Home News ಕೋಟ: ಭೀಕರ ರಸ್ತೆ ಅಪಘಾತಕ್ಕೆ ಓರ್ವ ಬಲಿ-ಇಬ್ಬರು ಗಂಭೀರ!! ಎಂದಿನಂತೆ ಮೀನು ವ್ಯಾಪಾರಕ್ಕೆ ಹೊರಟಿದ್ದಾತನ ಮೇಲೆ...

ಕೋಟ: ಭೀಕರ ರಸ್ತೆ ಅಪಘಾತಕ್ಕೆ ಓರ್ವ ಬಲಿ-ಇಬ್ಬರು ಗಂಭೀರ!! ಎಂದಿನಂತೆ ಮೀನು ವ್ಯಾಪಾರಕ್ಕೆ ಹೊರಟಿದ್ದಾತನ ಮೇಲೆ ಎರಗಿದ ಜವರಾಯ

Hindu neighbor gifts plot of land

Hindu neighbour gifts land to Muslim journalist

ಮೀನು ಸಾಗಾಟದ ವಾಹನ, ಕಾರು, ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದು, ಮೀನು ಸಾಗಾಟದ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟು ಬೈಕ್ ಸವಾರರಿಬ್ಬರೂ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕೋಟ ಸಮೀಪ ನಿನ್ನೆ ನಡೆದಿದೆ.

ಮೃತ ವ್ಯಕ್ತಿಯನ್ನು ಮಧುವನ ಅಚ್ಚಾಡಿ ನಿವಾಸಿ ಸುರೇಶ ಮರಕಲ(40) ಎಂದು ಗುರುತಿಸಲಾಗಿದ್ದು, ಬೈಕ್ ಸವಾರರಾದ ರಾಜು ಮರಕಲ ಹಾಗೂ ಶಿರಿಯಾರ ನಿವಾಸಿ ಸುಬ್ರಹ್ಮಣ್ಯ ಕುಲಾಲ್ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಂದಿನಂತೆ ಬೆಳಗ್ಗೆ ಮೀನು ವ್ಯಾಪಾರಕ್ಕೆ ತನ್ನ ವಾಹನದಲ್ಲಿ ಹೊರಟಿದ್ದಾಗ, ಅತೀ ವೇಗವಾಗಿ ಬಂದ ಕಾರೊಂದು ಮೀನಿನ ವಾಹನ ಹಾಗೂ ಬೈಕ್ ಗೆ ಸರಣಿ ಅಪಘಾತ ನಡೆಸಿದೆ. ಅಪಘಾತದ ತೀವ್ರತೆಗೆ ಅಪ್ಪಚ್ಚಿಯಾಗಿದ್ದ ಮೀನಿನ ವಾಹನದಿಂದ ಮೃತ ವ್ಯಕ್ತಿಯ ಮೃತದೇಹ ಹೊರತೆಗೆಯಲು ಸಾರ್ವಜನಿಕರು ಹರಸಾಹಸ ಪಡಬೇಕಾಯಿತು.

ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.