

KSRTC BUS: ಕುಡುಕನೊಬ್ಬ ಒಬ್ಬ ಮನೆಗೆ ಹೋಗುವ ಕೊನೇ ಬಸ್ ಅನ್ನು ಮಿಸ್ ಮಾಡಿಕೊಂಡ ಬಳಿಕ ಕುಡಿದ ಅಮಲಿನಲ್ಲಿ ನಿಲ್ಲಿಸಿದ್ದ ಬಸ್ ಒಂದನ್ನು ಹತ್ತಿ ತಾನೇ ಚಲಾಯಿಸಿಕೊಂಡು ಹೋಗಿರುವಂತಹ ವಿಚಿತ್ರ ಘಟನೆಯೊಂದು ಕೇರಳದ ತಿರುವಲ್ಲಾದಲ್ಲಿ ನಡೆದಿದೆ.
ಜೆಬಿನ್ ಎಂಬ ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ಮಲ್ಲಪಳ್ಳಿಗೆ ತೆರಳಲು ತಿರುವಲ್ಲಾ ಡಿಪೋಗೆ ಭೇಟಿ ನೀಡಿದ್ದರು.
ಆದರೆ ರಾತ್ರಿ 8 ಗಂಟೆಗೆ ಕೊನೆಯ ಬಸ್ ತೆರಳಿತ್ತು. ಮದ್ಯದ ಅಮಲಿನಲ್ಲಿದ್ದ ಜೆಬಿನ್ ಬಸ್ ಮಿಸ್ ಆಯ್ತು ಎಂದು ಡಿಪೋದಲ್ಲಿ ನಿಲ್ಲಿಸಲಾಗಿದ್ದ ಕೆಎಸ್‌ಆರ್‌ಟಿಸಿ ಬಸ್ (KSRTC BUS) ಅನ್ನು ರಾತ್ರಿ 10:15ರ ಸುಮಾರಿಗೆ ಚಲಾಯಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾನೆ.
ಬಸ್ ಅನ್ನು ಜೆಬಿನ್ ಹಿಂದಕ್ಕೆ ತೆಗೆದುಕೊಳ್ಳುವಾಗ ತಕ್ಷಣ ಎಚ್ಚೆತ್ತ ಡಿಪೋ ಅಧಿಕಾರಿಗಳು ಆತನನ್ನು ನಿಲ್ಲಿಸಿ, ಬಸ್‌ನಿಂದ ಕೆಳಗಿಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆತ ಕೆಳಗೆ ಇಳಿಯದೇ ಹೋಗಿದ್ದರಿಂದ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಜೆಬಿನ್‌ನನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ. ಆದ್ರೆ ಜೆಬಿನ್‌ನೊಂದಿಗೆ ಇದ್ದ ಇನ್ನಿಬ್ಬರು ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ.













