Home News ಮಗನನ್ನೇ ಸುಪಾರಿ ಕೊಟ್ಟು ಕೊಂದ ಅಪ್ಪ, ಜೇಬಲ್ಲಿ ಕುಳಿತು ಸಾವಿನ ಕಥೆ ಹೇಳಿದ ‘ ಸುಣ್ಣದ...

ಮಗನನ್ನೇ ಸುಪಾರಿ ಕೊಟ್ಟು ಕೊಂದ ಅಪ್ಪ, ಜೇಬಲ್ಲಿ ಕುಳಿತು ಸಾವಿನ ಕಥೆ ಹೇಳಿದ ‘ ಸುಣ್ಣದ ಡಬ್ಬಿ’ !

Hindu neighbor gifts plot of land

Hindu neighbour gifts land to Muslim journalist

ಸ್ವಂತ ಹೆತ್ತಪ್ಪನೆ ತನ್ನ ಮಗನ ಕೊಲೆಗೆ ಸುಪಾರಿ ನೀಡಿ ತಲೆಗೆ ಕಲ್ಲೆತ್ತಿ ಹಾಕಿಸಿ ಕೊಲೆ ಮಾಡಿಸಿರುವ ಘಟನೆ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ. ಆದರೆ ಈ ಕೊಲೆ ಕೇಸನ್ ಅನ್ನು ಪತ್ತೆ ಮಾಡಲು ಸುಣ್ಣದ ಡಬ್ಬಿಯೊಂದು (Lime stone) ಪೊಲೀಸರಿಗೆ ಸಹಾಯ ಮಾಡಿರುವ ವಿಷಯ ಇದೀಗ ಬಹಿರಂಗವಾಗಿದೆ.

ಬೈಲ ಹೊಂಗಲ ಗ್ರಾಮದ ಕುಟರನಟ್ಟಿ ಸಂಗಮೇಶ ತಿಗಡಿ ಎಂಬ 33 ವರ್ಷದ ಯುವಕನೇ ಕೊಲೆಯಾದ ವ್ಯಕ್ತಿ ಈತನನ್ನು ಮಾರುತೆಪ್ಪ ತಿಗಡಿ ಎಂಬ 72 ವರ್ಷದ ಅಪ್ಪನೇ ಸುಪಾರಿ ಕೊಟ್ಟು ಕೊಲ್ಲಿಸಿದ್ದಾರೆ ಮೊನ್ನೆ ಆಗಸ್ಟ್ 20 ರಂದು ಹಬ್ಬದ ಎಣ್ಣೆ ಹೊಡಿಯೋಣ ಎಂದು ರಾತ್ರಿ ಸಂಗಮೇಶನನ್ನು ಮನೆಗೆ ಕರೆದು ಕಂಠಪೂರ್ತಿ ಕೊಡಿಸಿದ್ದಾನೆ ನಂತರ ಸಂಗಮೇಶ ಸಂಗಮೇಶನನ್ನು ಕುಟರನಟ್ಟಿ ಗ್ರಾಮದ ಹೊರವಲಯದಲ್ಲಿ ಆತನ ತಲೆ ಮೇಲೆ ಕಲ್ಲು ಎತ್ತಿ ಹತ್ಯೆ ಮಾಡಲಾಗಿದೆ.

ಹತ್ತಿಯ ನಂತರ ಅಪರಾಧಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದ ಪೊಲೀಸರ ಕಣ್ಣಿಗೆ ಹತ್ಯೆಯಾದವನ ಕಿಸೆಯಲ್ಲಿ ಒಂದು ಸುಣ್ಣದ ಡಬ್ಬಿ ಸಿಕ್ಕಿದೆ. ಆ ಸುಣ್ಣದ ಡಬ್ಬಿಯು ಆರೋಪಿಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಹತ್ಯೆಯಾದ ಸಂಗಮೇಶನ ಬಳಿ ಮೊಬೈಲ್ ಇರಲಿಲ್ಲ. ಹಾಗಾಗಿ ಮನೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಫೋನ್ ನಂಬರ್ ಅನ್ನು ಸಣ್ಣ ಚೀಟಿಯಲ್ಲಿ ಬರೆದು ಅದನ್ನು ಸುಣ್ಣದ ಡಬ್ಬಿಯಲ್ಲಿ ತುರುಕಿ ಇಟ್ಟುಕೊಂಡಿದ್ದ ಸಂಗಮೇಶ. ಯಾರದೋ ಫೋನ್ ನಂಬರ್ ಸಿಕ್ಕಿದ ಕೂಡಲೆ ಆತನಿಗೆ ಕರೆ ಮಾಡಿ ಆತನನ್ನು ಹಿಡಿದು ವಿಚಾರಿಸಿದ್ದಾರೆ. ಪೊಲೀಸರು ಇಂತದ್ದರಲ್ಲಿ ಎಷ್ಟು ಹುಷಾರು ಅಂದ್ರೆ ಗಂಟೆಗಳಲ್ಲಿ ವಿಚಾರಿಸುವ ರೀತಿಯಲ್ಲಿ ವಿಚಾರಿಸಿದ್ದಾರೆ. ಒಟ್ಟಾರೆ ಕೊಲೆ ಪ್ಲಾಟ್ ಬಯಲಾಗಿದೆ.

ಪೊಲೀಸರ ವಿಚಾರಣೆಯ ಮೇಲೆ ತನ್ನ ಮಗನನ್ನೇ ಅಪ್ಪ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ವಿಷಯ ಬಹಿರಂಗವಾಗಿದೆ. ಮಗ ಸಂಗಮೇಶನಿಗೆ ಕುಡಿಯುವ ಚಟವಿತ್ತು. ಅಷ್ಟೇ ಅಲ್ಲ, ಮಗ ದಿನನಿತ್ಯ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಸಂಗಮೇಶನ ಈ ವರ್ತನೆಯನ್ನು ನೋಡಿ ನೋಡಿ ಬೇಸತ್ತ ಅಪ್ಪ ಮಾರುತೆಪ್ಪ ಪುತ್ರನನ್ನು ಕೊಲ್ಲಲು ಮನೆ ಕೆಲಸ ಮಾಡಿಕೊಳ್ಳುತ್ತಿದ್ದ ಮಂಜುನಾಥನಿಗೆ ಸುಪಾರಿ ನೀಡಿದ್ದಾನೆ. ಬಳಿಕ ಮಂಜುನಾಥ ಹಾಗೂ ಆತನ ಸ್ನೇಹಿತ ಅಡಿವೆಪ್ಪ ಬೋಳತ್ತಿನ್ ಸಹಾಯ ಬೇಡಿದ್ದಾರೆ. ಇದೀಗ ಮಗನನ್ನು ಕೊಲ್ಲಿಸಿ, ಅಪ್ಪ ಮತ್ತು ಕೊಂದ ಆ ಇಬ್ಬರೂ ಜೈಲು ಪಾಲಾಗಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.