Home News ಡಾ. ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ರಸ್ತೆ ಮತ್ತು ಗ್ರಂಥಾಲಯಕ್ಕೆ ತುಳು ಲಿಪಿ ನಾಮ...

ಡಾ. ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ರಸ್ತೆ ಮತ್ತು ಗ್ರಂಥಾಲಯಕ್ಕೆ ತುಳು ಲಿಪಿ ನಾಮ ಫಲಕ ಹಾಕುವಂತೆ ಮನವಿ

Hindu neighbor gifts plot of land

Hindu neighbour gifts land to Muslim journalist

ಜೈತುಳುನಾಡ್ ರಿ ಸಂಘಟನೆಯ ಕಾಸರಗೋಡು ಘಟಕದಿಂದ, ಬದಿಯಡ್ಕದಿಂದ ವಿದ್ಯಾಗಿರಿ ಹೋಗುವ ರಸ್ತೆಯಾದ
ಡಾ. ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ರಸ್ತೆಗೆ ತುಳು ಲಿಪಿ ನಾಮ ಫಲಕ ಅಳವಡಿಸಬೇಕೆಂದು Asistent Engineer PWD Dept ಬದಿಯಡ್ಕ ಇವರಿಗೆ ಮನವಿ ಸಲ್ಲಿಸಲಾಯಿತು.

ಡಾ. ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದಲ್ಲಿ ತುಳು ಲಿಪಿ ನಾಮ ಫಲಕವನ್ನು ಅಳವಡಿಸಬೇಕೆಂದು ಬದಿಯಡ್ಕ ಪಂಚಾಯತ್ ಅಧ್ಯಕ್ಷರಿಗೆ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತುಳು ಲಿಪಿಯ ಬೆಳವಣಿಗೆಗೆ ಪಂಚಾಯತಿನ ಕಡೆಯಿಂದ ನಾವು ಪ್ರಯತ್ನಿಸುವುದಾಗಿ ಪಂಚಾಯತ್ ಅಧ್ಯಕ್ಷರು ಭರವಸೆಯ ಮಾತುಗಳನ್ನಾಡಿದರು.

ಸಂಘಟನೆಯ ಕಾಸರಗೋಡು ಘಟಕದ ಅಧ್ಯಕ್ಷ ಹರಿಕಾಂತ್, ಕಾಸರಗೋಡು ಕಾರ್ಯದರ್ಶಿ ಕಾರ್ತಿಕ್ ಪೆರ್ಲ, ಮುಖ್ಯ ಸಂಚಾಲಕ ಪ್ರವೀಶ್ ಕುಲಾಲ್, ಜತೆ ಕಾರ್ಯದರ್ಶಿ ಜಗನ್ನಾಥ ಕುಲಾಲ್ ಕಂಡತ್ತೊಡಿ ಹಾಗೂ ಸದಸ್ಯ ದೇವಿಪ್ರಸಾದ್ ನೆಕ್ರಾಜೆ ಉಪಸ್ಥಿತರಿದ್ದರು.