಯಾಗಲು ಹೊರಟ ಪ್ರಿಯಕರನಿಗೆ ಕಾದಿತ್ತು ಬಿಗ್ ಶಾಕ್ !! | ಇವರಿಬ್ಬರನ್ನು ಹೊಲದಲ್ಲಿ ಜೊತೆಯಾಗಿ ಕಂಡ ಗ್ರಾಮಸ್ಥರು ಮಾಡಿದ್ದೇನು ಗೊತ್ತೇ??

Hindu neighbor gifts plot of land

Hindu neighbour gifts land to Muslim journalist

ತನ್ನ ಪ್ರೇಯಸಿಯನ್ನು ಭೇಟಿಯಾಗಲು ಯುವಕರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಅಂತೆಯೇ ಇಲ್ಲೊಬ್ಬ ಯುವಕ ಪ್ರೇಯಸಿಯನ್ನು ಭೇಟಿಯಾಗಲು ಹೋದಾಗ ಆತನಿಗೆ ಬಲವಂತವಾಗಿ ಗೆಳತಿಯೊಂದಿಗೆ ವಿವಾಹ ಮಾಡಿಸಿದ ಘಟನೆ ಬಿಹಾರದ ಬೇಗುಸರಾಯ್‍ನಲ್ಲಿ ನಡೆದಿದೆ.

ಆದಿತ್ಯ ಕುಮಾರ್ ತನ್ನ ಪ್ರೇಯಸಿಯನ್ನು ಹೊಲದಲ್ಲಿ ಭೇಟಿಯಾಗಲು ಹೋಗಿದ್ದನು. ಇಬ್ಬರು ಜೊತೆಯಲ್ಲಿರುವುದನ್ನು ಗಮನಿಸಿದ ಗ್ರಾಮಸ್ಥರು ಯುವಕನನ್ನು ಥಳಿಸಿ, ಅವನನ್ನು ಬಂಧನದಲ್ಲಿಟ್ಟು ಕೊಂಡಿದ್ದರು.

ನಂತರ ಆದಿತ್ಯ ಕುಮಾರ್‌ಗೆ ಆತನ ಪ್ರೇಯಸಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ವಧುವಿನ ಪಾಲಕರು ಸ್ಥಳಕ್ಕೆ ಆಗಮಿಸಿ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಯುವಕನ ಕುಟುಂಬಕ್ಕೂ ಈ ಕುರಿತು ತಿಳಿಸಲಾಗಿದೆ. ಬಿಹಾರದಲ್ಲಿ ಇಂತಹ ಬಲವಂತದ ವಿವಾಹಗಳು ಸಾಮಾನ್ಯವಾಗಿದೆ. ಆದರೆ ಈ ಘಟನೆಯ ಕುರಿತಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ.