Home News Snake garden video: ಹೂವಿನ ಬದಲು ರಾಶಿ ರಾಶಿ ಹಾವುಗಳನ್ನು ಬಿಡೋ ಅಪರೂಪದ ಮರ !...

Snake garden video: ಹೂವಿನ ಬದಲು ರಾಶಿ ರಾಶಿ ಹಾವುಗಳನ್ನು ಬಿಡೋ ಅಪರೂಪದ ಮರ ! ವೈರಲ್ ವೀಡಿಯೋ !

Snake garden video

Hindu neighbor gifts plot of land

Hindu neighbour gifts land to Muslim journalist

Snake garden video: ಮನೆಯ ಮುಂದೆ ಒಂದು ಉದ್ಯಾನವಿದ್ದರೆ ಎಷ್ಟು ಚಂದ ಅಲ್ವಾ. ಉದ್ಯಾನವನವು ಮನೆಗೂ ಕಳೆ ನೀಡುತ್ತದೆ ಮತ್ತು ನಮ್ಮ ಮನಸ್ಸಿಗೂ ಮುದ ನೀಡುತ್ತದೆ. ಗಿಡ-ಮರಗಳು ಹೂವು ಹಣ್ಣುಗಳನ್ನು ಬಿಡುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಇಲ್ಲೊಂದು ಮರವಿದೆ ಇದು ಬಿಡುವುದು ಹೂವು ಹಣ್ಣುಗಳನ್ನಲ್ಲ ಬದಲಾಗಿ ರಾಶಿ ರಾಶಿ ಹಾವುಗಳನ್ನ!….

ಹೌದು, ವಿಯೆಟ್ನಾಂನಲ್ಲಿ (Vietnam) ವಿಶಿಷ್ಟವಾದ ಹಾವಿನ ಉದ್ಯಾನವಿದೆ(Snake garden video). ಇದನ್ನು ಟ್ರೈ ರಾನ್ ಡಾಂಗ್ ಟಾಮ್ ಎಂದು ಕರೆಯಲಾಗುತ್ತದೆ. ಈ ಫಾರ್ಮ್ 12 ಹೆಕ್ಟೇರ್‌ಗಳಷ್ಟು ವಿಸ್ತಾರವಾಗಿದ್ದು, ಈ ಉದ್ಯಾನದ ಗಿಡಗಳ ತುಂಬಾ ಹೂವು ಹಣ್ಣುಗಳಿಗಿಂತಲೂ(fruits) ಹೆಚ್ಚಾಗಿ ಬರೀ ಹಾವುಗಳೇ ತುಂಬಿ ತುಳುಕುತ್ತಿರುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರಿನ್ ಡ್ಯಾಂಗ್ ಟಾಮ್ ಹಾವಿನ ಸಾಕಣೆಯ ವಿಡಿಯೋ ವೈರಲ್ ಆಗಿದೆ.

ಹಾವು(snake) ಎಂದಾಕ್ಷಣ ಮೈ ಬೆವತು ಹೋಗುತ್ತದೆ ಅಂತಹದರಲ್ಲಿ ಈ ಉದ್ಯಾನವನದಲ್ಲಿ ಒಂದಲ್ಲ ಎರಡಲ್ಲ ಸಾವಿರಾರು ಹಾವುಗಳು ಮರದ ತುಂಬಾ ನೇತಾಡಿಕೊಂಡಿರುತ್ತದೆ. ಇಲ್ಲಿರುವ ಸಸಿಯ ರೆಂಬೆ ಕೊಂಬೆಗಳಲ್ಲಿ ಹಣ್ಣುಗಳ ಬದಲಿಗೆ ಹಾವುಗಳಿವೆ. ಕೊಂಬೆಗಳ ಮೇಲೆ ಹಾವು ನೇತಾಡುತ್ತದೆ. ಇಲ್ಲಿಗೆ ಭೇಟಿಯಾಗುವ ಪ್ರವಾಸಿಗರು ಒಂದು ಕ್ಷಣ ಬೆಕ್ಕಸ ಬೆರಗಾಗುವುದು ಖಂಡಿತ.

ಈ ಹಾವಿನ ಗಾರ್ಡನ್(snake garden) ಬಹಳ ವಿಶೇಷವಾದದ್ದು. ಏಕೆಂದರೆ 400ಕ್ಕೂ ಹೆಚ್ಚು ಜಾತಿಯ ವಿಷಕಾರಿ ಹಾವುಗಳು ಈ ಜಮೀನಿನಲ್ಲಿ ವಾಸಿಸುತ್ತಿವೆ. ಈ ಹಾವುಗಳನ್ನು ಅವುಗಳ ವಿಷಕ್ಕಾಗಿಯೇ ಈ ಉದ್ಯಾನವನದಲ್ಲಿ ಸಾಕಲಾಗುತ್ತದೆ. ಇದನ್ನು ಔಷಧಗಳು (medicine) ಮತ್ತು ಆಂಟಿ ಡಾಟ್ಸ್ ಉತ್ಪಾದಿಸಲು ಬಳಸಲಾಗುತ್ತದೆ. ಜಮೀನಿನಲ್ಲಿ ಕಂಡುಬರುವ ಬಹುತೇಕ ಹಾವು ಪ್ರಭೇದಗಳಿಗೆ ಆಂಟಿ ಡಾಟ್ಸ್ ಗಳನ್ನೂ ಯಶಸ್ವಿಯಾಗಿ ಸಿದ್ಧಪಡಿಸಲಾಗಿದೆ.

ಈ ಹಾವುಗಳನ್ನು ವೀಕ್ಷಿಸಲು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಡಾಂಗ್ ಟಾಮ್ ಸ್ನೇಕ್ ಫಾರ್ಮ್‌ಗೆ (Snake farm) ಭೇಟಿ ನೀಡುತ್ತಾರೆ. ಈ ಸ್ಥಳವು ಸಂಶೋಧನೆ ಆಧಾರಿತವಾಗಿದೆ. ಈ ವಿಷಕಾರಿ ಹಾವುಗಳಿಂದಲೇ ಅನೇಕರಿಗೆ ಜೀವದಾನವೂ ಲಭಿಸಿದೆ. ಪ್ರತಿ ವರ್ಷ ಹಾವಿನ ದಾಳಿಗೆ (snake attack) ಒಳಗಾದ ಸುಮಾರು 1,500 ಜನರು ಡಾಂಗ್ ಟಾಮ್ ಸ್ನೇಕ್ ಫಾರ್ಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ವಿಶೇಷ ಚಿಕಿತ್ಸೆಗಳ ಲಭ್ಯತೆ ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯು ಹಾವು ಕಡಿತದ ಘಟನೆಗಳನ್ನು ನಿಯಂತ್ರಿಸುವಲ್ಲಿ ಈ ಉದ್ಯಾನವನವು (Garden) ಪ್ರಮುಖ ಕೊಡುಗೆ ನೀಡುತ್ತಿದೆ.

 

 

ಇದನ್ನು ಓದಿ: Congress Guarantee: ಗ್ಯಾರಂಟಿ ಜನರಿಗೆ ಮಾತ್ರ ಅಲ್ಲ, ಹಂಚಿದವರಿಗೂ ಇದೆ ಗ್ಯಾರಂಟಿ ಗಿಫ್ಟ್ !