Home News Narendra Modi – Jagan Mohan Reddy : ಮೋದಿ-ಜಗನ್ ; ಬಿಜೆಪಿಗೆ ಆನೆಬಲ- ಕೊನೆಗೂ...

Narendra Modi – Jagan Mohan Reddy : ಮೋದಿ-ಜಗನ್ ; ಬಿಜೆಪಿಗೆ ಆನೆಬಲ- ಕೊನೆಗೂ ಕಾಂಗ್ರೆಸ್ ನಿಂದ ಬೆಂಬಲ!!!

Narendra Modi - Jagan Mohan Reddy

Hindu neighbor gifts plot of land

Hindu neighbour gifts land to Muslim journalist

Narendra Modi – Jagan Mohan Reddy : ರಾಜಕೀಯ ಪಕ್ಷಗಳು ಸದಾ ವಾಗ್ವಾದದಲ್ಲಿ ತೊಡಗಿರುತ್ತದೆ. ಆದರೆ ಇದೀಗ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Narendra Modi – Jagan Mohan Reddy) ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಬಿಜೆಪಿ (Bjp) ಸರ್ಕಾರವನ್ನು ಬೆಂಬಲಸುವ ನಿರ್ಧಾರ ಕೈಗೊಂಡಿದೆ. ಕೊನೆಗೂ ಕಾಂಗ್ರೆಸ್ ನಿಂದ ಬೆಂಬಲ ಸಿಕ್ಕಿದೆ. ಬಿಜೆಪಿಗೆ ಆನೆಬಲ ಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಸೇವೆಗಳ ನಿಯಂತ್ರಣಕ್ಕಾಗಿ ದೆಹಲಿ ಸುಗ್ರಿವಾಜ್ಞೆ ಮಸೂದೆಯನ್ನು ತೆರವುಗೊಳಿಸಲು ಸಂಸತ್ತಿನ ಉಭಯ ಸದನಗಳು ಸಿದ್ಧಗೊಂಡಿವೆ. ಇದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು‌.
ಈ ಮಧ್ಯೆಯೂ ಕೇಂದ್ರ ಸರ್ಕಾರ ದೆಹಲಿ ಸುಗ್ರಿವಾಜ್ಞೆ ಮಸೂದೆಯನ್ನು ಮಂಡಿಸುವುದಾಗಿ ಹೇಳಿತ್ತು. ಇದೀಗ ಮೋದಿ ಸರ್ಕಾರದ ಈ ನಿರ್ಧಾರಕ್ಕೆ ವೈಎಸ್‌ಆರ್‌ ಕಾಂಗ್ರೆಸ್‌ (Congress) ಬೆಂಬಲವಾಗಿ ನಿಂತಿದೆ.

ಆಂಧ್ರಪ್ರದೇಶ (Andra Pradesh) ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಬಿಜೆಪಿ ಸರ್ಕಾರವನ್ನು ಬೆಂಬಲಸುವ ನಿರ್ಧಾರ ಕೈಗೊಂಡಿದೆ. ದೆಹಲಿ ಸುಗ್ರೀವಾಜ್ಞೆ ಹಾಗೂ ಮಣಿಪುರದ ಮೇಲಿನ ಅವಿಶ್ವಾಸ ನಿರ್ಣಯ ಮಂಡಣೆಯಲ್ಲಿ ಮೋದಿ ಪರವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ನಿಂತಿದ್ದಾರೆ ಎನ್ನಲಾಗಿದೆ. ಇದರಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಲಾಗುತ್ತಿದೆ.

ದೆಹಲಿ ಸುಗ್ರಿವಾಜ್ಞೆ ಹಾಗೂ ಅವಿಶ್ವಾಸ ನಿರ್ಣಯ ಮಂಡಣೆ ವಿಚಾರದಲ್ಲಿ ನಾವು ಸರ್ಕಾರದ ಪರವಾಗಿ ಮತ ಚಲಾಯಿಸುತ್ತೇವೆ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವಿಜಯಸಾಯಿ ರೆಡ್ಡಿ ತಿಳಿಸಿದ್ದಾರೆ. ವಿಶ್ವಾಸಮತ ಯಾಚನೆಗೆ ಲೋಕಸಭೆ ಸ್ಪೀಕರ್ ಎರಡು ನೋಟಿಸ್‌ಗಳನ್ನು ಅಂಗೀಕರಿಸಿದ್ದಾರೆ.

 

ಇದನ್ನು ಓದಿ: Cheaper Gold: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ! ಇಲ್ಲಿ ಭಾರತಕ್ಕಿಂತಲೂ ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಚಿನ್ನ!! ಖರೀದಿಗೆ ಜನ ಮುಗಿ ಬೀಳೋದಂತೂ ಪಕ್ಕಾ!!!