Home News Dr Bro: ಕನ್ನಡಿಗರ ಮನಗೆದ್ದ ಡಾ. ಬ್ರೋಗೆ ದೇಶ ದ್ರೋಹಿ ಪಟ್ಟ !! ಅರೇ.. ಎಲ್ಲರ...

Dr Bro: ಕನ್ನಡಿಗರ ಮನಗೆದ್ದ ಡಾ. ಬ್ರೋಗೆ ದೇಶ ದ್ರೋಹಿ ಪಟ್ಟ !! ಅರೇ.. ಎಲ್ಲರ ನೆಚ್ಚಿನ ‘ಬ್ರೋ’ ಮಾಡಿದ ತಪ್ಪೇನು ?!

Dr Bro

Hindu neighbor gifts plot of land

Hindu neighbour gifts land to Muslim journalist

Dr Bro: ಯೂಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಡಾ ಬ್ರೋ ಚಿರಪರಿಚಿತ. ಚಿಕ್ಕ ವಯಸ್ದಸಿಗೆ ದೇಶ ವಿದೇಶ ಸುತ್ತುವ ಈತನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಯುಟ್ಯೂಬ್ (YouTube) ನಲ್ಲಿ ಡಾ .ಬ್ರೋ (Dr Bro) ಅಂತಾನೆ ಫೇಮಸ್ (Famous)​ ಆಗಿರುವ ಇವರು ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನೇ (World) ತೋರಿಸುತ್ತಾರೆ.

ಅಂತೆಯೇ ಇತ್ತೀಚೆಗೆ ಚೀನಾಕ್ಕೆ ಹೋಗಿದ್ದ ಕನ್ನಡದ ಪ್ರಸಿದ್ಧ ಯೂಟ್ಯೂಬರ್‌ ಹಾಗೂ ಪ್ರವಾಸಿಗ ಡಾ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌ ಭಾರತೀಯನಾಗಿ ಚೀನಾವನ್ನು ಹೊಗಳಿದ್ದಾರೆ. ಸದ್ಯ ಡಾ ಬ್ರೋ ಚೀನಾವನ್ನು ಹೊಗಳಿದ್ದಕ್ಕಾಗಿ ಅವರಿಗೆ ಈಗ ಕೆಲವರು ದೇಶದ್ರೋಹಿ ಎನ್ನುವ ಪಟ್ಟ ಕಟ್ಟಿದ್ದಾರೆ.

ಚೀನಾದ ಬೀಜಿಂಗ್‌ನಲ್ಲಿ ವೀಡಿಯೋ ಮಾಡುತ್ತಾ ಮಾತನಾಡಿರುವ ಡಾ ಬ್ರೋ, ಮುಂದುವರೆದ ದೇಶದ ಮಕ್ಕಳೆಲ್ಲಾ ಸ್ಕೂಲ್ ಕಾಲೇಜ್ ಗಳಲ್ಲಿ, ಹೊಸ ಹೊಸ ಸ್ಕಿಲ್‌ (skill) ಕಲಿತರೆ , ನಮ್ಮ ಮಕ್ಕಳು ಜಾತಿ ಧರ್ಮ ಅಂತ ಕಿತ್ತಾಡ್ತಾವೇ. ನಾವು ಈಗಿರುವ ಚೀನಾ ಮಟ್ಟಕ್ಕೆ ಹೋಗಬೇಕಾದರೆ, ಇನ್ನೂ ಕನಿಷ್ಟ 70 ವರ್ಷ ಬೇಕು ಅಂದ್ರೆ, ಆಗ ಚೀನಾ ಇನ್ನೆಲ್ಲಿಗೆ ಹೋಗಿರುಂತೆ ಯೋಚಿಸಿ. ಜಾತಿ ಧರ್ಮ ಅನ್ನುವ ನಂಜು ಬಿಟ್ಟು ಹೊರಬನ್ನಿ ಎಂದು ಹೇಳಿದ್ದಾರೆ. ಆದರೆ, ಭಾರತೀಯನಾಗಿ ಚೀನಾಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಹೊಗಳಿದ ಡಾ. ಬ್ರೋಗೆ ದೇಶದ್ರೋಹಿ ಪಟ್ಟ ಕಟ್ಟಿದ್ದಾರೆ.

ವಿಭಿನ್ನ ವಿವಿಧ ಕಾಮೆಂಟ್ ಗಳು ವ್ಯಕ್ತವಾಗಿದೆ. ಕೆಲವರು ನಮ್ಮ ದೇಶ ಚೀನಾ ಮಟ್ಟಕ್ಕೆ ತಲುಪಲು ಇನ್ನೂ 100 ವರ್ಷ ಬೇಕು. ಹುಟ್ಟಿದ್ ತಕ್ಷಣ ಕಲಿಸೋದೆ ಗುಲಾಮಗಿರಿ. ಇರೋದನ್ನು ಇರೋ ಹಾಗೆ ಹೇಳಿದ್ರು ನಮ್ ಜನಕ್ಕೆ ಅರ್ಥ ಆಗಲ್ಲ ಬಿಡಿ ಮತ್ತೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹೀಗೇ ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಇದನ್ನು ಓದಿ: Ration: ಆಧಾರ್ ಕಾರ್ಡ್ ಹೊಂದಿರೋರು ಕೂಡಲೇ ಈ ಕೆಲಸ ಮಾಡಿಸಿ- ಬಳಿಕ ದೇಶದ ಯಾವುದೇ ಮೂಲೆಯಲ್ಲೂ ರೇಷನ್ ಪಡೆಯಬಹುದು !