Home News ಆತನ ನಿಷ್ಕಲ್ಮಶವಾದ ಪ್ರೀತಿಗೆ ಜವರಾಯನೇ ಸೋತಿದ್ದಾನೆ !! ಕೋಮಾಕ್ಕೆ ತಲುಪಿದ್ದ ಪ್ರಿಯತಮೆ ಆತನ ಪ್ರೀತಿಗೆ ಚೇತರಿಸಿಕೊಂಡಿದ್ದಾಳೆ...

ಆತನ ನಿಷ್ಕಲ್ಮಶವಾದ ಪ್ರೀತಿಗೆ ಜವರಾಯನೇ ಸೋತಿದ್ದಾನೆ !! ಕೋಮಾಕ್ಕೆ ತಲುಪಿದ್ದ ಪ್ರಿಯತಮೆ ಆತನ ಪ್ರೀತಿಗೆ ಚೇತರಿಸಿಕೊಂಡಿದ್ದಾಳೆ |ಪ್ರೇಮಲೋಕವೇ ಕಣ್ಣೀರು ಹಾಕಿದ ಪ್ರೇಮ ಕಥೆ ಇಲ್ಲಿದೆ…

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಎನ್ನುವ ಪದಕ್ಕೆ ಹಲವಾರು ಅರ್ಥಗಳ ಸಂಬಂಧಗಳಿವೆ. ಪ್ರೀತಿ ಎನ್ನುವುದು ಎರಡು ಮನಸ್ಸುಗಳ ನಡುವೆ ಇರುವ ಅಮೂಲ್ಯ ಸಂಬಂಧ. ಇಂತಹ ಪ್ರೀತಿಗೆ ಬೆಲೆ ಕಟ್ಟುವುದು ಸತ್ಯಕ್ಕೆ ದೂರವಾದ ಮಾತೂ ಹೌದು. ಯಾಕೆ ಈ ಮಾತೆಲ್ಲ ಎಂದಕೊಳ್ಳುತ್ತಿರುವವರು ಈ ಸ್ಟೋರಿಯನ್ನು ಓದಲೇ ಬೇಕು.

ಕೋಮಾದಲ್ಲಿದ್ದ ತನ್ನ ಪ್ರೇಯಸಿಗಾಗಿ ಅದೆಷ್ಟೋ ಪ್ರಾರ್ಥನೆ, ಅದೆಷ್ಟೋ ದಿನ ಕಾದ ಆ ಪ್ರಿಯಕರನಿಗೆ ಕೊನೆಗೂ ಖುಷಿಯ ದಿನ ಬಂದೇ ಬಿಟ್ಟಿದೆ. ಕೋಮಾದಲ್ಲಿದ್ದ ಆಕೆ ಅದು ಹೇಗೋ ಚೇತರಿಸಿಕೊಂಡು ಬಂದ ಖುಷಿಯಲ್ಲಿ ಆಕೆಯನ್ನು ವರಿಸಲು ಆಕೆಯ ಪ್ರಿಯಕರ ಆ ಕೂಡಲೇ ಆಕೆಗೆ ರಿಂಗ್ ತೊಡಿಸಿದ್ದು, ತನ್ನ ಪ್ರೇಮವನ್ನು ಆಕೆಯ ಎದುರು ತೋರಿಸಿದ ಆ ಪ್ರೇಮಕತೆ ಇಡೀ ಪ್ರೇಮಲೋಕವನ್ನೇ ಕಣ್ಣಂಚಲ್ಲಿ ನೀರು ತುಂಬುವಂತೆ ಮಾಡಿದೆ.

ತನ್ನ ಪ್ರೇಯಸಿಗೆ ಅಗಾಧವಾದ ಪ್ರೀತಿ ತೋರ್ಪಡಿಸಿದಾಗ ಆಕೆಗಾದರೂ ನಿರಾಕರಿಸಲು ಮನಸ್ಸು ಬರುವುದೇ?. ಆಕೆ ಆತನ ಪ್ರೀತಿಯನ್ನು ಒಪ್ಪಿಕೊಂಡು ನಾನೆಷ್ಟು ಪುಣ್ಯವಂತೆ ಎಂಬ ಯೋಚನೆಯಲ್ಲಿ ಮುಳುಗಿದ್ದಾಳೆ.

ಈ ಘಟನೆ ನಡೆದಿರುವುದು ಅಮೇರಿಕಾದಲ್ಲಿ. ಅಲ್ಲಿನ ಚಿಕಾಗೋ ನಗರದ ಯುವತಿಯ ಹೆಸರು ವಿಕ್ಟೋರಿಯ. ಆಕೆಯ ಪ್ರಿಯತಮ ಸ್ಟಿವನ್. ಈತ ಸುಮಾರು ಒಂದು ವರ್ಷದಿಂದ ವಿಕ್ಟೋರಿಯಾಳನ್ನು ಪ್ರೀತಿಸುತ್ತಿದ್ದ. ಆದರೆ ವಿಕ್ಟೋರಿಯಾಳಿಗೆ ಅದಾಗಲೇ ಅತೀ ವಿರಳವಾದ ಖಾಯಿಲೆ ಇರುವುದು ಖಚಿತವಾಗುತ್ತದೆ. ಚರ್ಮದ ಕ್ಯಾನ್ಸರ್ ಗೆ ತುತ್ತಾದ ಯುವತಿ ಇನ್ನೂ ಮೇಲೇಳುವುದಿಲ್ಲವೆಂದಾಗ ಸ್ಟಿವನ್ ಗೆ ಬರಸಿಡಿಲೇ ಬಡಿದಂತಾಗುತ್ತದೆ.

ಇನ್ನು ಆಕೆ ಕೋಮಾದಿಂದ ಮೇಲೆ ಏಳುವುದೇ ಇಲ್ಲ ಎಂದು ವೈದ್ಯರ ವರದಿ ಹೇಳಿದೆ. ಆದರೆ ಇತ್ತ ಈತನ ಪ್ರೀತಿಗೆ ಸೋತ ಜವರಾಯ ಆಕೆಯನ್ನು ಒಂದೂವರೆ ತಿಂಗಳಲ್ಲಿ ಗುಣಮುಖಳನ್ನಾಗಿಸಿದೆ. ಸದ್ಯ ಆಕೆ ಗುಣಮುಖಳಾಗಿದ್ದರಿಂದ ಸಂತೋಷಗೊಂಡ ಆತ ಆಕೆಯನ್ನು ವರಿಸಲು ಮುಂದಾದಾಗ ಆಕೆಯು ಕೂಡಾ ಅದಕ್ಕೆ ಸಮ್ಮತಿಸಿದ್ದಾಳೆ.

ಸದ್ಯ ಅವರಿಬ್ಬರ ಮನೆಯಲ್ಲೂ ಮದುವೆಯ ಸಡಗರ, ಖುಷಿಯ ಸಂಭ್ರಮ. ಮುಂದಿನ ವರ್ಷ ಇಬ್ಬರ ಮದುವೆ ಅದ್ಧೂರಯಾಗಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಇವರಿಬ್ಬರ ಪ್ರೀತಿಯ ಮುಂದೆ ಆ ದೇವರೇ ಸೋತಿದ್ದಾನೆ ಎಂದಾದರೆ ಅಮೂಲ್ಯವಾದ ಪ್ರೀತಿಗೆ ಎಂದಿಗೂ ಜಯವಿದ್ದೇ ಇರುತ್ತದೆ ಎಂಬುವುದು ಈ ಘಟನೆಯಿಂದ ಸಾಬೀತಾಗಿದೆ.