Home News Marriage: ಬತ್ತಿ ಬಾಯಿಗೆ ಇಟ್ಟು ಧಮ್ ಎಳೆದು ಡಿಜೆ ಹಾಡಿಗೆ ಹೆಜ್ಜೆ ಹಾಕಿದ ಅತ್ತೆ, ಮದುವೆ...

Marriage: ಬತ್ತಿ ಬಾಯಿಗೆ ಇಟ್ಟು ಧಮ್ ಎಳೆದು ಡಿಜೆ ಹಾಡಿಗೆ ಹೆಜ್ಜೆ ಹಾಕಿದ ಅತ್ತೆ, ಮದುವೆ ಕ್ಯಾನ್ಸಲ್ ಮಾಡಿಕೊಂಡ ವರ !

Marriage
Image source: SheThepeople

Hindu neighbor gifts plot of land

Hindu neighbour gifts land to Muslim journalist

Marriage: ಎರಡು ಮನಸ್ಸುಗಳನ್ನು ಮಾತ್ರವಲ್ಲ, ಎರಡು ಕುಟುಂಬಗಳನ್ನು ಒಟ್ಟುಗೂಡಿಸುವ ಶುಭ ಕಾರ್ಯವೇ ಮದುವೆ. ಭಾರತದ ಮದುವೆಗಳು ವಿಜೃಂಭಣೆಯಿಂದ ನಡೆಯುವುದು ಅಷ್ಟೇ ಅಲ್ಲದೆ, ಶಾಸ್ತ್ರೋಕ್ತವಾಗಿ ನಡೆಯುವ ಈ ಶುಭಕಾರ್ಯವು ಪವಿತ್ರತೆಯಿಂದ ಕೂಡಿರುತ್ತದೆ. ಆದರೆ ಹಸೆಮಣೆ ಏರುತ್ತಿದ್ದಂತೆ ಮದುವೆಗಳು ಮುರಿದು ಬಿದ್ದಿರುವ ಅದೆಷ್ಟೋ ಪ್ರಕರಣಗಳು ದಾಖಲಾಗಿದೆ. ಇದೀಗ ಅಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು ವರನು ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾನೆ. ಇದಕ್ಕೆ ಮುಖ್ಯ ಕಾರಣ ತನ್ನ ಭಾವಿ ಅತ್ತೆಯ ಆ ವರ್ತನೆ…!!

ಹೌದು, ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಯುವಕ ಹಾಗೂ ರಾಜಪುರದ ಹುಡುಗಿಯ ನಡುವೆ ವಿವಾಹವನ್ನು ಏರ್ಪಡಿಸಲಾಗಿತ್ತು. ಜೂನ್ 27 ರಂದು ಮದುವೆಯ(Marriage) ಪೂರ್ವಭಾವಿ ವಿಧಿವಿಧಾನಗಳನ್ನು ನಡೆಸಲಾಯಿತು. ವರನು ತನ್ನ ವಿಶೇಷ ದಿನದಂದು ಭಾವೀ ಪತ್ನಿಯ ಜೊತೆ ಮಂಟಪದಲ್ಲಿ ಶಾಸ್ತ್ರದಲ್ಲಿ ಖುಷಿಯಿಂದ ಭಾಗಿಯಾಗಿದ್ದನು. ಇನ್ನೊಂದೆಡೆ ಅತಿಥಿಗಳು ಊಟ ಮಾಡುತ್ತಾ, ಸಂತೋಷದಿಂದ ನೃತ್ಯದಲ್ಲಿ ತೊಡಗಿದ್ದರು.

ಈ ಸಂಭ್ರಮಾಚರಣೆಯ ನಡುವೆ, ವಧುವಿನ ತಾಯಿಯು ಖುಷಿಯಲ್ಲಿ ಸಿಗರೇಟು ಸೇದುತ್ತಾ ಡಿಜೆ ಹಾಡಿಗೆ ಸ್ಟೆಪ್ ಹಾಕುತ್ತಾ ಡ್ಯಾನ್ಸ್ ಮಾಡುವ ಗುಂಪಿನೊಂದಿಗೆ ಸೇರಿಕೊಂಡಿದ್ದಾರೆ. ಮದುವೆ ಮನೆಯಲ್ಲಿ ತನ್ನ ಭಾವೀ ಅತ್ತೆಯ ಈ ಅವತಾರ ನೋಡಿ ರೊಚ್ಚಿಗೆದ್ದ ವರ ಈ ಮದುವೆ ಬೇಡವೆಂದು ರದ್ದುಗೊಳಿಸಿದನು.

ವರನ ಕುಟುಂಬಸ್ಥರು ದಿಢೀರ್ ಆಗಿ ಮದುವೆ ಆಚರಣೆಗಳನ್ನು ನಿಲ್ಲಿಸಲು ನಿರ್ಧರಿಸಿದರು. ವರನ ನಿರ್ಧಾರದಿಂದ ಎರಡು ಕುಟುಂಬಗಳ ನಡುವೆ ಜಗಳ ನಡೆದಿದೆ ಅಂತಿಮವಾಗಿ ಮದುವೆಯ ಸಂಭ್ರಮವನ್ನು ಕೊನೆಗೊಳಿಸಲಾಯಿತು. ವರನು ತನ್ನ ಕುಟುಂಬದೊಂದಿಗೆ ಮನೆಗೆ ಹಿಂದಿರುಗಿದನು. ಘಟನೆ ನಂತರ ಕುಟುಂಬಸ್ಥರ ನಡುವೆ ಪಂಚಾಯ್ತಿ ನಡೆದಿದೆ. ನಂತರ ಎರಡೂ ಮನೆಯವರು ಮಾತನಾಡಿ ಮದುವೆಯನ್ನು ಮಾಡಲು ನಿರ್ಧರಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

 

ಇದನ್ನು ಓದಿ: Toby Movie: ‘ ಟೋಬಿ’ ಮತ್ತು ‘ ಸಪ್ತ ಸಾಗರದಾಚೆ ಎಲ್ಲೋ ‘ ಬಾಕ್ಸ್ ಆಫೀಸ್ ಕಿತ್ತಾಟ ?