Home News Kodi Shri: ತಿರುಪತಿ ಲಡ್ಡು ವಿವಾದ – ಕೊನೆಗೂ ಮೌನ ಮುರಿದ ಕೋಡಿ ಮಠದ ಶ್ರೀಗಳು...

Kodi Shri: ತಿರುಪತಿ ಲಡ್ಡು ವಿವಾದ – ಕೊನೆಗೂ ಮೌನ ಮುರಿದ ಕೋಡಿ ಮಠದ ಶ್ರೀಗಳು !!

Hindu neighbor gifts plot of land

Hindu neighbour gifts land to Muslim journalist

Kodi Shri: ತಿರುಪತಿ ಲಡ್ಡು(Tirupati Laddu) ವಿವಾದದ ಕುರಿತು ಧಾರ್ಮಿಕ ಮುಖಂಡರಿಂದ ಹಿಡಿದು ರಾಜಕೀಯ ಪಕ್ಷಗಳ ಮುಖಂಡರ ತನಕ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿರುವ ಮಧ್ಯೆಯೇ ಇದೀಗ ಈ ವಿಚಾರವಾಗಿ ಕೋಡಿ ಮಠದ ಶ್ರೀಗಳು ಮೌನ ಮುರಿದಿದ್ದಾರೆ. ಅವರು ಈ ಪ್ರಕರಣಕ್ಕೆ ತಮ್ಮ ಹಿಂದಿನ ಭವಿಷ್ಯವನ್ನು ಸಮೀಕರಿಸಿ ಹೇಳಿಕೆ ನೀಡಿದ್ದಾರೆ.

ಹೌದು, ತಿರುಪತಿ ಲಡ್ಡು ವಿವಾದದ ವಿಚಾರವಾಗಿ ಧಾರವಾಡದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi shri)ಪ್ರತಿಕ್ರಿಯಿಸಿದ್ದು, ತಿರುಪತಿಯಲ್ಲಿ ಕೃಷ್ಣ-ವೆಂಕಟೇಶ್ವರ ಇದ್ದ. ಈಗ ಸ್ಥಳ ಸ್ವಚ್ಛತೆ ಮಾಡುತ್ತಿದ್ದಾರೆ. ಸ್ಥಳ ಸ್ವಚ್ಛತೆ ಮಾಡುವುದು ಧರ್ಮಶಾಸ್ತ್ರ, ಆದರೆ ತಿಂದವರ ಹೊಟ್ಟೆ ಏನು ಮಾಡುವವರು ಈಗ? ನಾಲ್ಕು ವರ್ಷ ಲಡ್ಡು ತಿಂದು ಬಿಟ್ಟಿದಾರಲ್ಲ? ಅದರ ಬಗ್ಗೆ ಸರ್ಕಾರವೇ ಹೇಳಬೇಕು. ಎಲ್ಲ ಕಡೆ ಅನೈತಿಕತೆ ಹೆಚ್ಚಾಗುತ್ತಿದೆ. ಶ್ರೀಗಳ ಉಪಟಳ ಹೆಚ್ಚಾಗುತ್ತದೆ ಅಂತಾ ಹೇಳಿದ್ದೆ, ಈಗ ಅದೇ ನಡೆಯುತ್ತಿದೆ ಎಂದಿದ್ದಾರೆ.

ಇಷ್ಟೇ ಅಲ್ಲದೆ ಇನ್ನೂ ಕೂಡ ಮಳೆ ಬರುವ ಎಲ್ಲಾ ಲಕ್ಷಣಗಳು ಇವೆ. ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂಬ ಅಚ್ಚರಿ ಭವಿಷ್ಯವನ್ನೂ ಶ್ರೀಗಳು ನುಡಿದಿದ್ದಾರೆ.