Home National KRS reservoir: ಕೆ ಆರ್‌ ಎಸ್‌ ಜಲಾಶಯ ಅಭಾವ ಹೆಚ್ಚಳ : ಕುಡಿಯುವ ನೀರಿಗೂ ಪರದಾಡುವಂತಾಗುತ್ತಾ?

KRS reservoir: ಕೆ ಆರ್‌ ಎಸ್‌ ಜಲಾಶಯ ಅಭಾವ ಹೆಚ್ಚಳ : ಕುಡಿಯುವ ನೀರಿಗೂ ಪರದಾಡುವಂತಾಗುತ್ತಾ?

KRS reservoir

Hindu neighbor gifts plot of land

Hindu neighbour gifts land to Muslim journalist

KRS reservoir: ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ ಎಸ್‌ ಜಲಾಶಯದ(KRS reservoir) ನೀರಿನ ಮಟ್ಟ ದಿಢೀರ್‌ ಕಡಿಮೆಯಾಗಿದ್ದೆ ತಡ ಜಿಲ್ಲೆಯಾದ್ಯಂತ ನೀರಿನ ಅಭಾವ ಉಂಟಾಗುವ ಆತಂಕ ಸೃಷ್ಟಿಯಾಗಿದೆ.

ಕೆಆರ್‌ ಎಸ್‌ ಜಲಾಶಯದಲ್ಲಿ ಶುಕ್ರವಾರ 78 ಅಡಿ ಇದ್ದ ನೀರಿನ ಮಟ್ಟ ಶನಿವಾರ 77 ಅಡಿಗೆ ಕುಸಿತಗೊಂಡಿದೆ. ಅಲ್ಲದೇ ಕೆಆರ್‌ ಎಸ್‌ ಡ್ಯಾಂ ನಲ್ಲಿ ನೀರಿನ ಮಟ್ಟ ಕುಸಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ನೀರಿನ ಕುಸಿತಗೊಳ್ಳುತ್ತಿದ್ದಂತೆ ರೈತರಿಗೆ ಸಂಕಷ್ಟ ಎದುರಾಗಿದ್ದು ಬೆಳೆಗಳಿಗೂ ನೀರನ್ನು ಹರಿಸಲು ಹಿಂದೇಟು ಹಾಕುವಂತಾಗಿದೆ. ಇದರಿಂದ ರೈತರು ಬೆಳೆಗಳಿಗೆ ಸರಿಯಾದ ಪ್ರಮಾಣ ನೀರು ಲಭ್ಯವಾಗದಿದ್ದರೆ ಸಮಸ್ಯೆ ಎದುರಾಗುವುದು ಗ್ಯಾರಂಟಿಯಾಗಿದ್ದಂತೂ ನಿಜ.

ಜುಲೈ 2ನೇ ವಾರದವರೆಗೆ ಜಲಾಶಯದಲ್ಲಿರುವ ನೀರು ಕುಡಿಯುಲು ಬಳಕೆಯಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆಯಾಗದಿದ್ದರೆ ಮತ್ತಷ್ಟು ನೀರಿನ ಹಾಹಾಕಾರ ಎದುರಾಗುವುದು ಗ್ಯಾರಂಟಿಯಾಗಿದೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಜನರು ನೀರಿನ ಅಭಾವ ಬಗ್ಗೆ ಕೊಂಚ ಗಮನಿಸುವುದು ಸೂಕ್ತ.

ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗದಂತೆ ಇದೊಂದು ಎಚ್ಚರಿಕೆಯ ಮಾಹಿತಿಯಾಗಿದ್ದಂತೂ ನಿಜ.

ಇದನ್ನೂ ಓದಿ: ಬಂಡೀಪುರಕ್ಕೆ ಮೋದಿ ಆಗಮನ ಬೆನ್ನಲ್ಲೆ ಆದಾಯ ಹೆಚ್ಚಳ..! ಹೇಗೆ ಗೊತ್ತಾ ?