Home News Kerala: ವಯನಾಡಿನಲ್ಲಿ ಗೆದ್ದರೆ ಸುಲ್ತಾನ್‌ ಬತ್ತೇರಿ ನಗರದ ಹೆಸರು ಬದಲಾವಣೆ- ಬಿಜೆಪಿ ಅಧ್ಯಕ್ಷ

Kerala: ವಯನಾಡಿನಲ್ಲಿ ಗೆದ್ದರೆ ಸುಲ್ತಾನ್‌ ಬತ್ತೇರಿ ನಗರದ ಹೆಸರು ಬದಲಾವಣೆ- ಬಿಜೆಪಿ ಅಧ್ಯಕ್ಷ

Kerala

Hindu neighbor gifts plot of land

Hindu neighbour gifts land to Muslim journalist

Kerala: ಒಂದು ವಯನಾಡ್‌ ಲೋಕಸಭಾ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದರೆ ಸುಲ್ತಾನ್‌ ಬತ್ತೇರಿ ನಗರದ ಹೆಸರನ್ನು ಗಣಪತಿ ವಟ್ಟಾಂ ಎಂದು ಬದಲಾಯಿಸುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ, ವಯನಾಡ್‌ ಕ್ಷೇತ್ರದ ಅಭ್ಯರ್ಥಿ ಕೆ.ಸುರೇಂದ್ರನ್‌ ನೀಡಿರುವ ಹೇಳಿಕೆ ಇದೀಗ ಭಾರೀ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ.

ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದು, ಬಿಜೆಪಿಯಿಂದ ಕೆ.ಸುರೇಂದ್ರನ್‌ ಸ್ಪರ್ಧೆ ಮಾಡಲಿದ್ದಾರೆ.

ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್‌ ವಯನಾಡ್‌ ಸೇರಿದಂತೆ ಅಂದು ಲಕ್ಷಾಂತರ ಮಂದಿ ಹಿಂದುಗಳನ್ನು ಮತಾಂತರ ಮಾಡಿದ್ದ. ಟಿಪ್ಪು ಸುಲ್ತಾನ್‌ ಯಾರು. ಆತ ವಯನಾಡಿಗೆ ಯಾವಾಗ ಬಂದಿದ್ದು? ಆತನಿಗೆ ಏಕೆ ಮಹತ್ವ ನೀಡಬೇಕು? ಇದು ಗಣಪತಿ ವಟ್ಟಂ ಎಂದೇ ಖ್ಯಾತಿ ಪಡೆದ ಸ್ಥಳ. ಇದರ ಬಗ್ಗೆ ಜನರಿಗೆ ಅರಿವು ಇದೆ. ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ಟಿಪ್ಪು ಸುಲ್ತಾನ್‌ ಪರ ಇದೆ. ಈ ಸರಕಾರಗಳೇ ಹೆಸರನ್ನು ಬದಲಾಯಿಸಿ ಸುಲ್ತಾನ್‌ ಬತ್ತೇರಿ ಎಂದು ಮಾಡಿರುವುದಾಗಿ ಸುರೇಂದ್ರನ್‌ ಅವರು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: BJP MP Kissing: ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಕ್ಕಿದ ಬಿಜೆಪಿ ಸಂಸದ