Home News Jet Fuel Price: ಗಗನ ಪ್ರಯಾಣ ಇನ್ನು ಗಗನ ಕುಸುಮ ; ಆಕಾಶಕ್ಕೆ ಎಗರಿದೆ ವಿಮಾನ...

Jet Fuel Price: ಗಗನ ಪ್ರಯಾಣ ಇನ್ನು ಗಗನ ಕುಸುಮ ; ಆಕಾಶಕ್ಕೆ ಎಗರಿದೆ ವಿಮಾನ ಇಂಧನದ ಬೆಲೆ !

Jet Fuel Price

Hindu neighbor gifts plot of land

Hindu neighbour gifts land to Muslim journalist

Jet Fuel Price: ವಿಮಾನ ಇಂಧನದ ಬೆಲೆ ಗಗನಕ್ಕೇರಿದೆ. ಹೌದು, ವಿಮಾನಗಳಿಗೆ ಬಳಸುವ ಏವಿಯೇಷನ್ ಟರ್ಬೈನ್ ಫುಯೆಲ್ (ATF- Aviation Turbine Fuel) ಬೆಲೆಯನ್ನು ಹೆಚ್ಚಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಆಗಸ್ಟ್ 1ರಂದು ಜೆಟ್ ಇಂಧನದ ಬೆಲೆ (Jet Fuel Price) ಏರಿಸಿದೆ. ಈ ಏರಿಕೆಯೊಂದಿಗೆ, ಭಾರತದಲ್ಲಿ ವಿಮಾನ ಪ್ರಯಾಣ ದುಬಾರಿಯಾಗಲಿದೆ. ಪ್ರಯಾಣ ದರದಲ್ಲಿ ಶೇ. 10ರಿಂದ 15ರಷ್ಟು ಹೆಚ್ಚುವ ಸಾಧ್ಯತೆ ಇದೆ.

ಕಳೆದ ಜುಲೈ 1ರಂದು ಜೆಟ್ ಫುಯೆಲ್ ಬೆಲೆ ಏರಿಸಲಾಗಿತ್ತು. ಜುಲೈ ತಿಂಗಳಲ್ಲಿ ಶೇ. 1.65ರಷ್ಟು ಹೆಚ್ಚಾಗಿದ್ದ ಬೆಲೆ ಈ ಬಾರಿ ಸುಮಾರು ಶೇ. 10ರಷ್ಟು ಏರಿಕೆ ಆಗಿವೆ. ಇದೀಗ ಆಗಸ್ಟ್ 1ರಂದು ಜೆಟ್ ಇಂಧನದ ಬೆಲೆ ಹೆಚ್ಚಿಸಲಾಗಿದ್ದು, ಪ್ರತೀ ಕಿಲೋಮೀಟರ್​ಗೆ ಜೆಟ್ ಇಂಧನದ ಬೆಲೆ ಸುಮಾರು 8,000 ರೂ ನಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಲೀಟರ್ ಲೆಕ್ಕದಲ್ಲಿ ಸುಮಾರು 8 ರೂನಷ್ಟು ಬೆಲೆ ಹೆಚ್ಚಳವಾಗಿದೆ.

ಜೆಟ್ ಇಂಧನದ ಬೆಲೆ ಹೆಚ್ಚಳದ ವಿವರ:-

• ಮುಂಬೈನಲ್ಲಿ ಜೆಟ್ ಇಂಧನದ ಬೆಲೆ ಲೀಟರ್​ಗೆ 84.854 ರೂ ಇತ್ತು. ಕಿಲೋಮೀಟರ್​ಗೆ 84,854 ರೂ ಇತ್ತು. ಇದೀಗ ಇದರ ಬೆಲೆ 92,124.13 ರೂಗೆ ಏರಿದೆ.
• ದೆಹಲಿಯಲ್ಲಿ ಕಿಲೋಮೀಟರ್​ಗೆ 90,857 ರೂ ಇತ್ತು. ಜೆಟ್ ಇಂಧನದ ಬೆಲೆ ಇದೀಗ 98,508.26 ರುಪಾಯಿಗೆ ಹೆಚ್ಚಳಗೊಂಡಿದೆ.
• ಚೆನ್ನೈನಲ್ಲಿ ಜೆಟ್ ಇಂಧನದ ಬೆಲೆ ಪ್ರತೀ ಕಿಮೀಗೆ 94,530 ರೂ ಇತ್ತು. ಇದೀಗ 1,02,391.64 ರೂ ಆಗಿದೆ.
• ಕೋಲ್ಕತಾದಲ್ಲಿ ಪ್ರತೀ ಕಿಮೀಗೆ ಜೆಟ್ ಇಂಧನದ ಬೆಲೆ 99,793 ರೂ ಇದ್ದು 1,07,383.08 ರುಪಾಯಿಗೆ ಏರಿಕೆ ಆಗಿದೆ. ಕೋಲ್ಕತಾ ಅತಿದುಬಾರಿ ದರ ಎನಿಸಿದೆ.
• ಈ ಮೇಲಿನ ದರಗಳು ದೇಶೀಯ ಹಾರಾಟಗಳಿಗೆ ಇರುವ ಜೆಟ್ ಇಂಧನದ ಬೆಲೆಯಾಗಿದೆ.

ದೇಶೀಯ ವೈಮಾನಿಕ ಸಂಸ್ಥೆಗಳ ಅಂತಾರಾಷ್ಟ್ರೀಯ ಹಾರಾಟಕ್ಕೆ ಪ್ರತ್ಯೇಕ ಜೆಟ್ ಇಂಧನ ಬೆಲೆ ಇದ್ದು, ಇದರ ಪರಿಷ್ಕರಣೆಯೂ ಆಗಿದೆ. ಮುಂಬೈನಲ್ಲಿ ಪ್ರತೀ ಕಿಮೀಗೆ ಜೆಟ್ ಇಂಧನದ ಬೆಲೆ 900.73 ಡಾಲರ್ ಆಗಿದೆ. ರುಪಾಯಿ ಲೆಕ್ಕದಲ್ಲಿ ಸುಮಾರು 74,000 ರೂ ಆಗುತ್ತದೆ. ದೆಹಲಿಯಲ್ಲಿ ಪ್ರತೀ ಕಿಮೀಗೆ 902.62 ಡಾಲರ್, ಚೆನ್ನೈನಲ್ಲಿ 897.83 ಡಾಲರ್ ಹಾಗೂ ಕೋಲ್ಕತಾದಲ್ಲಿ 941.09 ಡಾಲರ್ ಬೆಲೆಯನ್ನು ಎಟಿಎಫ್ ಹೊಂದಿವೆ.

 

ಇದನ್ನು ಓದಿ: Rajinikanth: ಮಗಳ 2 ನೇ ಮದುವೆ ವಿಚಾರ: ಕೊನೆಗೂ ಒಂಟಿಯಾದ ರಜನಿಕಾಂತ್ ಕೋಪಗೊಂಡು ಹೊರಟದ್ದೆಲ್ಲಿಗೆ?