Home News Raha Kapoor: ಮಗಳ ಫೋಟೋ ತೆಗೆದರೆ ಕಾನೂನು ಕ್ರಮ; ಆಲಿಯಾ ಭಟ್‌ ಖಡಕ್‌ ವಾರ್ನಿಂಗ್

Raha Kapoor: ಮಗಳ ಫೋಟೋ ತೆಗೆದರೆ ಕಾನೂನು ಕ್ರಮ; ಆಲಿಯಾ ಭಟ್‌ ಖಡಕ್‌ ವಾರ್ನಿಂಗ್

Hindu neighbor gifts plot of land

Hindu neighbour gifts land to Muslim journalist

Raha Kapoor: ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ದಂಪತಿ ಮಗಳು ರಾಹಾ ಸುರಕ್ಷತೆಗಾಗಿ ಪೋಷಕರು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮಗಳ ಫೊಟೋ ಕ್ಲಿಕ್‌ ಮಾಡಬೇಡಿ, ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಲಿಯಾ ಪಾಪರಾಜಿಗಳಿಗೆ ಖಡಕ್ಕಾಗಿ ಹೇಳಿದ್ದಾರೆ.

ಮಾ.15 ರಂದು ಆಲಿಯಾ 32 ನೇ ವರ್ಷದ ಬರ್ತ್‌ಡೇ ಸೆಲೆಬ್ರೇಷನ್‌ ಮಾಡುತ್ತಿದ್ದಾರೆ. ಈ ಕಾರಣದಿಂದ ಎರಡು ದಿನ ಮುಂಚಿತವಾಗಿಯೇ ಅಂದರೆ ಮಾ.13 ರಂದು ಮಾಧ್ಯಮಗಳ ಜೊತೆ ಹುಟ್ಟುಹಬ್ಬವನ್ನು ನಟಿ ಆಚರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಆಲಿಯಾ, ಯಾರೂ ಕೂಡಾ ತಮ್ಮ ಮಗಳ ಫೋಟೋ ತೆಗೆಯಬಾರದು, ಅನಧಿಕೃತವಾಗಿ ಬಳಸಬಾರದು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಮಾತು ಕೇಳದೇ ಇದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೇ ಬೇರೆ ಯಾವುದೇ ಆಯ್ಕೆ ಇಲ್ಲ ಎಂದು ಹೇಳಿದ್ದಾರೆ.