Home News ಕೊಕ್ಕಡ: ಜಾನುವಾರು ಅಕ್ರಮ ಸಾಗಾಟ ಆರೋಪಿ ಬಂಧನ; ಜಾನುವಾರು, ಪಿಕಪ್ ವಶ

ಕೊಕ್ಕಡ: ಜಾನುವಾರು ಅಕ್ರಮ ಸಾಗಾಟ ಆರೋಪಿ ಬಂಧನ; ಜಾನುವಾರು, ಪಿಕಪ್ ವಶ

Hindu neighbor gifts plot of land

Hindu neighbour gifts land to Muslim journalist

ನೆಲ್ಯಾಡಿ: ಪಿಕಪ್ ವಾಹನವೊ೦ದರಲ್ಲಿ ಸಾಗಾಟ ಮಾಡುತ್ತಿದ್ದ ನ.20ರಂದು ಬೆಳಿಗ್ಗೆ ಕೊಕ್ಕಡ ಸಮೀಪ ಪತ್ತೆ ಹಚ್ಚಿರುವ ಧರ್ಮಸ್ಥಳ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣವೊಂದನ್ನು ದಾಖಲಿಸಿ ಜಾನುವಾರು ಹಾಗೂ ಪಿಕಪ್ ವಶಪಡಿಸಿಕೊಂಡಿದ್ದಾರೆ.

ಕೊಣಾಲು ನಿವಾಸಿ ಕೆ.ಎಂ.ತೋಮಸ್ ಬಂಧಿತ ಆರೋಪಿ. ಈತ ಕೊಣಾಲು ಗ್ರಾಮದ ಆರ್ಲ ಎಂಬಲ್ಲಿಂದ ಕೊಕ್ಕಡ ಗ್ರಾಮದ ಮಲ್ಲಿಗೆ ಮಜಲು ಎಂಬಲ್ಲಿಗೆ ಪಿಕಪ್ ( ಕೆಎ 21 ಎ 9728)ವಾಹನದಲ್ಲಿ 2 ಹಸುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ನೆಲ್ಯಾಡಿ ಬೆಥನಿ ರಸ್ತೆ ಮೂಲಕ ಸಾಗಾಟ ಮಾಡುತ್ತಿದ್ದ ವೇಳೆ ಪಿಜಿನಡ್ಕ ಎಂಬಲ್ಲಿ ಧರ್ಮಸ್ಥಳ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆರೋಪಿಯು ಹಸುಗಳನ್ನು ಕೊಂದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.