Home News Leela-Manju: ಲೀಲಾ-ಮಂಜುಗೆ ಮತ್ತೆ ಮದುವೆ ಮಾಡಿಸಿದ ನ್ಯೂಸ್ ಚಾನಲ್ !! ಸೀರೆ, ಪಂಚೆ ಉಟ್ಟು ಕಂಗೊಳಿಸಿದ...

Leela-Manju: ಲೀಲಾ-ಮಂಜುಗೆ ಮತ್ತೆ ಮದುವೆ ಮಾಡಿಸಿದ ನ್ಯೂಸ್ ಚಾನಲ್ !! ಸೀರೆ, ಪಂಚೆ ಉಟ್ಟು ಕಂಗೊಳಿಸಿದ ಜೋಡಿ

Hindu neighbor gifts plot of land

Hindu neighbour gifts land to Muslim journalist

Leela-Manju: ಕೆಲವು ತಿಂಗಳ ಹಿಂದೆ ನಾಡಿನಾದ್ಯಂತ ಮಂಜು ಮತ್ತು ಲೀಲಾ ಎಂಬ ದಂಪತಿಗಳ ಜಗಳ ಬೀದಿ ರಂಪವಾಗಿತ್ತು. ಹೆಂಡತಿ ಲೀಲಾ ತನ್ನ ಪ್ರಿಯತಮನೊಂದಿಗೆ ಎಸ್ಕೇಪ್ ಆಗಿ ಗಂಡ ಮತ್ತು ಮಕ್ಕಳಿಗೆ ಸಾಕಷ್ಟು ರೋದನೆ ಕೊಟ್ಟಿದ್ದಳು. ಬಳಿಕ ಮಂಜು ಟಿವಿ, ಚಾನೆಲ್ಗಳಲ್ಲಿ ಬಂದು ‘ ಬಂದುಬಿಡು ಲೀಲಾ, ಮುದ್ದು, ಚಿನ್ನು, ಬಂಗಾರಿ’ ಎಂದೆಲ್ಲಾ ಗೋಗರೆದಿದ್ದರು. ತನ್ನ ಸಂಬಂಧದ ವಿಚಾರ ಇಡೀ ರಾಜ್ಯಕ್ಕೆ ಗೊತ್ತಾದರೂ ಕೂಡ ಲೀಲ ಮಾತ್ರ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಆದರೆ ಇದೀಗ ಮಕ್ಕಳಿಗೋಸ್ಕರ ಮಂಜು ಮತ್ತು ಲೀಲಾ ಮತ್ತೆ ಒಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ನ್ಯೂಸ್ ಚಾನೆಲ್ ನಲ್ಲಿ ಈ ಇಬ್ಬರಿಗೆ ಮತ್ತೆ ಮದುವೆ ಮಾಡಿಸಿ ಶುಭ ಹಾರೈಸಲಾಗಿದೆ.

ಹೌದು, ಕಳೆದ ಸಲ ಈ ಇಬ್ಬರು ದಂಪತಿಗಳ ವಿಚಾರ ಗ್ಯಾರಂಟಿ ನ್ಯೂಸ್ ಮುಖಾಂತರ ನಾಡಿನಾದ್ಯಂತ ಬಿತ್ತರವಾಗಿತ್ತು. ಮಾಧ್ಯಮದ ನಿರೂಪಕರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರು ಕೂಡ ಈ ಜೋಡಿ ಒಂದಾಗಿರಲಿಲ್ಲ. ಲೀಲಾ, ನನಗೆ ಸಂತೋಷ್ ಬೇಕು ಎಂದು ಹಠ ಹಿಡಿದು ಸಂತೋಷ್ ಹಿಂದೆ ಹೋಗಿದ್ದಳು. ಮಕ್ಕಳನ್ನು ಕಂಡು ಇಡೀ ನಾಡಿನ ಜನರು ಮರುಗಿದ್ದರು. ಆದರೆ ಇದೀಗ ಕೆಲವು ವಿಚಾರಗಳಿಂದ ಲೀಲಾ ಮತ್ತು ಮಂಜು ಮತ್ತೆ ಒಂದಾಗಿದ್ದಾರೆ.

ಈ ಸಂತಸದ ವಿಚಾರ ತಿಳಿಯುತ್ತಿದ್ದಂತೆ ಮತ್ತೆ ಗ್ಯಾರಂಟಿ ನ್ಯೂಸ್ ಚಾನೆಲ್ ಇವರಿಬ್ಬರನ್ನು ತಮ್ಮ ಸ್ಟುಡಿಯೋಗೆ ಕರೆಸಿಕೊಂಡು ಸಂತಸವನ್ನು ವ್ಯಕ್ತಪಡಿಸಿದೆ. ಅಲ್ಲದೆ ಇಬ್ಬರಿಗೆ ಹೊಸ ಬಟ್ಟೆಗಳನ್ನು ತೊಡಿಸಿ, ಹೂ ಮುಡಿಸಿ, ಹಾರ ಬದಲಿಸಿ ಹೊಸದಾಗಿ ಮದುವೆ ಮಾಡಿಸಿ ಮುಂದಿನ ದಾಂಪತ್ಯ ಜೀವನಕ್ಕೆ ಶುಭ ಹಾರೈಸಲಾಗಿದೆ. ಅನೇಕ ಜನರು ಮಾಧ್ಯಮದ ಈ ನಡೆಯನ್ನು ಮೆಚ್ಚಿಕೊಂಡು ತಾವು ಕೂಡ ಲೀಲಾ ಮತ್ತು ಮಂಜುಗೆ ಶುಭ ಕೋರಿದ್ದಾರೆ.