Home News Kukke Subramanya: ಪೂಜೆಗೆಂದು ಬಂದಿದ್ದ ವಿದ್ಯಾರ್ಥಿನಿಯ ಎದೆಗೆ ಕೈ ಹಾಕಿ ದೈಹಿಕ ಹಿಂಸೆ ನೀಡಿದ ಕಾಮುಕ...

Kukke Subramanya: ಪೂಜೆಗೆಂದು ಬಂದಿದ್ದ ವಿದ್ಯಾರ್ಥಿನಿಯ ಎದೆಗೆ ಕೈ ಹಾಕಿ ದೈಹಿಕ ಹಿಂಸೆ ನೀಡಿದ ಕಾಮುಕ – ಮುಂದೆನಾಯಿತು?

Hindu neighbor gifts plot of land

Hindu neighbour gifts land to Muslim journalist

Kukke Subramanya: ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನಕ್ಕೆ ಬಂದಿದ್ದಂತಹ ಕಾಲೇಜು ವಿದ್ಯಾರ್ಥಿನಿಯೊಂದಿಗೆ ವ್ಯಕ್ತಿ ವರ್ಗವನು ಅನುಚಿತ ವರ್ತನೆ ತೋರಿ ಅಸಭ್ಯ ಮೆರೆದಿದ್ದಾನೆ. ಇದೀಗ ಆ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.

ಸ್ಥಳೀಯ ಕಾಲೇಜು ವಿದ್ಯಾರ್ಥಿಯೋಬ್ಬಳು ದೀಪಾವಳಿ ಹಬ್ಬ ಪ್ರಯುಕ್ತ ತನ್ನ ಮನೆಗೆ ಬಂದಿದ್ದರು. ನ.2 ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ(Kukke Subramanya)ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆಯಲ್ಲಿ ಭಾಗವಹಿಸಿ ಮನೆಯವರ ಜೊತೆ ಭೋಜನಾ ಶಾಲೆಯತ್ತ ತೆರಳಿದ್ದರು. ಈ ವೇಳೆ ಶಿವರಾಮ ಭಟ್ ಎಂಬಾತ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

ಅಂದಹಾಗೆ ಯುವತಿ ಊಟಕ್ಕೆ ಕುಳಿತುಕೊಳ್ಳಲು ಗೋಡೆ ಬದಿ ನಿಂತು ಕಾಯುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಓಡಾಟ ಮಾಡುತ್ತಿದ್ದ ಆರೋಪಿ ಶಿವರಾಮ ಭಟ್(Shivaram Bhat) ಯುವತಿಯ ಎದೆ ಭಾಗಕ್ಕೆ ಕೈ ಹಾಕಿ ದೈಹಿಕ ಹಿಂಸೆ ನೀಡಿರುವುದಾಗಿ ಆರೋಪಿಸಲಾಗಿದೆ. ಅಲ್ಲದೆ ಪ್ರಶ್ನಿಸಿದಕ್ಕೆ ಆರೋಪಿ ಅವಾಚ್ಯ ಶಬ್ದ ಗಳಿಂದ ಬೈದಿರುವುದಾಗಿ ದೂರಲಾಗಿದೆ.

ಇನ್ನು ಈತ ಸುಬ್ರಹ್ಮಣ್ಯದಲ್ಲೇ ಜೆರಾಕ್ಸ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದು ದೇಗುಲ ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಯುವತಿಯ ದೂರನ್ನು ಪರಿಶೀಲಿಸಿ ಸುಬ್ರಹ್ಮಣ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ( BNS ACT -75,352 ಕಾಲಂ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.