Home News ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಭಾರತೀಯರ ಸುಸೈಡ್!!

ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಭಾರತೀಯರ ಸುಸೈಡ್!!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಕಳೆದ ಏಳು ವರ್ಷಗಳಲ್ಲಿ ಕುವೈತ್ ನಲ್ಲಿ 342 ಮಂದಿ ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುವೈತ್ ಸರ್ಕಾರ ಅಂಕಿ ಅಂಶ ಬಿಡುಗಡೆ ಮಾಡಿದೆ.

ಕುವೈತ್ ನ ಆಂತರಿಕ ಸಚಿವಲಾಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 2015 ರಿಂದ 2021 ರ ನವೆಂಬರ್ 18 ವರೆಗೆ ಕಳೆದ ಏಳು ವರ್ಷಗಳಲ್ಲಿ  ಸ್ಥಳೀಯರು ಮತ್ತು ವಿದೇಶಿಯರು ಸೇರಿದಂತೆ 620 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 342 ಮಂದಿ ಅಂದರೆ, ಶೇಕಡಾ 55% ಮಂದಿ ಭಾರತೀಯರು ಕಳೆದ ಆರು ವರ್ಷದಲ್ಲಿ ದೇಶದಲ್ಲಿ 132 ಕೊಲೆಗಳು ನಡೆದಿವೆ. ಈ ಅವಧಿಯಲ್ಲಿ 54 ಸ್ಥಳೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಇತರೆ ದೇಶಗಳ ಸಂಖ್ಯೆ ಈ ಕೆಳಗಿನಂತಿವೆ:
ಬಾಂಗ್ಲಾದೇಶ.  53
ನೇಪಾಳ          45
ಶ್ರೀಲಂಕಾ         25
ಪಿಲಿಪ್ಪಿನ್ಸ್        24
ಈಜಿಫ್ಟ್           19
ಪೌರತ್ವ ರಹಿತ   11
ಇಥಿಯೋಪಿಯ 7

ರಾಷ್ಟ್ರೀಯತೆ ಗುರುತಿಸದ 40 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸತ್ ಸದಸ್ಯ ಅಬ್ದುಲ್ ಆಜೀಜ್ ಅಲ್ ಸಖಬಿ ಅವರ ಪ್ರಶ್ನೆಗೆ ಸಚಿವಲಾಯ ಉತ್ತರಿಸಿದೆ.