Home News Koragajja film: ಸಾರ್ಲ ಪಟ್ಟದ ಮಾಯೆ ಸ್ವಾಮೀ ಕೊರಗಜ್ಜ ತುಳು ಚಲನಚಿತ್ರ: ಕೊರಗಜ್ಜನ ಮೂಲಸ್ಥಳ ಜೀರ್ಣೋದ್ಧಾರಕ್ಕೆ...

Koragajja film: ಸಾರ್ಲ ಪಟ್ಟದ ಮಾಯೆ ಸ್ವಾಮೀ ಕೊರಗಜ್ಜ ತುಳು ಚಲನಚಿತ್ರ: ಕೊರಗಜ್ಜನ ಮೂಲಸ್ಥಳ ಜೀರ್ಣೋದ್ಧಾರಕ್ಕೆ ತಂಡ ನಿರ್ಧಾರ

Hindu neighbor gifts plot of land

Hindu neighbour gifts land to Muslim journalist

Koragajja film: ಕಾರುಣಿಕ ಪುರುಷ, ಮಾಯದ ಮಾಯಗಾರ, ಸಾಮಾನ್ಯ ಜನರ ದೈವ ಪುರುಷ ಕೊರಗಜ್ಜನ(Koragajja) ಮಹಿಮೆ ಎಲ್ಲರಿಗೂ ತಿಳಿದದ್ದೇ. ಇತ್ತೀಚೆಗೆಂತು ಕೊರಗಜ್ಜನ ನಂಬುವ ಭಕ್ತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಹಾಗೆ ನಂಬಿದ ಭಕ್ತರನ್ನು(Devotees) ಎಂದೂ ಕೈ ಬಿಡನು ಕೊರಗಜ್ಜ. ಕೊರಗಜ್ಜನ ದೇವಸ್ಥಾನ(Temple), ಗುಡಿಗಳು ಈಗ ಪ್ರತೀ ಊರು, ಕೇರಿಗಳಲ್ಲಿ ಕಾಣ ಸಿಗುತ್ತದೆ. ಮೂಲ ಸ್ಥಾನ ಕುತ್ತಾರಿಗಂತೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ದೊಡ್ಡ ಸ್ಟಾರ್‌ಗಳು(Stars), ಸಿನಿಮಾದವರು(Cinema), ಉದ್ಯಮಿಗಳು(Business men) ಕೊರಗಜ್ಜನ ಮೊರೆ ಹೋಗುತ್ತಾರೆ.

ಕೊರಗಜ್ಜನ ಪವಾಡಗಳು ಇತ್ತೀಚಿನ ಆಧುನಿಕ ಯುಗದಲ್ಲೂ ನಡೆದದ್ದು ಬಹಳ ಇದೆ. ಅದನ್ನೇ ಮೂಲವಾಗಿ ಇಟ್ಟುಕೊಂಡು ಇದೀಗ ತುಳು ಚಿತ್ರವೊಂದು ತೆರೆಗೆ ಬರುತ್ತಿದೆ. ಸಾರ್ಲ ಪಟ್ಟದ ಮಾಯೆ ಸ್ವಾಮೀ ಕೊರಗಜ್ಜ ಎಂಬ ತುಳು ಚಲನ ಚಿತ್ರವನ್ನು(Film) ಬೆಂಗಳೂರಿನ ಉದ್ಯಮಿ ಶ್ರೀ ವಿಜಯ ಕುಮಾರ್ ನಿರ್ಮಾಪಕತ್ವದ ಎಚ್. ವಿ. ಎಸ್. ಎಂಟರ್ಪ್ರೈಸಸ್ ಲಾಂಛನದಡಿ ನಿರ್ಮಿಸಲು ನಿರ್ಧರಿಸಿದ್ದಾರೆ. ಸಿನಿಮಾ ನಟ ಹಾಗೂ ನಿರ್ದೇಶಕ ಆನಂದ್ ಎರ್ಮಾಳ್ ಅವರ ನಿರ್ದೇಶನವಿದೆ. ಉಪನ್ಯಾಸಕರೂ, ಸಾಹಿತಿಗಳೂ, ಸಂಶೋದಕರೂ, ಸಿನಿಮಾ ನಿರ್ದೇಶಕರೂ ಆದ ಬಿ, ಎ. ಲೋಕಯ್ಯ ಶಿಶಿಲರ ಕತೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆಯನ್ನು ಈ ಚಿತ್ರಕ್ಕೆ ನೀಡಿದ್ದಾರೆ.

ಈ ತುಳು ಚಲನ ಚಿತ್ರ ತಂಡವು ಇತ್ತೀಚೆಗೆ ಶ್ರೀ ಕೊರಗಜ್ಜನ ತಂದೆ, ತಾಯಿ ಕುಟುಂಬ ಇದ್ದ ಮೂಲ ನೆಲೆ ಮತ್ತು ಶ್ರೀ ಕೊರಗಜ್ಜ ಹುಟ್ಟಿ ಬೆಳೆದ ಮೂಲವನ್ನು ಸಂಶೋಧಿಸಿ, ಪತ್ತೆ ಹಚ್ಚಿ ಪವಿತ್ರವಾದ ಈ ಪುಣ್ಯಸ್ಥಳವನ್ನು ಜೀರ್ಣೋದ್ಧಾರಗೊಳಿಸುವಂತೆ ಸರ್ಕಾರವನ್ನು ವಿನಂತಿಸುವ ಕುರಿತು ತೀರ್ಮಾನಿಸಿತು. ಅತ್ಯಂತ ದಟ್ಟ ಅರಣ್ಯಗಳಿಂದಾವೃತವಾದ ದುರ್ಗಮ ಪ್ರದೇಶದಲ್ಲಿರುವ ಅತೀ ಪುರಾತನವಾದ ಕುರುಹುಗಳನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದ್ದು, ಅಳಿದುಳಿದ ಕುರುಹುಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿವೆ. ಶ್ರೀ ಕೊರಗಜ್ಜನ ವಂಶಸ್ಥರು ವರ್ಷಕ್ಕೊಂದು ಬಾರಿ ಈ ದುರ್ಗಮ ಪ್ರದೇಶದ ಮೂಲನೆಲೆಗೆ ಭೇಟಿ ನೀಡಿ ಆಗೆಲು ಸೇವೆ ನೀಡಿ ಬರುವ ಅತೀ ವಿಶಿಷ್ಟವಾದ ವಾಡಿಕೆಯನ್ನು ಈಗಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಸ್ವಾಮೀ ಶ್ರೀ ಕೊರಗಜ್ಜ ದೈವದ ಕುರಿತಾದ ಈ ವರೆಗೆ ಯಾರೂ ಕಂಡು ಕೇಳರಿಯದ ಅತ್ಯಂತ ಕುತೂಹಲಭರಿತವಾದ ಅತೀರೋಚಕ, ಆಸಕ್ತಿಕರವಾದ ಪ್ರತಿಯೊಂದೂ ಸೂಕ್ಷ್ಮ ವಿಷಯ, ವಿಚಾರಗಳನ್ನೂ ಸಹ ಬಿ, ಎ. ಲೋಕಯ್ಯ ಶಿಶಿಲರು ಸಂಶೋಧಿಸಿ, ವಿಮರ್ಶಿಸಿ ಅತ್ಯಂತ ವಿಶಿಷ್ಟ ಕಥೆಯನ್ನು ಬರೆದಿದ್ದಾರೆ. ತುಳುನಾಡಿನ, ಕಲೆ, ಸಂಸ್ಕೃತಿ, ದೈವಾರಾಧನೆ, ಆಚರಣೆ, ಆಚಾರ, ವಿಚಾರಕ್ಕೆ ಯಾವುದೇ ರೀತಿಯಲ್ಲಿ ಅವಮಾನ, ಅಪವಾದ, ಅಪಚಾರವಾಗದ ರೀತಿಯಲ್ಲಿ ಅದ್ಭುತವಾಗಿ ಸ್ವಾಮಿಯ ಚಲನಚಿತ್ರವನ್ನು ನಿರ್ಮಾಣ ಮಾಡಲಾಗುವುದು ಎಂದು ಸಿನಿಮಾ ನಿರ್ದೇಶಕರಾದ ಆನಂದ್ ಎರ್ಮಾಳ್ ತಿಳಿಸಿದ್ದಾರೆ.