Home News Bhaskar Belchapada: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ -ಪ್ರಮುಖ ಸೂತ್ರಧಾರ ಭಾಸ್ಕರ್ ಬೆಳ್ಚಪಾಡನ ಹಿನ್ನೆಲೆ ಕೇಳಿದ್ರೆ...

Bhaskar Belchapada: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ -ಪ್ರಮುಖ ಸೂತ್ರಧಾರ ಭಾಸ್ಕರ್ ಬೆಳ್ಚಪಾಡನ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ!!

Hindu neighbor gifts plot of land

Hindu neighbour gifts land to Muslim journalist

Bhaskar Belchapada: ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಸೂತ್ರಧಾರರಾದ, ಮುದುಕ ಮಹಾಶಯರಾದ ಭಾಸ್ಕರ್ ಬೆಳ್ಚಪಾಡ ಹಾಗು ನಜೀರ್ ಎಂಬಾತನನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆನ್ನಲ್ಲೇ ಪ್ರಮುಖ ಸೂತ್ರಧಾರ ಭಾಸ್ಕರ್ ಬೆಳ್ಚಪಾಡನ ಹಿನ್ನೆಲೆಯ ಕೆಲವು ರೋಚಕ ವಿಚಾರಗಳು ಬಯಲಾಗಿದೆ.

ಭಾಸ್ಕರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲ ಮೂಲದವನು. 2000 ನೇ ಇಸವಿಯಲ್ಲಿ ಊರು ಬಿಟ್ಟು ಮುಂಬೈ ಸೇರಿದ್ದ. 25 ವರ್ಷದಿಂದ ಮುಂಬೈನಲ್ಲೇ ವಾಸವಿದ್ದ. ಮೊದಲಿಗೆ ಮುಂಬೈನ ಸಣ್ಣ ಸಣ್ಣ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಏಕಾಏಕಿ ಶ್ರೀಮಂತನಾಗಬೇಕು ಎಂಬ ಹಂಬಲದಿಂದ ಅಪರಾಧ ಜಗತ್ತಿಗೆ ಎಂಟ್ರಿಯಾಗಿದ್ದ. ಹೀಗೆ ಒಂದರ ಮೇಲೆ ಒಂದು ಅಪರಾಧಗಳನ್ನು ಎಸಗುತ್ತಿದ್ದ ಈ ಕಳ್ಳ ಮಹಾಶಯನ ಬಹುತೇಕ ಎಲ್ಲ ದರೋಡೆಯೂ ವಿಫಲವಾಗಿದ್ದವು.

2011ರಲ್ಲಿ ನ್ದೆಹಲಿಯಲ್ಲಿ ಮೊದಲ ಬಾರಿ ದರೋಡೆಗೆ ಸ್ಕೆಚ್ ಹಾಕಿದ್ದ. ಆದರೆ ದರೋಡೆ ವೇಳೆಯೇ ಅರೆಸ್ಟ್ ಆಗಿ ತಿಹಾರ್ ಜೈಲು ಸೇರಿದ್ದ. ಮೂರು ವರ್ಷ ತಿಹಾರ್ ಜೈಲಲ್ಲಿ ಕಂಬಿ ಎಣಿಕೆ‌ ಮಾಡಿದ್ದ. ಈ ವೇಳೆ ಸಾಕಷ್ಟು ನಟೋರಿಯಸ್ ಕ್ರಿಮಿನಲ್​ಗಳ ಸಂಪರ್ಕವಾಗಿತ್ತು. ಕೊನೆಗೆ ಹೇಗೋ ಜೈಲಿನಿಂದ ಬಿಡುಗಡೆಯಾದ ಈತ ಹೊರಬಂದ ಬಳಿಕವು ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ. ದೊಡ್ಡ ಆಭರಣ ಮಳಿಗೆ, ಫೈನಾನ್ಸ್ ಕಂಪೆನಿಗಳೇ ಭಾಸ್ಕರ್ ಟಾರ್ಗೆಟ್ ಆಗಿರುತ್ತಿದ್ದವು. ಬೇರೆ ಕುಖ್ಯಾತ ದರೋಡೆಕೊರರ ತಂಡದ ಮೂಲಕ ಈತ ದರೋಡೆ ಮಾಡಿಸುತ್ತಿದ್ದ.

ಕೋಟೆಕಾರು ಬ್ಯಾಂಕ್ ದರೋಡೆಗೆ ಸ್ಕೆಚ್ ಹಾಕಿದ್ದು ಹೇಗೆ?

ಏತನ್ಮಧ್ಯೆ, ಭಾಸ್ಕರ್​ಗೆ ಕಾಸರಗೋಡಿನ ಕರೀಂ ಎಂಬಾತನ ಜೊತೆ ಪರಿಚಯವಾಗಿದೆ. ಕರೀಂ ಮುಖಾಂತರ ಕೋಟೆಕಾರು ಸುತ್ತಮುತ್ತಲಿನ ನಿವಾಸಿ ನಜೀರ್ ಎಂಬಾತನನ್ನು ಸಂಪರ್ಕ ಮಾಡಿದ್ದಾರೆ. ಜೀವನದಲ್ಲಿ ಏನೂ ಸಿಗಲಿಲ್ಲ ಎಂದು ನಜೀರ್ ಜೊತೆ ಭಾಸ್ಕರ್ ಬೇಸರ ತೋಡಿಕೊಂಡಿದ್ದ. ಈ ವೇಳೆ ನಜೀರ್, ಕೋಟೆಕಾರು ಬ್ಯಾಂಕ್ ಡಕಾಯಿತಿ ಬಗ್ಗೆ ಪ್ಲಾನ್ ನೀಡಿದ್ದ. ಐದೂವರೆ ತಿಂಗಳ ಹಿಂದೆ ಕೋಟೆಕಾರು ಮಾಡೂರಿಗೆ ಬಂದು ಭಾಸ್ಕರ್ ದರೋಡೆಗೆ ಸ್ಕೆಚ್ ಹಾಕಿದ್ದ. ಬಳಿಕ ಮಾಡೂರು-ಬೀರಿಯಲ್ಲಿ ಸಿಕ್ಕಿ ಚರ್ಚೆ ಮಾಡಿ, ಬಳಿಕ ಮತ್ತೊಮ್ಮೆ ಬಂದು ಭಾಸ್ಕರ್ ಅಂಡ್ ಟೀಂ ಬ್ಲೂ ಪ್ರಿಂಟ್ ರೆಡಿ ಮಾಡಿಕೊಂಡಿತ್ತು.

 

ಕೋಟೆಕಾರ್ ಬ್ಯಾಂಕ್​​ನಲ್ಲಿ ಯಾವಾಗಲೂ 20 ಕೆಜಿಗಿಂತ ಹೆಚ್ಚು ಚಿನ್ನವಿರುತ್ತದೆ ಎಂದು ನಜೀರ್ ಮಾಹಿತಿ ನೀಡಿದ್ದ. ಮಹಿಳಾ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತಾರೆ. ಕೆಸಿ ರೋಡ್​ನಲ್ಲಿ ಶುಕ್ರವಾರ ಪ್ರಾರ್ಥನೆ ಸಮಯದಲ್ಲಿ ಯಾರು ಇರುವುದಿಲ್ಲ ಎಂದು ನಜೀರ್ ಮಾಹಿತಿ ನೀಡಿದ್ದ. ಯಾರಿಗೆ ದರೋಡೆಯ ಸುಪಾರಿ ನೀಡೋದು ಎಂದು ಚಿಂತಿಸಿದ ವೇಳೆ ಮುರುಗನ್ ಡಿ ಹೆಸರು ಮುನ್ನಲೆಗೆ ಬಂದಿತ್ತು. ನಂತರ ಭಾಸ್ಕರ್ ಹಾಗು ನಜೀರ್ ಜತೆಯಾಗಿ ಮುರುಗನ್ ಡಿ ಸಂಪರ್ಕಿಸಿದ್ದರು. ಆತನಿಗೆ ದರೋಡೆಯ ಜವಾಬ್ದಾರಿ‌ ವಹಿಸಲಾಗಿತ್ತು. ತನ್ನ ನಿಜವಾದ ಹೆಸರು ಮರೆಮಾಚಿ ಶಶಿ ತೆವರ್ ಎಂದು ಭಾಸ್ಕರ್ ಮಾತುಕತೆ ನಡೆಸಿದ್ದ. ಬಳಿಕ ಎಲ್ಲವೂ ಅಂದುಕೊಂಡಂತೆ ನಡೆಯಿತು. ಆದರೆ ಕೊನೆಗೂ ಮತ್ತೆ ಭಾಸ್ಕರ್ನ ದುರಾದೃಷ್ಟ ಕೆಟ್ಟಿತ್ತು ಎಂದು ಕಾಣಿಸುತ್ತದೆ. ಆತ ಮತ್ತೆ ತಗಲಾಕ್ಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.