Home News Kodi Mutt Swamiji: ಲೋಕಕ್ಕೆ ಜಲ ವಾಯು ಗಂಡಾಂತರ, ಕೋವಿಡ್‌ ಕುರಿತು ಸ್ಫೋಟಕ ಭವಿಷ್ಯ ನುಡಿದ...

Kodi Mutt Swamiji: ಲೋಕಕ್ಕೆ ಜಲ ವಾಯು ಗಂಡಾಂತರ, ಕೋವಿಡ್‌ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

Kodi Mutt Swamiji

Hindu neighbor gifts plot of land

Hindu neighbour gifts land to Muslim journalist

Kodi Mutt Swamiji: ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಸ್ಫೋಟಕ ಭವಿಷ್ಯ ನುಡಿದಿದ್ದು, ಲೋಕಕ್ಕೆ ಜಲ ಹಾಗೂ ವಾಯು ಗಂಡಾಂತರವಿದೆ. ಕೊವಿಡ್‌ ಕುರಿತು ಸ್ವಾಮೀಜಿ ಅವರು, ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿ ಇರಿ. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘಸ್ಫೋಟ ಆಗುವ ಸಾಧ್ಯತೆಗಳು ಇದೆ. ಭೂಕಂಪಗಳು ಆಗಲಿದೆ. ಮತೀಯ ಗಲಭೆ, ಯುದ್ಧದ ಭೀತಿ ಮತ್ತೆ ಪ್ರಾರಂಭವಾಗಲಿದೆ. ಅನೇಕ ರಾಜಕೀಯ ಮುಖಂಡರಿಗೆ ಸಾವು ಕಾಡಲಿದೆ. ಸಂಕ್ರಾಂತಿಯವರೆಗೆ ರಾಜ್ಯ ಸರಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಏನಾಗುತ್ತದೆಯೋ ನೋಡಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.