Home News Kerala: ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ; ನಾಲ್ವರು ಸಜೀವ ದಹನ, ಹಲವರಿಗೆ ಗಾಯ!

Kerala: ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ; ನಾಲ್ವರು ಸಜೀವ ದಹನ, ಹಲವರಿಗೆ ಗಾಯ!

Hindu neighbor gifts plot of land

Hindu neighbour gifts land to Muslim journalist

Kerala: ಕೋಯಿಕ್ಕೋಡ್‌ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದ್ದು, ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನೆಲಮಹಡಿಯ ಎಂಆರ್‌ಐ ವಿಭಾಗದ ಬಳಿ ರಾತ್ರಿ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಯುಪಿಎಸ್‌ ಅಸಮರ್ಪಕ ವ್ಯವಸ್ಥೆಯಿಂದ ಬೆಂಕಿ ಕಾಣಿಸಿಕೊಂಡಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಕಿಯಿಂದ ದಟ್ಟವಾದ ಹೊಗೆ ವಾರ್ಡ್‌ನಾದ್ಯಂತ ಹರಡಿದ್ದು, ಇದರಿಂದ ಹಲವು ವ್ಯಕ್ತಿಗಳು ಉಸಿರಾಟದ ತೊಂದರೆಯನ್ನು ಅನುಭವಿಸಿದ್ದಾರೆ ಎನ್ನಲಾಗಿದೆ.

ವೆಲ್ಲಿಮಡುಕ್ಕುನ್ನು ಮತ್ತು ಬೀಚ್‌ ನಿಲ್ದಾಣಗಳ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಗಳ ಸಿಬ್ಬಂದಿ, ಪೊಲೀಸ್‌ ಅಧಿಕಾರಿಗಳು ಮತ್ತು ಸ್ವಯಂ ಸೇವಕರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ.