Home News Vande Bharat Express: ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಪ್ರಯಾಣದ ರೂಟ್...

Vande Bharat Express: ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಪ್ರಯಾಣದ ರೂಟ್ ಮತ್ತು ಸ್ಪೀಡ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!

Vande Bharat Express
image source: Times of india

Hindu neighbor gifts plot of land

Hindu neighbour gifts land to Muslim journalist

Vande Bharat Express: ಬೆಂಗಳೂರು-ಧಾರವಾಡ (Bengaluru-Dharwad) ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್​​ ಮೂಲಕ ಚಾಲನೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭೋಪಾಲ್‌ನ ರಾಣಿ ಕಮಲಾಪಥಿ ರೈಲ್ವೆ ನಿಲ್ದಾಣದಿಂದ ವರ್ಚುವಲ್​​ ಮೂಲಕ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್ (Vande Bharat Express) ರೈಲು ಸಂಚಾರದ ಸಮಯ, ಟಿಕೆಟ್​ ದರ ಇಲ್ಲಿದೆ. ಇನ್ನು ರೈಲು ಪ್ರಾಯಾಣದ ರೂಟ್ ಮತ್ತು ಸ್ಪೀಡ್ ಕೇಳಿದ್ರೆ ನೀವು ಬೆಚ್ಚಿ ಬೀಳ್ತಿರಾ!!.

ದೇಶದ ವಿವಿಧೆಡೆ ಒಟ್ಟು 5 ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಬೆಂಗಳೂರು ಹುಬ್ಬಳ್ಳಿ ವಂದೇ ಭಾರತ್ ರೈಲು ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಿಲ್ಲಲಿದೆ.
ಜೊತೆಗೆ ಇಂದು ಮುಂಬೈ-ಗೋವಾ, ಭೋಪಾಲ್-ಇಂಧೋರ್, ಪಾಟ್ನಾ-ರಾಂಚಿ, ಭೋಪಾಲ್-ಜಬಲ್ಪುರ ವಂದೇ ಭಾರತ್ ರೈಲುಗಳು ಸಹ ಆರಂಭವಾಗಲಿವೆ.

ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ (20661/20662) ವಾರದಲ್ಲಿ ಆರು ದಿನ ಕಾರ್ಯ ನಿರ್ವಹಿಸುತ್ತದೆ.
ಮಂಗಳವಾರ ಈ ರೈಲಿನ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. ನಾಳೆಯಿಂದ (ಜೂ.28) ಅಧಿಕೃತ ಸಂಚಾರ ಆರಂಭವಾಗಲಿದೆ. ಆಗ ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ. ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್​​ ರೈಲು ಸದ್ಯಕ್ಕೆ 530 ಆಸನಗಳನ್ನು ಒಳಗೊಂಡ 8 ಬೋಗಿಗಳನ್ನು ಹೊಂದಿದೆ. ಈ ರೈಲು 489 ಕಿಮಿ ಮಾರ್ಗವನ್ನು ಗಂಟೆಗೆ 110 ಕಿಮಿ ವೇಗದಲ್ಲಿ ಚಲಿಸುತ್ತದೆ.
ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ದರವು ಊಟ ಮತ್ತು ತಿಂಡಿಗಳನ್ನು ಒಳಗೊಂಡಿರುತ್ತದೆ.

ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸಪ್ರೆಸ್​ ರೈಲಿನ ಸಮಯ ಹೀಗಿದೆ :-
ಬೆಳಗ್ಗೆ 5.45 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ವಂದೇ ಭಾರತ್ ರೈಲು, ಮುಂಜಾನೆ 5.57 ಕ್ಕೆ ಯಶವಂತಪುರ, 9.17 ಕ್ಕೆ ದಾವಣಗೆರೆ, 11.35ಕ್ಕೆ ಎಸ್‌ಎಸ್ಎಸ್ ಹುಬ್ಬಳ್ಳಿ, ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ. ಮರಳಿ ಧಾರವಾಡ ನಿಲ್ದಾಣದಿಂದ ಮಧ್ಯಾಹ್ನ 1.35ಕ್ಕೆ ಹೊರಟು, 1.40 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ, 3.40ಕ್ಕೆ ದಾವಣಗೆರೆ, ರಾತ್ರಿ 7.15ಕ್ಕೆ ಯಶವಂತಪುರ ಹಾಗೂ 7.45 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.

ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್​ ರೈಲಿನ ಟಿಕೆಟ್​ ದರ ಹೀಗಿದೆ:-
ರೈಲು ಸಂಖ್ಯೆ- 20661
ಬೆಂಗಳೂರು-ಧಾರವಾಡ ಎಸಿ ಚೇರ್​ ದರ ರೂ.- 1165, ಎಕ್ಸಿಕ್ಯೂಟಿವ್ ಕ್ಲಾಸ್ ದರ ರೂ. – 2010, ಬೆಂಗಳೂರು-ಹುಬ್ಬಳ್ಳಿ ಎಸಿ ಚೇರ್​ ದರ ರೂ.- 1135, ಎಕ್ಸಿಕ್ಯೂಟಿವ್ ಕ್ಲಾಸ್ ದರ ರೂ -2180, ಬೆಂಗಳೂರು-ದಾವಣಗೆರೆ ಎಸಿ ಚೇರ್​ ದರ ರೂ- 915, ಎಕ್ಸಿಕ್ಯೂಟಿವ್ ಕ್ಲಾಸ್ ದರ ರೂ- 1740, ದಾವಣಗೆರೆ-ಧಾರವಾಡ ಎಸಿ ಚೇರ್​ ದರ ರೂ- 535, ಎಕ್ಸಿಕ್ಯೂಟಿವ್ ಕ್ಲಾಸ್ ದರ ರೂ- 1055 ಇರಲಿದೆ.

ರೈಲು ಸಂಖ್ಯೆ – 20662
ಧಾರವಾಡ-ಬೆಂಗಳೂರು ಎಸಿ ಚೇರ್​ ರೂ -1330, ಎಕ್ಸಿಕ್ಯೂಟಿವ್ ಕ್ಲಾಸ್ ರೂ- 2440, ಹುಬ್ಬಳ್ಳಿ-ಬೆಂಗಳೂರು ಎಸಿ ಚೇರ್​ ರೂ – 1300, ಎಕ್ಸಿಕ್ಯೂಟಿವ್ ಕ್ಲಾಸ್ ರೂ- 2375, ದಾವಣಗೆರೆ-ಬೆಂಗಳೂರು ಎಸಿ ಚೇರ್​ ರೂ – 860, ಎಕ್ಸಿಕ್ಯೂಟಿವ್ ಕ್ಲಾಸ್ ರೂ- 1690, ಧಾರವಾಡ-ದಾವಣಗೆರೆ ಎಸಿ ಚೇರ್​ ರೂ – 745, ಎಕ್ಸಿಕ್ಯೂಟಿವ್ ಕ್ಲಾಸ್ ರೂ- 1282 ಆಗಿದೆ.