Home News ಭ್ರಷ್ಟಾಚಾರದ ವಿರುದ್ಧ ಸದಾ ಧ್ವನಿಯೆತ್ತಲಿದೆ KRS ಪಕ್ಷ

ಭ್ರಷ್ಟಾಚಾರದ ವಿರುದ್ಧ ಸದಾ ಧ್ವನಿಯೆತ್ತಲಿದೆ KRS ಪಕ್ಷ

Hindu neighbor gifts plot of land

Hindu neighbour gifts land to Muslim journalist

ಭ್ರಷ್ಟ ಅಧಿಕಾರಿಗಳ ಲಂಚಕೋರತನವನ್ನು ಪ್ರಶ್ನಿಸಲಾಗದೆ, ಪೀಡಕ ಪೊಲೀಸರ ಕಿರುಕುಳ, ಸುಲಿಗೆ, ದೌರ್ಜನ್ಯವನ್ನು ಎದುರಿಸಲಾಗದೆ,
ಅಸಹಾಯಕತೆ ಮತ್ತು ಜಿಗುಪ್ಸೆಯಿಂದ ನಲುಗುತ್ತಿದ್ದ ನಾಡಿನ ಜನರಿಗೆ ಆಶಾಕಿರಣವಾಗಿ ಬಂದಿದ್ದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ. ರಾಜ್ಯದ ಬಡವರ, ನೊಂದವರ, ಪ್ರಜ್ಞಾವಂತರ ಪಕ್ಷ.

ಸತ್ಯ, ಅಹಿಂಸೆ, ಸ್ವಾತಂತ್ರ್ಯ, ಸಮಾನತೆ, ಪ್ರಜಾಡಳಿತ, ಸಂವಿಧಾನ, ಸರ್ವೋದಯ ಮತ್ತು ಕಲ್ಯಾಣ ರಾಜ್ಯದ ವಿಷಯದಲ್ಲಿ ಪಕ್ಷ ಎಂದಿಗೂ ರಾಜಿಯಾಗುವುದಿಲ್ಲ.

ಹಾಗಾಗಿಯೇ, KRS ಪಕ್ಷದ ಪರ ಜನಸಾಮಾನ್ಯರ ಒಲವು, ಅಭಿಮಾನ ಮತ್ತು ಬೆಂಬಲ ದಿನೇದಿನೆ ಹೆಚ್ಚುತ್ತಲೇ ಇದೆ.

ಇದೇ ಸಂದರ್ಭದಲ್ಲಿ, ಭ್ರಷ್ಟಾಚಾರ ಮತ್ತು ಅಕ್ರಮದಲ್ಲಿ ಪಾಲುದಾರರಾಗಿರುವವರು ಹಾಗೂ ಯಾವುದ್ಯಾವುದೋ ಕಾರಣಕ್ಕೆ ಭ್ರಷ್ಟರ ಸಹವಾಸದಲ್ಲಿ ಇರುವವರು ಮತ್ತು ಅದನ್ನು ತೊರೆಯಲಾರದವರು ಪಕ್ಷವನ್ನು ವಿರೋಧಿಸುವುದೂ ನಡೆಯುತ್ತಿರುತ್ತದೆ. ವಿರೋಧಿಸುವವರು ಯಾರು ಎನ್ನುವುದು ಪಕ್ಷ ನಿಜಕ್ಕೂ ಯಾರ ಪರ ಎನ್ನುವುದನ್ನೂ ಸ್ಪಷ್ಟವಾಗಿ ತೋರಿಸುತ್ತದೆ. ನೆನಪಿರಲಿ, “ಸಾಮಾಜಿಕ ನ್ಯಾಯ”ದ ಸಾಕಾರಕ್ಕೆ ಇಂದಿನ ಅತಿದೊಡ್ಡ ಶತ್ರು ವ್ಯವಸ್ಥೆಯಲ್ಲಿಯ ಅದಕ್ಷತೆ, ಭ್ರಷ್ಟಾಚಾರ ಮತ್ತು ಲಂಚಕೋರತನ.

ಇವೆಲ್ಲವನ್ನೂ ನಾವು ನಮ್ಮ ಪಕ್ಷದ ಇತ್ತೀಚಿನ ಘೋಷಣೆಗಳಲ್ಲಿ ಸೂಚ್ಯವಾಗಿ ಹೇಳುತ್ತಿರುತ್ತೇವೆ.

? ಭ್ರಷ್ಟರೇ, ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ
? ನಾಡಪ್ರೇಮಿಗಳೇ, ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ

? ಬಸವಣ್ಣನ “ಕಲ್ಯಾಣ ಕರ್ನಾಟಕ”, ನಿರ್ಮಾಣವಾಗಲಿ
? ಕುವೆಂಪುರವರ “ಸರ್ವೋದಯ ಕರ್ನಾಟಕ”, ನಿರ್ಮಾಣವಾಗಲಿ.

? “ಲಂಚಮುಕ್ತ ಕರ್ನಾಟಕ”, ನಿರ್ಮಾಣವಾಗಲಿ
? “ಭ್ರಷ್ಟಾಚಾರಮುಕ್ತ ಕರ್ನಾಟಕ”, ನಿರ್ಮಾಣವಾಗಲಿ

ಎಲ್ಲರಿಗೂ ಶುಭವಾಗಲಿ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ. ?.

09-06-2022.