Home News ಕೊಯಿಲ: ಕೋಳಿ ಫಾರ್ಮ್ ನಲ್ಲಿ ಜುಗಾರಿ ಆಟ | ಪೊಲೀಸರ ದಾಳಿ , ಐವರ ಬಂಧನ-ವಾಹನ...

ಕೊಯಿಲ: ಕೋಳಿ ಫಾರ್ಮ್ ನಲ್ಲಿ ಜುಗಾರಿ ಆಟ | ಪೊಲೀಸರ ದಾಳಿ , ಐವರ ಬಂಧನ-ವಾಹನ ನಗದು ವಶಕ್ಕೆ, ಹಲವರು ಪರಾರಿ

Hindu neighbor gifts plot of land

Hindu neighbour gifts land to Muslim journalist

ಕಡಬ : ಕೋಳಿ ಫಾರ್ಮ್ ವೊಂದರಲ್ಲಿ ಜುಗಾರಿ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಕಡಬ ಪೊಲೀಸರು ಐವರನ್ನು ಬಂಧಿಸಿ ನಗದು ವಶಪಡಿಸಿಕೊಂಡ ಘಟನೆ ಜು.28ರ ರಾತ್ರಿ ಕೊಯಿಲ ಗ್ರಾಮದ ಅಂಬ ಎಂಬಲ್ಲಿ ನಡೆದಿದೆ.
ಪ್ರಮೋದ್ ಹಿರೆಬಂಡಾಡಿ,ದರ್ಶನ್ ಅಂಬ,ಸತೀಶ್ ಪಟ್ಟೆ,ಸುನಿಲ್ ಉದನೆ,ಅರುಣ್ ಪ್ರಸಾದ್ ನೇರಳಕಟ್ಟೆ ಬಂಧಿತರು.

ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಡಬ ಠಾಣೆ ಯ ಎಸ್.ಐ.ರುಕ್ಮ ನಾಯ್ಕ್ ಹಾಗು ಹೆಚ್.ಸಿ. ಹರೀಶ್ ಪಿ.ಸಿ.ಶ್ರೀಶೈಲ, ಭವಿತ್ ಎಎಸ್ಐ ಚಂದ್ರಶೇಖರ್ , ಹೊಯ್ಸಲದ ಶಿವರಾಜ್ ಮತ್ತು ಕುಮಾರ್, ಹೋಂ ಗಾರ್ಡ್ ರತೀಶ್ ಅವರುಗಳು ಮಧ್ಯರಾತ್ರಿ ಒಂದು ಗಂಟೆ ಸಮಯಕ್ಕೆ ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಐವರು ಪೊಲೀಸ್ ವಶವಾದರೆ, ಹರೀಶ್ ಓಕೆ,ಶಿಯಾಬ್ ಗೊಳಿತ್ತಡಿ, ಸಂಜೀವ ಪೂಜಾರಿ ಅಂಬ ಅವರು ಸೇರಿದಂತೆ ಹಲವರು ಪರಾರಿಯಾಗಿದ್ದಾರೆ.

ದಾಳಿಯ ವೇಳೆ ಆಟಕ್ಕೆ ಬಳಸಿದ ರೂ. 8940 ನಗದು ಹಾಗೂ ಇಸ್ಪೀಟೆಲೆಗಳು ಅಲ್ಲದೆ ಸ್ಥಳದಲ್ಲಿದ್ದ ಎರಡು ಆಟೋರಿಕ್ಷಾ ಮತ್ತು ಮೋಟರ್ ಸೈಕಲ್ ನ್ನು ವಶಪಡಿಸಿ ಕೊಳ್ಳಲಾಗಿದೆ.