Home News Lawyer Jagadish: ಜೈಲಿನಿಂದ ರಿಲೀಸ್‌ ಆದ ಲಾಯರ್‌ ಜಗದೀಶ್‌!

Lawyer Jagadish: ಜೈಲಿನಿಂದ ರಿಲೀಸ್‌ ಆದ ಲಾಯರ್‌ ಜಗದೀಶ್‌!

Hindu neighbor gifts plot of land

Hindu neighbour gifts land to Muslim journalist

Lawyer Jagadish: ಕೊಡಿಗೆಹಳ್ಳಿಯಲ್ಲಿ ಅಣ್ಣಮ್ಮ ಕೂರಿಸೋ ವಿಚಾರದಲ್ಲಿ ಅಲ್ಲಿನ ಸ್ಥಳೀಯರ ಜೊತೆ ಜಗದೀಶ್‌ ಅವರು ಗಲಾಟೆಗೆ ಸಂಬಂಧಪಟ್ಟಂತೆ ಜೈಲು ಸೇರಿದ್ದ ಜಗದೀಶ್‌ ಅವರು ಈಗ ಜಾಮೀನು ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಇನ್ನಷ್ಟು ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಜಗದೀಶ್‌ ಅವರಿಗೆ ಜಾಮೀನು ಸಿಕ್ಕಿದೆ ಎಂದು ಅವರ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ನಮಸ್ತೆ ಕರ್ನಾಟಕ,

ನಾನು ಕೆ.ಎನ್. ಜಗದೀಶ್ ಕುಮಾರ್, ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ,

• PSI ಹಗರಣವನ್ನು ಬಯಲು ಮಾಡಿದ್ದು ,

• ADGP ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ಟೀಂ,

• ದೊಡ್ಡ ರಾಜಕಾರಣಿಗಳ ಸೆಕ್ಸ್ ಸ್ಕ್ಯಾಂಡನ್ನು ಬಹಿರಂಗಪಡಿಸಿದ್ದು ,

• ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು ,

• ಟ್ರಾಫಿಕ್ ಟೋವಿಂಗ್ ಸಿಸ್ಟಂ ಅನ್ನು ನಿಲ್ಲಿಸಿದ್ದು ,

• ಕೊಡಿಗೆಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ಧು

ಇವೆಲ್ಲವೂ ನನ್ನ ಹೋರಾಟದ ಭಾಗ!

ಈ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆ, ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, 25/01/2025 ರಂದು ಸ್ಥಳಿಯ ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು.

ಇವತ್ತಿಗೆ 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ಜಾಮೀನು ಲಭಿಸಿದೆ.

ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ!

ನಾನು ಶರಣಾಗುವುದಿಲ್ಲ!

ಜೈ ಕರ್ನಾಟಕ!