Home News ಇತಿಹಾಸದಲ್ಲಿ ಭದ್ರತೆಗೆ ಕ್ಷತ್ರಿಯ ಸಮಾಜ ಕೊಡುಗೆ ಅಪಾರ: ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್

ಇತಿಹಾಸದಲ್ಲಿ ಭದ್ರತೆಗೆ ಕ್ಷತ್ರಿಯ ಸಮಾಜ ಕೊಡುಗೆ ಅಪಾರ: ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್

Hindu neighbor gifts plot of land

Hindu neighbour gifts land to Muslim journalist

Mangalore: ಇತಿಹಾಸದಲ್ಲಿ ದೇಶದ ಭದ್ರತೆಗೆ ಕ್ಷತ್ರಿಯ ಸಮಾಜದ ಕೊಡುಗೆ ಅಪಾರ ಎಂದು ಮಾಜಿ ಸಚಿವ ಕೃಷ್ಣ ಜಿ.ಪಾಲೇಮಾರ್‌ ಹೇಳಿದ್ದಾರೆ. ಮಂಗಳೂರಿನ ರಾಮ ಕ್ಷತ್ರಿಯ ಸೇವಾ ಸಂಘದ ವತಿಯಿಂದ ಮೋರ್ಗನ್ಸ್‌ ಗೇಟ್‌ನಲ್ಲಿರುವ ಪಾಲೆಮಾರ್ ಗಾರ್ಡನ್‌ನಲ್ಲಿ ‘ಕ್ಷಾತ್ರ ಸಂಗಮ-3’ ರಾಮಕ್ಷತ್ರಿಯರ ಸಮಾವೇಶದ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮ ಕ್ಷತ್ರಿಯ ಸಂಗಮದ ಹೆಗ್ಗುರುತು. ಹಿಂದಿನ ಕಾಲದಲ್ಲಿ ನಾಲ್ಕು ಪಂಗಡಗಳಿದ್ದವು. ಇವತ್ತು ನೂರಾರು ಪಂಗಡಗಳಾಗಿವೆ. ರಾಜ್ಯದಲ್ಲಿ 39 ಪಂಗಡಗಳಿವೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಒಗ್ಗೂಡಬೇಕು. ಇದು ಇಲ್ಲಿಗೆ ಮಾತ್ರ ನಿಲ್ಲದೆ ಪ್ರತಿ ಜಿಲ್ಲೆಯಲ್ಲಿ ಕ್ಷಾತ್ರ ಸಂಗಮ ನಡೆಸಿ ಒಗ್ಗೂಡಿಸಬೇಕು. ನಮ್ಮ ನಿಷ್ಠಾವಂತ ಸಮಾಜದಲ್ಲಿ ಪೋಲಿಸ್ ಇಲಾಖೆ ಇದ್ದು, ಎಲ್ಲಾ ನಾಯಕರು ಮುಂದೆ ಬರಬೇಕು. ಹುಟ್ಟಿದ ಮೇಲೆ ಸಮಾಜಕ್ಕೆ ಕೊಡುಗೆ ಕೊಡಬೇಕು. ದೇಶಭಕ್ತಿ, ದೈವ ಭಕ್ತಿಯನ್ನು ನೀಡಬೇಕು. ಮುಂದಿನ ದಿನಕ್ಕೆ ಒಗ್ಗಟ್ಟಿನ ಮಂತ್ರದೊಂದಿಗೆ ಈ ಕ್ಷಾತ್ರ ಸಂಗಮ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ವಾಗ್ಮಿ ಶ್ರೀಕಾಂತ್ ಶೆಟ್ಟಿ ಅವರು ಕ್ಷಾತ್ರ ಸಂಗಮದ ಹೆಸರು ಕಂಡು ರೋಮಾಂಚನಗೊಂಡು ಈ ಕಾರ್ಯಕ್ರಮಕ್ಕೆ ಬಂದೆ ಎಂದು ತಿಳಿಸಿದರು.

ಯಾರು ಸಮಾಜದ ರಕ್ಷಣೆಗೆ ನಿಲ್ಲುತ್ತಾನೋ ಅವನು ಕ್ಷತ್ರಿಯ. ಎಲ್ಲಾ ಕಡೆ ಅಕ್ರಮಣ ಮಾಡಿ ಕೊನೆಗೆ ಕರಾವಳಿ ಭಾಗಕ್ಕೆ ಬಂದರು. ಇತಿಹಾಸದ ಪ್ರಕಾರ ಉಳ್ಳಾಲದ ರಾಣಿ ಅಬ್ಬಕ್ಕ ರಾಣಿಯ ಪರಾಕ್ರಮದಿಂದ ಪೊರ್ಚುಗೀಸರನ್ನು ಒದ್ದು ಓಡಿಸಿದ್ದಾರೆ. ಹಾಗೆಯೇ ಬೇಕಲ್ ಕೋಟೆಯ ತಿಮ್ಮ ನಾಯಕನ ಕಥೆಯ ಬಗ್ಗೆ ವಿವರಿಸಿದರು. ಬ್ರಿಟಿಷರು ರಾಮಕ್ಷತ್ರಿಯನ್ನು ಹಂಗಿಸಿದ್ದರು. ಯುದ್ದದಲ್ಲಿ ಬ್ರಿಟಿಷರು ಗೆದ್ದರೂ, ಬೇಕಲ ತಿಮ್ಮ ನಾಯಕನನ್ನು ಫಿರಂಗಿ ಬಾಯಿಗೆ ಕಟ್ಟಿದ್ದು ಈ ಬ್ರಿಟಿಷರು. ತಿಮ್ಮ ನಾಯಕನನ್ನು ಫಿರಂಗಿ ಬಾಯಿಗೆ ಇಟ್ಟು ಉಡಾಯಿಸಿ ದೇಹವನ್ನು ಛಿದ್ರ ಮಾಡಿ ಕೊಂದು ಹಾಕಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ತಿಮ್ಮನಾಯಕನ್ನು ಈ ಕ್ಷತ್ರಿಯ ಸಮಾಜ ಸ್ಮರಿಸಬೇಕು ಎಂದರು.

ರಾಮ-ಕ್ಷತ್ರಿಯ ಪರಾಕ್ರಮದ ಸಂಗಮ. ಅಲ್ಲಲ್ಲಿ ಕೋಟೆಯನ್ನು ಕಟ್ಟಿದ ನಂಬಿಕಸ್ಥ ಸಮಾಜದ ಇತಿಹಾಸದ ಬಗ್ಗೆ,. ಬಿಕ್ಷು ಲಕ್ಷಣಾನಂದ ಸ್ವಾಮೀಜಿಯನ್ನು ಸ್ಮರಿಸಿದರು. ಅಂದು ಮಣ್ಣಿನಲ್ಲಿ ನೆಡಿಸಿದ ಸಸಿ ಇಂದು ಮರವಾಗಿ ಬೆಳೆದಿದೆ. ಕ್ಷತ್ರಿಯತ್ವ ಅಂದರೆ ಜಾತಿ ಅಲ್ಲ, ಅದು ಮನೋಸ್ಥಿತಿ ಎಂದರು. ಔರಂಗಜೇಬನ ದಾಳಿಯನನ್ನ ಘಾಟಿಯಲ್ಲೆ ತಡೆಯುವಂತಹ ವೀರರು ಈ ಕ್ಷತ್ರಿಯ ಸಮಾಜ ಎಂದರು.

ಸಮಾರಂಭದಲ್ಲಿ ಸಿ.ಹೆಚ್.ಮುರಳೀಧರ್, ಯೋಗಿಶ್ ಜೆಪ್ಪು, ವಿನೋದ್ ಕುಮಾರ್, ಅನಂತ ಪದ್ಮನಾಭ, ಸಂದೀಪ್ ಜೆ, ರಾಘವೇಂದ್ರ ರಾವ್, ರಾಮಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಸುರೇಶ್ ರಾವ್, ದಿನೇಶ್, ಸಂಘದ ಆಂತರಿಕ ಲೆಕ್ಕಪರಿಶೋಧಕ ಶಿವಪ್ರಸಾದ್ ಉಪಸ್ಥಿತರಿದ್ದರು.