Home News Karnataka Budget 2023: ಎಲ್ಲಾ ಓಕೆ, ಡಿಸಿಎಂ ಡಿಕೆಶಿ ಇಲಾಖೆಗೇ ಹುಲಿಯಾ ಹಣ ಇಟ್ಟಿಲ್ಲ ಯಾಕೆ...

Karnataka Budget 2023: ಎಲ್ಲಾ ಓಕೆ, ಡಿಸಿಎಂ ಡಿಕೆಶಿ ಇಲಾಖೆಗೇ ಹುಲಿಯಾ ಹಣ ಇಟ್ಟಿಲ್ಲ ಯಾಕೆ ?

Hindu neighbor gifts plot of land

Hindu neighbour gifts land to Muslim journalist

Karnataka Budget 2023: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ತಮ್ಮ 14ನೇ ಬಜೆಟ್ ಮಂಡಿಸಿದ್ದು, ಬಜೆಟ್ ನಲ್ಲಿ (Karnataka Budget 2023) ವಿವಿಧ ಇಲಾಖೆಗಳಿಗೆ ಅನುದಾನ ಘೋಷಿಸಿದ್ದಾರೆ. ಆದರೆ, ಡಿಸಿಎಂ ಡಿ ಕೆ ಶಿವಕುಮಾರ್ ಇಲಾಖೆಗೆ ಸಿಎಂ ಶಾಕ್ ನೀಡಿದ್ದಾರೆ. ಬಜೆಟ್ ನಲ್ಲಿ ಡಿಕೆಶಿ ಇಲಾಖೆಯಾದ ಜಲಸಂಪನ್ಮೂಲ ಇಲಾಖೆಗೆ ಹೆಚ್ಚುವರಿ ಅನುದಾನ ಘೋಷಣೆ ಮಾಡಿಲ್ಲ. ಯಾಕೆ ಗೊತ್ತಾ?

2022-23ರ ಅಂತ್ಯಕ್ಕೆ 2,55,102 ಕೋಟಿ ರೂ ಕಾಮಗಾರಿ ಬಾಕಿ ಇದೆ. ಇದನ್ನು ಪೂರ್ಣಗೊಳಿಸಲು ಆರು ವರ್ಷಗಳ ಸಮಯಾವಕಾಶ ಬೇಕು. ಇದರಿಂದಾಗಿ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಿನಂತಾಗಿದೆ. ಆದ್ದರಿಂದ ಪರೋಕ್ಷವಾಗಿ ಹೊಸ ನೀರಾವರಿ, ರಸ್ತೆ ಯೋಜನೆಗಳು ಇಲ್ಲ ಎಂದು ಸಿಎಂ ಬಜೆಟ್​ನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ, ನಗರಾಭಿವೃದ್ಧಿ ಹಾಗೂ ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿ ಕಾಮಗಾರಿಗಳಿಗೆ ವಿತ್ತೀಯ ನೀತಿ ಮೀರಿ ಅನುಮೋದನೆ ಮಾಡಲಾಗಿದೆ. ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಲಾಗಿದೆ.