Home News Environment: ಪ್ರಕೃತಿಯ ಸಂರಕ್ಷಣೆಗೆ ಕಾನೂನಿನ ಕರೆ: ಅವೈಜ್ಞಾನಿಕ ಮಣ್ಣು ಅಗೆತದ ವಿರುದ್ಧ ಕ್ರಮದ ಅಗತ್ಯ

Environment: ಪ್ರಕೃತಿಯ ಸಂರಕ್ಷಣೆಗೆ ಕಾನೂನಿನ ಕರೆ: ಅವೈಜ್ಞಾನಿಕ ಮಣ್ಣು ಅಗೆತದ ವಿರುದ್ಧ ಕ್ರಮದ ಅಗತ್ಯ

Hindu neighbor gifts plot of land

Hindu neighbour gifts land to Muslim journalist

Environment: ದ.ಕ ಜಿಲ್ಲೆಯಲ್ಲಿ ಮಳೆಗಾಲ ಇನ್ನೂ ಐದು ತಿಂಗಳು ಇದೆ. ಆದರೆ, ಜೆಸಿಬಿಗಳು ಭೂವಿಜ್ಞಾನ ಇಲಾಖೆಯ ಅನುಮತಿಯಿಲ್ಲದೆ ಕಂಡಕಂಡಲ್ಲಿ ಮಣ್ಣು ತೆಗೆಯುತ್ತಿವೆ. ರಸ್ತೆ ನಿರ್ಮಾಣದ ನೆಪದಲ್ಲಿ ಪ್ರಕೃತಿಯ ವಿರುದ್ಧವಾಗಿ ನಡೆಯುತ್ತಿರುವ ಈ ಅವೈಜ್ಞಾನಿಕ ಕೃತ್ಯಗಳು ಪರಿಸರಕ್ಕೆ ತೀವ್ರ ಧಕ್ಕೆ ತಂದಿವೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಮುಗ್ಧ ಜೀವಗಳು ಈ ಅನಿಯಂತ್ರಿತ ಕೃತ್ಯಗಳಿಗೆ ಬಲಿಯಾಗಿವೆ.

ಕೃಷಿ ಭೂಮಿಯ ಸಂರಕ್ಷಣೆ ಮತ್ತು ಜಲಾಶಯಗಳ ರಕ್ಷಣೆಗಾಗಿ ಇರುವ ಕಾನೂನುಗಳಾದ ಕೃಷಿ ಭೂಮಿ ಸಂರಕ್ಷಣಾ ಕಾಯಿದೆ ಮತ್ತು Wetland Act ಅನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಅಗತ್ಯವಿದೆ. ಜನರ ಹಿತಾಸಕ್ತಿ ಬಯಸುವ ಮನೆ ಮನೆಗೆ ಮತ ಕೇಳಲು ಹೋಗುವ ಶಾಸಕರು, ಸಂಸದರು ನಿರಂತರ ಪತ್ರ ಹಾಗೂ ಮಾಧ್ಯಮ‌ ಗೋಷ್ಠಿ ಕರೆದು ಸರಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ. ಅಧಿಕಾರಿಗಳ ಕೆಲಸದ ಮೇಲೆ ಕಣ್ಣು ಇಡಬೇಕಾಗಿದೆ. ಅದು ಅವರ ಕರ್ತವ್ಯ. ತಾಲೂಕು ದಂಡಾಧಿಕಾರಿಗಳು, ಉಪ ವಿಭಾಗದ ದಂಡಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಸರಕಾರದಿಂದ ನೀಡಲಾದ ಅಧಿಕಾರವನ್ನು ಚಲಾಯಿಸಿ, ಈ ಅಕ್ರಮಗಳಿಗೆ ಕಡಿವಾಣ ಹಾಕಬೇಕು.

ಜಿಲ್ಲೆಯ ಪ್ರಬುದ್ಧ ಜನರು, ವಿರೋಧ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಆಡಳಿತ ಯಂತ್ರವನ್ನು ಎಚ್ಚರಿಸಬೇಕು. ಉನ್ನತ ಮಟ್ಟದ ಅಧಿಕಾರಿಗಳಿಗೆ ಒತ್ತಡ ಹೇರಿ, ಈ ಅವೈಜ್ಞಾನಿಕ ಚಟುವಟಿಕೆಗಳನ್ನು ತಡೆಗಟ್ಟುವ ಮೂಲಕ ಪರಿಸರವನ್ನು ಮತ್ತು ಜನರ ಜೀವಗಳನ್ನು ಉಳಿಸುವ ಕೆಲಸವನ್ನು ತುರ್ತಾಗಿ ಕೈಗೊಳ್ಳಬೇಕು.

ಪ್ರಕೃತಿಯ ಸಂರಕ್ಷಣೆ ಎಂಬುದು ಎಲ್ಲರ ಜವಾಬ್ದಾರಿಯಾಗಿದೆ. ಈಗ ಕಾರ್ಯಪ್ರವೃತ್ತರಾಗದಿದ್ದರೆ, ಭವಿಷ್ಯದಲ್ಲಿ ಎದುರಾಗುವ ಪರಿಣಾಮಗಳು ತೀವ್ರವಾಗಿರಲಿವೆ. ಕಾನೂನಿನ ಕಠಿಣ ಜಾರಿ ಮತ್ತು ಜನರ ಒಗ್ಗಟ್ಟಿನಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕ್ರಮಕ್ಕೆ ಕಾಲ ಕೂಡಿಬಂದಿದೆ, ಈಗಲೇ ಎಚ್ಚರಿಕೆಯಾಗಿ!