Home National Election: ಯುವಕ ಯುವತಿಯರಿಗೆ ಬಂಪರ್ ಸುದ್ದಿ: ಇನ್ನು PUC ಮುಗಿಯೋ ವಯಸ್ಸಲ್ಲಿ MLA – MP...

Election: ಯುವಕ ಯುವತಿಯರಿಗೆ ಬಂಪರ್ ಸುದ್ದಿ: ಇನ್ನು PUC ಮುಗಿಯೋ ವಯಸ್ಸಲ್ಲಿ MLA – MP ಆಗ್ಬೋದು !

Election

Hindu neighbor gifts plot of land

Hindu neighbour gifts land to Muslim journalist

Election: ಈಗಾಗಲೇ ಅಸ್ತಿತ್ವದಲ್ಲಿರುವ ನಿಯಮದ ಪ್ರಕಾರ ಚುನಾವಣಾ (Election) ಕಣಕ್ಕಿಳಿಯಬೇಕೆಂದರೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ರಾಜ್ಯಸಭೆ, ರಾಜ್ಯ ವಿಧಾನ ಪರಿಷತ್‌ ಸದಸ್ಯರಾಗಬೇಕೆಂದರೆ 30 ವರ್ಷ ವಯಸ್ಸಾಗಿರಬೇಕು.

ಆದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಇರುವ ಈ ವಯೋಮಿತಿಯನ್ನು 25ರಿಂದ 18ಕ್ಕೆ ಇಳಿಸಿದರೆ, ಯುವ ಜನರಿಗೂ ಸಮಾನ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಸದ್ಯ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ವಯಸ್ಸಿನ ಮಿತಿ ಕಡಿಮೆ ಮಾಡಲು ಸಂಸದೀಯ ಸಮಿತಿ ಸಲಹೆ ನೀಡಿದೆ. ಇದರಿಂದ ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶವನ್ನು ನೀಡಲಾಗುತ್ತದೆ ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ.

ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆಗೆ ಕನಿಷ್ಠ ವಯೋಮಿತಿಯನ್ನು 25 ರಿಂದ 18ಕ್ಕೆ ಇಳಿಸಲು ಬಿಜೆಪಿ ಸದಸ್ಯ ಸುಶೀಲ್ ಮೋದಿ ನೇತೃತ್ವದ ಕಾನೂನು ಮತ್ತು ಸಿಬ್ಬಂದಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯಿಂದ ಈ ಕುರಿತು ಶಿಫಾರಸು ಮಾಡಲಾಗಿದೆ.

ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಮೊದಲಾದ ದೇಶಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ರಾಷ್ಟ್ರೀಯ ಚುನಾವಣೆಗಳಲ್ಲಿ ಪಾಲ್ಗೊಳ್ಳುವಿಕೆ ಕನಿಷ್ಠ ವಯೋಮಿತಿ 18 ವರ್ಷಕ್ಕೆ ಇದೆ. ಇದರಿಂದ ಯುವಕರು ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ದೊರೆಯುತ್ತದೆ. ಸದ್ಯ ಕೆನಡಾ, ಯುಕೆ, ಆಸ್ಟ್ರೇಲಿಯಾದಂಥ ಹಲವು ದೇಶಗಳಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಅಭ್ಯಸಿಸಿ ಈ ಶಿಫಾರಸು ಮಾಡಲಾಗಿದೆ ಎಂದೂ ಬಿಜೆಪಿ ನಾಯಕ ಸುಶೀಲ್‌ ಮೋದಿ ನೇತೃತ್ವದ ಸಮಿತಿ ತಿಳಿಸಿದೆ.

ಇದನ್ನೂ ಓದಿ: Tomato Price: ಮತ್ತೆ ಅಡುಗೆ ಮನೆಗೆ ಎಂಟ್ರಿ ಕೊಟ್ಟ ಕೆಂಪು ಕೆನ್ನೆಯ ಬೆಡಗಿ, ದಿಡೀರ್ ಇಳಿಕೆ ಕಂಡ ದರ ಕಂಡು ಗೃಹಿಣಿಯರು ದಿಲ್ ಖುಷ್ !