Home News Tragedy love story : ಹುಡ್ಗ ಹುಚ್ಚನಾದ್ರೆ, ಆಗ ಚೆಲುವಿನ ಚಿತ್ತಾರದ ಪ್ರೇಮ ಕಥೆ ;...

Tragedy love story : ಹುಡ್ಗ ಹುಚ್ಚನಾದ್ರೆ, ಆಗ ಚೆಲುವಿನ ಚಿತ್ತಾರದ ಪ್ರೇಮ ಕಥೆ ; ಒಂದು ವೇಳೆ ಹುಡುಗಿಯೇ ಹುಚ್ಚಿಯಾದ್ರೆ, ಅದು ಇಲ್ಲಿ ನಾವು ಹೇಳುತ್ತಿರುವ ದುರಂತ ಕಥೆ !

Tragedy love story
image source: Suvarna news

Hindu neighbor gifts plot of land

Hindu neighbour gifts land to Muslim journalist

Tragedy love story : ಇಂದಿನ ದಿನದಲ್ಲಿ ಪ್ರೀತಿ (love) ಅಂದ್ರೆ ನಾಲ್ಕು ದಿನದ ಸುತ್ತಾಟವಾಗಿದೆ. ಮೆಸೇಜ್, ಕಾಲ್, ಲೈಂಗಿಕವಾಗಿ ಬಳಸಿಕೊಂಡು ಕೊನೆಗೆ ಬ್ರೇಕಪ್ (breakup) ಇಷ್ಟೇ ಇವತ್ತಿನ ಪೀಳಿಗೆಯ ಪ್ರೀತಿ. ಸದ್ಯ ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ‌ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಈ ಲವ್ ಸ್ಟೋರಿ ಚೆಲುವಿನ ಚಿತ್ತಾರ ಸಿನಿಮಾದ ಕಥೆಯನ್ನೇ ಹೋಲುತ್ತೆ!. ಆದರೆ, ಇಲ್ಲಿ ಹುಡುಗಿ ಪ್ರೀತಿಯ ಬಲೆಗೆ ಬಿದ್ಜು ಹುಚ್ಚಿಯಾಗಿದ್ದಾಳೆ (Tragedy love story).

ಹೌದು, ಮೇಲ್ಜಾತಿಯ ಯುವಕನೊಬ್ಬ ಕೀಳ್ಜಾತಿಯ ಯುವತಿಯನ್ನು ಪ್ರೀತಿಸಿ, ಸುತ್ತಾಡಿ, ಲೈಂಗಿಕ ಕ್ರಿಯೆ ಎಲ್ಲಾ ಮುಗಿಸಿದ ಮೇಲೆ ಯುವತಿ ಮದುವೆ ಆಗೋಣ ಎಂದಾಗ ಆಕೆಯನ್ನು ತಿರಸ್ಕರಿಸಿದ್ದಾನೆ. ಇದರಿಂದ ಮನನೊಂದು ಯುವತಿ ಹುಚ್ಚಿಯಾಗಿ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಜೊತೆಗೆ ತಾನು ಅನುಭವಿಸಿದ ನೋವಿನ ಪುಟಗಳನ್ನು ಕಣ್ಣೀರಿನ ಕೋಡಿ ಹರಿಸಿ ಬರೆದಿಟ್ಟಿದ್ದಾಳೆ.

ಈ ಘಟನೆ ನಡೆದಿರೋದು ಬಳ್ಳಾರಿಯಲ್ಲಿ. ಬಳ್ಳಾರಿಯ (ballari) ಯುವತಿ ತನ್ನ ಸ್ನೇಹಿತೆಯ ಮದುವೆಗೆ (marriage) ಹೋದಾಗ ಅಲ್ಲಿ ಆಕೆಯ ಗಂಡನ ಸಹೋದರನ ಪರಿಚಯವಾಗಿದೆ. ಆತನೂ ಯುವತಿಯನ್ನು ಕಂಡು ಮರುಳಾಗಿದ್ದಾನೆ. ಹೇಗೋ ಮೊಬೈಲ್ ನಂಬರ್ ಪಡೆದು ಇಬ್ಬರೂ ಸ್ನೇಹದ ಆಹ್ವಾನ ಮಾಡಿಕೊಂಡಿದ್ದಾರೆ. ಈ ಸ್ನೇಹ ದೈತ್ಯವಾಗಿ ಬೆಳೆದು ಪ್ರೀತಿಯಾಗಿ ಬದಲಾಗಿದೆ.

ಕಾಲ ಕ್ರಮೇಣ ಯುವತಿ ತಾನು ತಳ ಸಮುದಾಯಕ್ಕೆ (ವಡ್ಡರ) ಸೇರಿದವಳು ಎಂದು ಹುಡುಗನಿಗೆ ಹೇಳಿದ್ದಾಳೆ. ಆದರೆ, ಯುವಕ
ಮೇಲ್ಜಾತಿಗೆ (ಬಲಿಜ) ಸೇರಿದವನಾಗಿದ್ದ. ಹೇಗೂ ಸ್ನೇಹ, ಪ್ರೀತಿ ಆಗಿದೆ. ಪ್ರೀತಿಲಿ ಬಿದ್ದೋರಿಗೆ ಪ್ರಪಂಚದ ಅರಿವಿಲ್ಲ ಅನ್ನೋ ಹಾಗೇ ಈತನೂ ಸಿನಿಮಾ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದು ಬಿಟ್ಟ. ಜಾತಿ ಯಾವುದಾದರೇನು ತಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ. ಈ ಹುಸಿ ಭರವಸೆಯನ್ನು ಮುಗ್ಧ ಯುವತಿ ನಂಬಿಬಿಟ್ಟಳು.

ಈ ಭರವಸೆಯಿಂದಲೇ ಆತನೊಂದಿಗೆ ಸುತ್ತಾಡಿದಳು. ಕೊನೆಗೆ ಲೈಂಗಿಕ ಕ್ರಿಯೆಯೂ ನಡೆಯಿತು. ಈ ವೇಳೆಗಾಗಲೆ ಯುವತಿಗೆ ಮನೆಯಲ್ಲಿ ಮದುವೆ ಮಾಡಲು ಮುಂದಾದರು. ಆಗ ಯುವತಿ ಪ್ರಿಯಕರನ ಬಳಿ ತನಗೆ ಬೇರೆ ಮದುವೆ ಮಾಡಲು ಹುಡುಗ ನೋಡುತ್ತಿದ್ದಾರೆ. ಹಾಗಾಗಿ ನನ್ನನ್ನು ನೀನೇ ಮದುವೆಯಾಗು ಎಂದು ಬೇಡಿಕೆ ಮುಂದಿಟ್ಟಳು. ಈ ವೇಳೆ ಹುಡುಗ ತನ್ನ ವರಸೆಯನ್ನೇ ಬದಲಿಸಿದ್ದಾನೆ. ನೀನು ಕೆಳ ಜಾತಿಯವಳು ನಿನ್ನನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದಾನೆ.

ಯುವತಿ ಎಷ್ಟೇ ಗೋಗರೇದರೂ, ಅತ್ತರೂ ಯುವಕ ಜಪ್ಪಯ್ಯ ಅನ್ನಲಿಲ್ಲ. ದೃಢವಾಗಿ ಮದುವೆ ಆಗಲ್ಲ ಎಂದು ನಿಂತುಬಿಟ್ಟ. ಪ್ರಿಯಕರನಿಗೆ ಮನಸ್ಸು, ದೇಹ ಕೊಟ್ಟು ಬೇರೊಬ್ಬನೊಂದಿಗೆ ಮದುವೆ ಆಗಲು ಮನಸ್ಸು ಒಪ್ಪದೆ ಯುವತಿ ಮನನೊಂದು ಹುಚ್ಚಿಯಂತೆ ನರಳಿದ್ದಾಳೆ. ಸ್ನೇಹ, ಪ್ರೀತಿ ಹೆಸರಲ್ಲಿ ಹಾಸಿಗೆ ಹಂಚಿಕೊಂಡು ಅತ್ಯಾಚಾರ ಮಾಡಿದಾಗ ಇರದ ಜಾತಿ ಬೇಧ, ಮದುವೆಯಾಗುವಾಗ ಏಕೆ ಬಂದಿದೆ ಎಂದು ದೀರ್ಘವಾದ ಡೆತ್‌ನೋಟ್‌ ಬರೆದಿಟ್ಟು, ಬದುಕುವುದೇ ಬೇಡವೆಂದು ನೇಣಿಗೆ ಶರಣಾಗಿದ್ದಾಳೆ.

ಡೆತ್‌ನೋಟ್‌ನಲ್ಲಿ (death note) ಮದುವೆ ನಿರಾಕರಿಸಿದ ಯುವಕ ಸುನಿಲ್ ಮಾಡಿದ ಅತ್ಯಾಚಾರದ ಬಗ್ಗೆ ಮತ್ತು ಅವರ ಕುಟುಂಬದವರು ಮಾಡಿದ ನಿಂದನೆ ಬಗ್ಗೆ ಪತ್ರ ಬರೆದಿದ್ದಾಳೆ. ಯುವತಿ ನೇಣಿಗೆ ಶರಣಾದ (sucide) ನಂತರ ಸಾಯುವ ಮುನ್ನವೇ ನೋಡಿದ ಕುಟುಂಬ ಸದಸ್ಯರು, ಮಗಳನ್ನು ಹೊತ್ತು ತಂದು ಆಸ್ಪತ್ರೆ (hospital) ಸೇರಿಸಿದ್ದಾರೆ. ಮಗಳಿಗಾದ ಅನ್ಯಾಯಕ್ಕೆ ಯುವತಿಯ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.

 

ಇದನ್ನು ಓದಿ: Love Harmone: ಲವ್‌ ಹಾರ್ಮೋನ್‌ ಬಗ್ಗೆ ನಿಮಗೆ ತಿಳಿದಿದೆಯೇ? ಇದರಿಂದ ಹೃದಯದಲ್ಲಿ ಮೊಳಗುತ್ತೆ ಪ್ರೀತಿಯ ಧ್ವನಿ!