Home News Uttara Kannada: 6ರ ಪೋರನೋರ್ವನಿಂದ ವಿಷಕಾರಿ ಕಾಳಿಂಗ ಸರ್ಪದೊಡನೆ ಆಟ! ವೀಡಿಯೋ ವೈರಲ್‌

Uttara Kannada: 6ರ ಪೋರನೋರ್ವನಿಂದ ವಿಷಕಾರಿ ಕಾಳಿಂಗ ಸರ್ಪದೊಡನೆ ಆಟ! ವೀಡಿಯೋ ವೈರಲ್‌

Uttara Kannada
image source: Kannada news

Hindu neighbor gifts plot of land

Hindu neighbour gifts land to Muslim journalist

Uttara Kannada: ಧಮ್ ಇದ್ರೆ ಈ ರೀತಿ ತೋರಿಸ್ಬೇಕು. ಆದ್ರೆ ಹೃದಯ ಬಡಿತ ಒಂದು ಕ್ಷಣ ನಿಂತು ಹೋಗುತ್ತೆ, ಹೌದು, ಕೈಯ್ಯಲ್ಲಿ ಹಗ್ಗ ಹಿಡಿದಂತೆ ಹಾವು ಹಿಡೀತಾ ಎಂಜಾಯ್ ಮಾಡುತ್ತಿದ್ದಾನೆ ನೋಡಿ ಈ ಚೋಟುದ್ದ ಪೋರ! ಧೈರ್ಯ ಅಂದ್ರೆ ಇದೇ ಇರಬೇಕಲ್ವಾ?

ಕೇವಲ ಒಂದನೇ ಕ್ಲಾಸ್ ಹುಡುಗ ನಗು ನಗುತ್ತಾ ಸಣ್ಣ ಹಾವಿನಿಂದ ಹಿಡಿದು ಹೆಬ್ಬಾವು, ಕಾಳಿಂಗವನ್ನೇ ಪಳಗಿಸಿ, ಆಟವಾಡಿಸುತ್ತಾನೆ.

ಈ ಹುಡುಗ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಕೆಎಚ್ ಬಿ ಕಾಲೋನಿಯ ನಿವಾಸಿ ಉರಗ ರಕ್ಷಕರಾದ ಪ್ರಶಾಂತ್ ಹುಲೇಕರ್ ರ ಮಗ ವಿರಾಜ್. ಕೆಎಚ್ ಬಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾನೆ.

ವಿದ್ಯಾಭ್ಯಾಸದ ಜೊತೆಗೆ ವಿರಾಜ್‌ ಕಳೆದ ಎರಡು ವರ್ಷದಿಂದ ಅಪ್ಪನೊಂದಿಗೆ ಹಾವಿನ ಬಗ್ಗೆ ಕಲಿಯಲು, ಬೆರೆಯಲು ಆರಂಭಿಸಿದ್ದಾನೆ. ಈಗಂತೂ ಹಾವು ಹಿಡಿಯೋದನ್ನೂ ಕಲಿತು ಕರಗತ ಮಾಡಿಕೊಳ್ತಿದ್ದಾನೆ. ಆದ್ರೆ ಅಪ್ಪನ ಸಹಕಾರ, ಮಾರ್ಗದರ್ಶನ ಪಡೆದೇ ವಿರಾಜ್‌ ಯಾವತ್ತಿದ್ರೂ ಹಾವು ಪಳಗಿಸುತ್ತಾನೆ.

ಅದೆಷ್ಟೇ ವಿಷಸರ್ಪಗಳಾದರೂ ಅವುಗಳನ್ನ ಪಳಗಿಸುವ ಕಲೆ ವಿರಾಜ್‌ ಬಳಿಯಿದೆ. ಒಟ್ಟಿನಲ್ಲಿ ಪುಟ್ಟ ಬಾಲಕನಾದರೂ ಹಾವಿನ ಜೊತೆಗೆ ಸರಸವಾಡುತ್ತಾ, ಪ್ರಕೃತಿಯ ಜೊತೆಗೆ ಬೆರೆಯುವ ಈತನ ಈ ಸಾಹಸವನ್ನ ಮೆಚ್ಚಲೇಬೇಕು.