Home News KPTCL ನಿಂದ ಮಹತ್ವದ ಮಾಹಿತಿ ಪ್ರಕಟ!

KPTCL ನಿಂದ ಮಹತ್ವದ ಮಾಹಿತಿ ಪ್ರಕಟ!

KPTCL

Hindu neighbor gifts plot of land

Hindu neighbour gifts land to Muslim journalist

KPTCL: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ಎಸ್ಕಾಂಗಳಲ್ಲಿನ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ (ವಿದ್ಯುತ್ / ಸಿವಿಲ್), ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿ ಸಿದಂತೆ ಇದೀಗ ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.

2022 ರ ಜುಲೈ, ಆಗಸ್ಟ್‌ ತಿಂಗಳಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ಎಸ್ಕಾಂಗಳಲ್ಲಿನ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ (ವಿದ್ಯುತ್ / ಸಿವಿಲ್), ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದಿದ್ದವು. ಅಭ್ಯರ್ಥಿಗಳು (Candidates)ಗಳಿಸಿದ ಅಂಕಗಳ(Marks) ಅನುಸಾರ ಮೆರಿಟ್‌ ಲಿಸ್ಟ್ ತಯಾರಿಸಲಾಗಿದ್ದು, ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಕರೆಯಲಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಇತ್ತೀಚೆಗೆ ಬಿಡುಗಡೆ ಮಾಡಲಾಗಿ, ಸದ್ಯ, ಸದರಿ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ (Document Verification Process) ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಕೆಪಿಟಿಸಿಎಲ್ ಎಇ, ಜೆಇ, ಕಿರಿಯ ಸಹಾಯಕ ಹುದ್ದೆಗಳಿಗೆ ಮೆರಿಟ್ ಆಧಾರದಲ್ಲಿ ದಾಖಲೆ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ (KPTCL Recruitment Document Verification)ಡಾಕ್ಯುಮೆಂಟ್‌ ವೆರಿಫಿಕೇಶನ್‌ ಪ್ರಕ್ರಿಯೆಯನ್ನು ಸರ್ಕಾರದ ಡಿಜಿಲಾಕರ್ ತಂತ್ರಾಂಶವನ್ನು(Digi Locker) ಬಳಸಿಕೊಂಡು ಆನ್‌ಲೈನ್‌(Online) ಮೂಲಕ ದಾಖಲಾತಿಗಳ ಪರಿಶೀಲನೆಯನ್ನು ನಡೆಸಲು ಸೂಚಿಸಲಾಗಿದೆ.

ದಾಖಲಾತಿಗಳ ಪರಿಶೀಲನೆಗಾಗಿ ಎಲ್ಲ ಅವಶ್ಯಕ ಮಾಹಿತಿಯನ್ನು ಕವಿಪ್ರನಿನಿ (KPTCL)ವೆಬ್‌ಸೈಟ್‌ https://kptcl.karnataka.gov.in ರಲ್ಲಿ ಅಪ್‌ಲೋಡ್‌ ಮಾಡಲು ಸೂಚಿಸಲಾಗಿದೆ. ಈ ಸಂಬಂಧವಾಗಿ ಪರಿಶೀಲನೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ನಿಗಮದ ವೆಬ್‌ಸೈಟ್‌ನಲ್ಲಿ ಸೂಕ್ತ ರೀತಿಯಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಸೂಚಿಸಲಾಗಿದೆ. ದಾಖಲೆಗಳ ಅಪ್‌ಲೋಡ್‌ ಮಾಡಲು ವೆಬ್‌ಸೈಟ್‌ ಲಿಂಕ್ ಅನ್ನು 14-03-2023 ರಂದು ಬಿಡುಗಡೆ ಮಾಡಲಾಗುತ್ತದೆ. ದಾಖಲೆಗಳ ಅಪ್‌ಲೋಡ್‌ಗೆ 14-03-2023 ರಿಂದ 20-03-2023 ರವರೆಗೆ ನಿಗದಿತ ಪಟ್ಟಿ ನೀಡಲಾಗಿದೆ.

ಅಭ್ಯರ್ಥಿಗಳು ದಾಖಲೆ ಪರಿಶೀಲನೆಯ ಮೊದಲ ಭಾಗವಾಗಿ, ಡಿಜಿಲಾಕರ್ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ತಮ್ಮ ಆಧಾರ್ ಸಂಖ್ಯೆಯೊಂದಿಗೆ (Aadhar Number) ಲಾಗಿನ್‌ (Login) ಆಗಿ, 10th, 12th, ಪದವಿ / ಡಿಪ್ಲೊಮ ಅಂಕಪಟ್ಟಿಗಳು / ಪ್ರಮಾಣ ಪತ್ರಗಳು, ಜಾತಿ ಪ್ರಮಾಣ ಪತ್ರ, ಹೆಚ್‌ಕೆ ಪ್ರಮಾಣ ಪತ್ರ, UDID ಕಾರ್ಡ್‌ ಪ್ರಮಾಣ ಪತ್ರಗಳನ್ನು Issued Documents ನಲ್ಲಿ ಪಡೆದುಕೊಳ್ಳಬೇಕು.

ಒಂದು ವೇಳೆ ಡಿಜಿಲಾಕರ್‌ನಲ್ಲಿ ಪ್ರಮಾಣ ಪತ್ರಗಳನ್ನು ಪಡೆಯಲಾಗದೇ ಇದ್ದಲ್ಲಿ 200KB ಮೀರದಂತೆ ಪಿಡಿಎಫ್ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.ಎಲ್ಲ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ ಬಳಿಕ ಅಭ್ಯರ್ಥಿಗಳು ತಮ್ಮ ಆಧಾರ್ ಸಂಖ್ಯೆಯೊಂದಿಗೆ e-sign ಮಾಡಬೇಕು.ಎಲ್ಲಾ ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಅಪ್‌ಲೋಡ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರ e-sign ಮಾಡಬೇಕು. ಇದರ ಒಂದು ಮುದ್ರಿತ ಪ್ರತಿಯನ್ನು ಸಾಫ್ಟ್‌ ಕಾಪಿ ತೆಗೆದಿರಿಸಿಕೊಳ್ಳುವುದು ಉತ್ತಮ.