

Karnataka: ರಾಜ್ಯ ಸರ್ಕಾರದಿಂದ (Karnataka) ತನ್ನ ಅಧೀನದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ದಸರ ಗಿಫ್ಟ್ ಅನ್ನು ನೀಡಿದ್ದು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿಯಲ್ಲಿ ಬೋನಸ್ ನೀಡಲು ಮುಂದಾಗಿದೆ.


ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯಡಿ ದಿನಾಂಕ:01.04.2020 ರಿಂದ 31.03.2022 ಕ್ಕೆ ಅಂತ್ಯಗೊಂಡ ದೈವಾರ್ಷಿಕ ಅವಧಿಗೆ ವಿಮಾ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಜೀವ ವಿಮಾ ಪಾಲಿಸಿಗಳ ಸ್ಥಿರಪಡಿಸಿದ ಮೊತ್ತದ ಮೇಲೆ ಬೋನಸ್ ನೀಡಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ, ಆದೇಶದಲ್ಲಿ ಬೆಂಗಳೂರು ನಿರ್ದೇಶಕರು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರು ಮೇಲೆ ಓದಲಾದ ಪತ್ರದಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿರುವ ಕಡ್ಡಾಯ ಜೀವ ವಿಮಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ರ ನಿಯಮ-22ರನ್ವಯ ವಿಮಾ ಮೌಲ್ಯಮಾಪನವನ್ನು ದೈವಾರ್ಷಿಕವಾಗಿ ಮಾಡಿಸಬೇಕಾಗಿದ್ದು, ಅದರನ್ವಯ 2020-2022ನೇ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿಮಾ ಪಾಲಿಸಿಗಳ ಮೌಲ್ಯಮಾಪನವನ್ನು ನಡೆಸಿ, ಅಧಿಲಾಭಾಂಶವನ್ನು ಘೋಷಿಸಲು ಅನುವಾಗುವಂತೆ ಮೌಲ್ಯಮಾಪನ ಕಾರ್ಯ ಕೈಗೊಳ್ಳಲು ವಿಮಾ ಗಣಕಕಾರರನ್ನು ನೇಮಿಸದ್ದು, ವಿಮಾ ಗಣಕಕಾರರು 2020-2022ನೇ ಅವಧಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಈ ಕೆಳಕಂಡಂತ ಮೌಲ್ಯಮಾಪನ ವರದಿ ನೀಡಿರುತ್ತಾರೆ ಅಂತ ತಿಳಿಸಿದೆ.
ಇದೇ ವೇಳೆ ವಿಮಾ ವ್ಯವಹಾರದ ಮೇಲಿನ ನಿವ್ವಳ ಹೊಣೆಗಾರಿಕೆ : ರೂ. 5,624.46 ಕೋಟಿಗಳು 7. ಮೌಲ್ಯಮಾಪನದ ಹೆಚ್ಚುವರಿ (Surplus)ರೂ. 2524.53 ಕೋಟಿಗಳು ವಿಮಾ ಗಣಕರು ತಮ್ಮ ವರದಿಯಲ್ಲಿ ದಿನಾಂಕ:31.03.2022 ರಂದು ಚಾಲ್ತಿಯಲ್ಲಿರುವ ಎಲ್ಲಾ ಪಾಲಿಸಿಗಳಿಗೆ ಪ್ರತಿ ಸಾವಿರ ವಿಮಾ ಮೊತ್ತಕ್ಕೆ ಪ್ರತಿ ವರ್ಷಕ್ಕೆ ರೂ.80/- ರಂತ ಪ್ರತ್ಯಾವರ್ತಿ ಲಾಭಾಂಶವನ್ನು ಘೋಷಿಸಲು ಹಾಗೂ ಈ ಉದ್ದೇಶಕ್ಕಾಗಿ ಮೌಲ್ಯಮಾಪನದ ಅನುಸಾರ ಒಟ್ಟಾರೆಯಾಗಿ ಹೆಚ್ಚಳವಾಗಿರುವ ರೂ. 2524.53 ಕೋಟಿಗಳಲ್ಲಿ ರೂ.1955.95 ಕೋಟಿಗಳನ್ನು ಸರಳ ಪ್ರತ್ಯಾವರ್ತಿ ಲಾಭಾಂಶವಾಗಿ ವಿತರಣೆ ಮಾಡಲು ಹಾಗೂ ಉಳಿದ ರೂ.568.57 ಕೋಟಿ ಮೊತ್ತವನ್ನು ಅವರ್ಗೀಕೃತವಾಗಿ ಮುಂದುವರಿಸಲ್ಪಟ್ಟ ಮೊಬಲಗು ಎಂದು ಪರಿಗಣಿಸಿ ಮುಂದಿನ ಮೌಲ್ಯಮಾಪನ ಅವಧಿಗೆ ಕೊಂಡೊಯ್ಯಲು ವಿಮಾ ಗಣಕರು ಶಿಫಾರಸ್ಸು ಮಾಡಿರುತ್ತಾರೆ.
ಇದನ್ನೂ ಓದಿ:Udupi: ಉಡುಪಿ: ಉಕ್ಕಿನ ರೈಲ್ವೆ ಬ್ರಿಡ್ಜ್ ಉದ್ಘಾಟನೆಗೆ ಸಿದ್ಧ













