Home News Bihar: ತನ್ನ ಮಗನನ್ನೇ ಪಕ್ಷದಿಂದ ಉಚ್ಛಾಟಿಸಿದ ಲಾಲು ಪ್ರಸಾದ್ ಯಾದವ್!

Bihar: ತನ್ನ ಮಗನನ್ನೇ ಪಕ್ಷದಿಂದ ಉಚ್ಛಾಟಿಸಿದ ಲಾಲು ಪ್ರಸಾದ್ ಯಾದವ್!

Hindu neighbor gifts plot of land

Hindu neighbour gifts land to Muslim journalist

Bihar: ಬಿಹಾರದ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಬಿರುಗಾಳಿ ಯೊಂದು ಎದ್ದು ಇದೀಗ ಬಿಹಾರ ರಾಜ್ಯದ ರಾಜ್ಯ ರಾಜಕೀಯದಲ್ಲಿ ಭಾರಿ ಸುಂಟರಗಾಳಿ ಏಳುವ ಲಕ್ಷಣಗಳು ಗೋಚರಿಸುತ್ತಿವೆ.
ಅಷ್ಟಕ್ಕೂ ಲಾಲು ಕುಟುಂಬದಲ್ಲಿ ಎದ್ದ ಬಿರುಗಾಳಿ ಮತ್ತು ಇದರಿಂದ ಬಿಹಾರದ ರಾಜ್ಯ ರಾಜಕೀಯದಲ್ಲಿ ಏ ಳಲಿರುವ ಸುಂಟರಗಾಳಿಯಾದರೂ ಏನು ಎಂಬ ಕುತೂಹಲಕಾರಿ ಸಂಗತಿ ಏನೆಂದರೆ ಬಿಹಾರದ ಮಾಜಿ ಮುಖ್ಯಮಂತ್ರಿ ಆರ್ ಜೆ ಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ತನ್ನ ಮೊದಲನೇ ಪತ್ನಿ ಹಾಗೂ ಲಾಲ್ ಪ್ರಸಾದ್ ಯಾದವ್ ಮತ್ತವರ ತಾಯಿ ಮತ್ತು ಕುಟುಂಬದ ಒಪ್ಪಿಗೆ ಇಲ್ಲದೆ ಕದ್ದು ಮುಚ್ಚಿ ಎರಡನೇ ವಿವಾಹವಾಗಿರುವುದೇ ಇದಕ್ಕೆ ಕಾರಣವಾಗಿದೆ.
ಕೆಲವು ದಿನಗಳಿಂದೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲಾಲು ಪ್ರಸಾದ್ ಯಾದವ್ ರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಇನ್ನೊಂದು ವಿವಾಹವಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈ ಸುದ್ದಿಗಳನ್ನು ಯಾರೂ ನಂಬಿರಲಿಲ್ಲ .ಇದರ ಬೆನ್ನಲ್ಲೇ ಕಳೆದ ಶುಕ್ರವಾರ ತೇಜ್ ಪ್ರತಾಪ್ ಯಾದವ್ ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ “ನಾನು ಮತ್ತು ಅನುಷ್ಕಾ ಯಾದವ್ ಸುಮಾರು 12 ವರ್ಷಗಳಿಂದ ಸಂಬಂಧ ಹೊಂದಿದ್ದೇನೆ. ಇದನ್ನು ಈ ಮೊದಲೇ ತಮ್ಮಲ್ಲಿ ಹೇಳಿಕೊಳ್ಳಬೇಕೆಂದಿದ್ದೆ .ಆದರೆ ಸಮಯ,ಸಂದರ್ಭಗಳು ಕೂಡಿಬಂದಿರಲಿಲ್ಲ. ಹೀಗಾಗಿ ತಾವೆಲ್ಲ ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ. ಎಂದು ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ತೇಜ್ ಪ್ರತಾಪ್ ಯಾದವ್ ಮತ್ತು ಅನುಷ್ಕಾ ಯಾದವ್ ಜೊತೆಯಾಗಿರುವ ಮತ್ತು ಅವರ ಖಾಸಗಿ ಫೋಟೋಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಇದರಿಂದ ತೀವ್ರ ಮುಜುಗರಕ್ಕೊಳಗಾಗಿರುವ ಲಾಲು ಪ್ರಸಾದ್ ಯಾದವ್ ತನ್ನ ಮಗ ತೇಜ್ ಪ್ರತಾಪ್ ಯಾದವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದು ಬಿಹಾರ ರಾಜ್ಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಮಹಾ ಸುಂಟರಗಾಳಿ ಏಳುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ.