Home News Kodi Shri: ‘ಕೃಷ್ಣ ಇಲ್ಲದೇ ದುರ್ಯೋಧನ ಗೆಲ್ಲುತ್ತಾನೆ’ – ಕೇಂದ್ರ, ರಾಜ್ಯ ಸರ್ಕಾರಗಳ ಬಗ್ಗೆ ಕೋಡಿ...

Kodi Shri: ‘ಕೃಷ್ಣ ಇಲ್ಲದೇ ದುರ್ಯೋಧನ ಗೆಲ್ಲುತ್ತಾನೆ’ – ಕೇಂದ್ರ, ರಾಜ್ಯ ಸರ್ಕಾರಗಳ ಬಗ್ಗೆ ಕೋಡಿ ಶ್ರೀ ಹೊಸ ಭವಿಷ್ಯ !! ಏನಿದರ ಅರ್ಥ?

Kodi Shri

Hindu neighbor gifts plot of land

Hindu neighbour gifts land to Muslim journalist

Kodi Shri: ಕೋಡಿ ಮಠದ ಶ್ರೀಗಳು(Kodi Shri) ಇತ್ತೀಚಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಗ್ಗೆ ಚಿತ್ರ, ವಿಚಿತ್ರವಾದ ಭವಿಷ್ಯಗಳನ್ನು ನುಡಿಯುತ್ತಿದ್ದಾರೆ. ಅವೆಲ್ಲವೂ ಒಗಟಿಂದ ಕೂಡಿರುವುದು ಕೂಡ ಒಂದು ವಿಶೇಷ. ಅಂತೆಯೇ ಇದೀಗ ಶ್ರೀಗಳು ರಾಜ್ಯ, ಕೇಂದ್ರ ಸರ್ಕಾರಗಳ ಕುರಿತು ಮತ್ತೊಂದು ಹೊಸ ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ (Arsikere) ತಾಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕತ್ತರಿಸಿದ್ದರು. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮಾ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ಲುತ್ತಾನೆ. ರಾಜ್ಯದಲ್ಲೂ, ಕೇಂದ್ರದಲ್ಲೂ ಇದೇ ಆಗೋದು. ಅಂದರೆ ಕೃಷ್ಣ ಇಲ್ಲದೇ ದುರ್ಯೋಧನ ಗೆಲ್ಲುತ್ತಾನೆ’ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ ‘ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಎಂದು ಹೆಂದೆಯೇ ಹೇಳಿದ್ದೆ ಎಂದು ತಿಳಿಸಿದ್ದಾರೆ. ಪ್ರಕೃತಿ ವಿಕೋಪ ಕುರಿತು ಮಾತನಾಡಿ, ಮಳೆ ಇನ್ನೂ ಮುಂದುವರೆಯಲಿದೆ. ಜಾಸ್ತಿ ತೊಂದರೆಯಾಗಲಿದೆ. ಪ್ರಾಕೃತಿಕ ದೋಷವಿದ್ದು ಭೂಮಿ, ಅಗ್ನಿ, ವಾಯು, ಆಕಾಶದಿಂದ ಎಲ್ಲಾ ಕಡೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಜನ ಇದ್ದಂಗೆ ಸಾಯ್ತಾರೆ. ಭೂಮಿ ಬಿರುಕು ಬಿಡುತ್ತದೆ. ಗುಡ್ಡ ಕುಸಿದು ಹೋಗುತ್ತದೆ. ಅಘಾತಗಳೇ ಹೆಚ್ಚು’ ಎಂದು ಅವರು ಭವಿಷ್ಯ ಹೇಳಿದ್ದಾರೆ.