Home News Lack of teachers: ನುರಿತ ಶಿಕ್ಷಕರಿಲ್ಲದೆ ಸರ್ಕಾರದ ಯೋಜನೆಗೆ ಹಿನ್ನಡೆ! ಬಡ ಮಕ್ಕಳ-ಪೋಷಕರ ಕನಸು ಏನಾಗುತ್ತೆ?

Lack of teachers: ನುರಿತ ಶಿಕ್ಷಕರಿಲ್ಲದೆ ಸರ್ಕಾರದ ಯೋಜನೆಗೆ ಹಿನ್ನಡೆ! ಬಡ ಮಕ್ಕಳ-ಪೋಷಕರ ಕನಸು ಏನಾಗುತ್ತೆ?

Lack of teachers

Hindu neighbor gifts plot of land

Hindu neighbour gifts land to Muslim journalist

Lack of teachers: ಸರ್ಕಾರಿ ಶಾಲೆ(Govt School) ಎಂದರೆ ಇತ್ತೀಚಿನ ದಿನಗಳಲ್ಲಿ ಮೂಗು ಮುರಿಯುವ ಪೊಷಕರೇ ಹೆಚ್ಚು. ಅಲ್ಲಿ ಉಚಿತ ಶಿಕ್ಷಣ ಇದ್ದರೂ, ಹಾಲು, ಮೊಟ್ಟೆ, ಊಟ, ಪುಸ್ತಕ, ಸಮವಸ್ತ್ರ ಒಂದು ರುಪಾಯಿ ಖರ್ಚಿ ಇಲ್ಲದೆ ಇದ್ದರೂ ಪೊಷಕರು(Parents) ಮಾತ್ರ ಎಷ್ಟು ಹಣ ಖರ್ಚು ಮಾಡಿ ಬೇಕಾದರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ(Privet school) ಕಳುಹಿಸುತ್ತಾರೆ. ಇದಕ್ಕೆ ಮೊದಲ ಕಾರಣ ಇಂಗ್ಲಿಷ್(English medium).‌ ಈ ನಿಟ್ಟಿನಲ್ಲಿ ಸರ್ಕಾರ, ಮಕ್ಕಳನ್ನು(Children) ಸರ್ಕಾರಿ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ LKG-UKG ಶಿಕ್ಷಣವನ್ನು ಆರಂಭಿಸಿದೆ.

ಆದರೆ ಇದೀಗ ಅದಕ್ಕೆ ವಿಘ್ನವೊಂದು ಎದುರಾಗಿದೆ. 1 ರಿಂದ 7 ನೇ ತರಗತಿಯ ಶಿಕ್ಷಕರನ್ನು LKG- UKG ಶಿಕ್ಷಕರಾಗಿ ನಿಯೋಜಿಸಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಲಾಖೆಯ ಈ ನಿರ್ಧಾರಕ್ಕೆ ವಿರೋಧ ಪಡಿಸುತ್ತಿವೆ. ಬೋಧನೆಗೆ ಕಡ್ಡಾಯವಾಗಿ ವಿಶೇಷ ತರಬೇತಿ ಹೊಂದಿರುವ ಅತಿಥಿ ಶಿಕ್ಷಕರನ್ನೇ ನೇಮಕ ಮಾಡಲು ಒತ್ತಾಯಕೇಳಿ ಬರುತ್ತಿದೆ.

ಶಾಲೆಗಳಲ್ಲಿ LKG- UKG ಆರಂಭಿಸಲು ಕಲಿಕಾ ಸಾಮಾಗ್ರಿಗಳು ಅಗತ್ಯವಿದ್ದು, ಕಲಿಕೆ ವಾತಾವರಣವನ್ನು ವಿಶೇಷ ರೀತಿಯಲ್ಲಿ ಕೊಠಡಿಗಳ ಅವಶ್ಯಕತೆ ಕೂಡ ಇದೆ. ಹೀಗಾಗಿ ಮೊದಲು ಕಲಿಕೆಗೆ ಬೇಕಾದ ಸೌಕರ್ಯ ಹಾಗೂ ಬೋಧನೆಗೆ ಅತಿಥಿ ಶಿಕ್ಷಕರನ್ನ ನೇಮಿಸಿ ಎಂದು ಇಲಾಖೆಗೆ ಒತ್ತಾಯ ಮಾಡಲಾಗುತ್ತಿದೆ.