Home News KERC: ವಿದ್ಯುತ್‌ ದರ ಏರಿಸಿದ ಸರ್ಕಾರ: ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ: ಏಪ್ರಿಲ್ 1ರಿಂದ...

KERC: ವಿದ್ಯುತ್‌ ದರ ಏರಿಸಿದ ಸರ್ಕಾರ: ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ: ಏಪ್ರಿಲ್ 1ರಿಂದ ಹೊಸ ದರ ಜಾರಿ

Hindu neighbor gifts plot of land

Hindu neighbour gifts land to Muslim journalist

KERC: ರಾಜ್ಯದಲ್ಲಿ ದಿನ ಬೆಳಗಾದರೆ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ನೀರು, ದಿನಸಿ, ಬಸ್ ಟಿಕೆಟ್ ದರ, ಹಾಲು ದರ ಏರಿಕೆ ಬೆನ್ನಲ್ಲೇ ಇದೀಗ ವಿದ್ಯುತ್ ದರ ಏರಿಕೆ ಮಾಡಿದೆ ಸರ್ಕಾರ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಿದ್ಯುತ್ ದರ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿದೆ.

ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಣಿ, ಗ್ರಾಚ್ಯುಟಿಗಾಗಿ ದರ ಹೆಚ್ಚಳ ಮಾಡುತ್ತಿದ್ದು, ಇದು ಏಪ್ರಿಲ್ 1ರಿಂದ ಜಾರಿಯಾಗಲಿದೆ. ವಿದ್ಯುತ್ ಸಂಸ್ಥೆಗಳಿಗೆ ಸುಮಾರು ₹4,659 ಕೋಟಿ ಪಿಂಚಣಿ ಮತ್ತು ಗ್ರಾಚ್ಯುಟಿ ಬಾಕಿ ಇದೆ ಎಂದು ವರದಿಯಾಗಿದೆ. 200 ಯುನಿಟ್‌ಗಿಂತ ಹೆಚ್ಚು ಬಳಸಿದವರಿಗೆ ದರ ಏರಿಕೆ ಅನ್ವಯವಾಗಲಿದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಕೆಪಿಟಿಸಿಎಲ್ ಹಾಗೂ ಎಸ್ಕಾಂ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಇಂಧನ ಇಲಾಖೆ ಮುಂದಾಗಿದ್ದರ ಪರಿಣಾಮವೇ ಈ ದರ ಏರಿಸಲು ಕಾರಣ. ಈ ಮೂಲಕ, ಗ್ರಾಹಕರ ಮಾಸಿಕ ಬಿಲ್ನಲ್ಲಿ ಉಲ್ಲೇಖ ಮಾಡಿ ಹೆಚ್ಚುವರಿ ದರ ವಸೂಲಿ ಮಾಡಲಾಗುತ್ತದೆ. ನಿರ್ಧಾರವನ್ನು ಮುಂದಿನ ಬರೋಬ್ಬರಿ ೩ ವರ್ಷ ಅಂದರೆ ಈ ಕಾಂಗ್ರೆಸ್‌ ಸರ್ಕಾರ ಇರುವ ಆರ್ಥಿಕ ವರ್ಷಗಳಿಗೆ ಅನ್ವಯ ಆಗುವಂತೆ ಈ ಆದೇಶ ಹೊರಡಿಸಲಾಗಿದೆ.

ಗ್ರಾಹಕರಿಗೆ ಯಾವ್ಯಾವ ವರ್ಷಕ್ಕೆ ಎಷ್ಟು ಹೊರೆ?
• 2025-26 – 36 ಪೈಸೆ
• 2026-27 – 35 ಪೈಸೆ
• 2027-28 – 34 ಪೈಸೆ

ಈ ದರ ಏರಿಕೆ ಯಾರ ಮೇಲೆ ಬೀಳಲಿದೆ?
ಸಚಿವ ಶರಣಪ್ರಕಾಶ್‌ ಪಾಟೀಲ, ಈ ಬಗ್ಗೆ ಮಾಹಿತಿ ನೀಡಿದ್ದು, ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗೋದಿಲ್ಲ. ಗೃಹಜ್ಯೋತಿ ಯೋಜನೆಯಿಂದಾಗಿ ಸರ್ಕಾರಕ್ಕೆ ಯಾವುದೇ ನಷ್ಟ ಸಂಭವಿಸಿಲ್ಲ. ಗೃಹಜ್ಯೋತಿಯಿಂದ ನಷ್ಟ ಆಗಿದೆ ಎಂದು ವಿದ್ಯುತ್ ದರ ಏರಿಕೆ ಮಾಡಿಲ್ಲ. ನಾವು 200 ಯೂನಿಟ್ ವಿದ್ಯುತ್ ಉಚಿತ ಕೊಟ್ಟಿದ್ದೇವೆ. 200 ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯವಾಗುತ್ತದೆ.