Home News Bigg Boss Kannada 11: ಕಿಚ್ಚ ಸುದೀಪ್ ನೋಡಲೆಂದೇ ಬಿಗ್ ಬಾಸ್ ನೋಡುವ ಜನರಿಗೆ ಬಿಗ್...

Bigg Boss Kannada 11: ಕಿಚ್ಚ ಸುದೀಪ್ ನೋಡಲೆಂದೇ ಬಿಗ್ ಬಾಸ್ ನೋಡುವ ಜನರಿಗೆ ಬಿಗ್ ಶಾಕ್!

Hindu neighbor gifts plot of land

Hindu neighbour gifts land to Muslim journalist

Bigg Boss Kannada 11: ಕನ್ನಡಿಗರ ಫೆವರೇಟ್ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ -11 (Bigg Boss Kannada -11) ಶೀಘ್ರದಲ್ಲೇ ಆರಂಭಗೊಳ್ಳಲಿದ್ದು, ವಿಭಿನ್ನ ಲೋಗೋ ಕೂಡಾ ಬಿಡುಗಡೆ ಆಗಿದೆ..

ಆದ್ರೆ ಈ ಬಾರಿ ನಿರೂಪಕನ ವಿಚಾರದಲ್ಲಿ ಕಿಚ್ಚ ಸುದೀಪ್‌‌ (Kiccha Sudeep) ಅವರ ಅಭಿಮಾನಿಗಳಿಗೆ ನಿರಾಸೆ ಆಗಲಿದೆ ಎನ್ನುವ ಸುದ್ದಿ ಆಗಿದೆ. ಹೌದು, ಸುದೀಪ್ ನೋಡಲೆಂದೆ ಬಿಗ್ ಬಾಸ್ ನೋಡುವ ಜನರಿಗೆ ಶಾಕಿಂಗ್ ಸುದ್ದಿ ಇದಾಗಿದೆ.

ಈಗಾಗಲೇ ಹೊಸ ಲೋಗೋ ವಿಡಿಯೋದಲ್ಲಿ ಕಿಚ್ಚ ಸುದೀಪ್‌ ಅವರ ಹೆಸರನ್ನು ಹ್ಯಾಷ್‌ ಟ್ಯಾಗ್‌ ಆಗಿ ಬಳಸಲಾಗಿತ್ತು. ಇದರಿಂದ ಕಿಚ್ಚ ಅವರೇ ಶೋ ನಡೆಸಿಕೊಡಲಿದ್ದಾರೆ ಎನ್ನುವ ಖುಷಿ ಎಲ್ಲರಿಗಿತ್ತು. ಆದರೆ ಇದೀಗ ಈ ಲೋಗೋ ವಿಡಿಯೋದಿಂದ ಕಿಚ್ಚ ಸುದೀಪ್‌ ಅವರ ಹೆಸರನ್ನು ತೆಗೆಯಲಾಗಿದೆ. ಹಾಗಾಗಿ ಕಿಚ್ಚ ಶೋ ನಡೆಸಿಕೊಡಲ್ಲ ಅನ್ನೋ ವಿಚಾರ ಭಾಗಶಃ ಗ್ಯಾರಂಟಿ ಆಗಿದೆ.

ಅದಲ್ಲದೆ ಇತ್ತೀಚಿಗೆ ಮಾಧ್ಯಮ ಜೊತೆಗೆ ಮಾತನಾಡಿದ ಸುದೀಪ್ “ ಬಿಗ್ ಬಾಸ್ ಸೀಸನ್ -11 ಕ್ಕೆ ಬೇರೆಯವರೂ ಬರಲಿ ಅಂತಾ ಕಾಯ್ತಾ ಇದೀನಿ ” ಎಂದು ಹೇಳಿದ್ದರು. ಸದ್ಯ ಜಿಯೋ ಸಿನಿಮಾ ಬಿಗ್‌ ಬಾಸ್‌ ಕನ್ನಡ ಸೀಸನ್‌ -11ರ ಟೀಸರ್‌ ಶೀಘ್ರದಲ್ಲಿ ಬರಲಿದ್ದು, ಸದ್ಯ ಬಿಗ್ ನಿರೂಪಣೆ ಮಾಡೋದು ಯಾರು ಅನ್ನೋದು ಇಂದಿಗೂ ಯಕ್ಷ ಪ್ರಶ್ನೆ ಆಗಿಯೇ ಉಳಿದಿದೆ.