Home News Arif Mohammad Khan : ಅಯೋಧ್ಯೆಗೆ ತೆರಳಿ ಮಂಡಿಯೂರಿ ಶ್ರೀರಾಮನಿಗೆ ನಮಿಸಿದ ಕೇರಳ ರಾಜ್ಯಪಾಲ ಆರಿಫ್...

Arif Mohammad Khan : ಅಯೋಧ್ಯೆಗೆ ತೆರಳಿ ಮಂಡಿಯೂರಿ ಶ್ರೀರಾಮನಿಗೆ ನಮಿಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ !!

Arif Mohammad Khan

Hindu neighbor gifts plot of land

Hindu neighbour gifts land to Muslim journalist

Arif Mohammad Khan : ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammad Khan ) ಅವರು ಅಯೋಧ್ಯೆಗೆ ತೆರಳಿ (Ram Temple in Ayodhya) ಅಯೋಧ್ಯಾಪತಿ ಶ್ರೀರಾಮನಿಗೆ ಮಂಡಿಯೂರಿ ನಮಿಸಿದ್ದಾರೆ. ಈ ಕುರಿತ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿವೆ.

ಇದನ್ನೂ ಓದಿ: IPL-2024: ಲಕ್ನೋ ಸೂಪರ್‌ ಜೈಂಟ್ಸ್‌ ಭೀಕರ ಸೋಲು :  ಕೆಎಲ್‌ ರಾಹುಲ್ ವಿರುದ್ದ ಲಕ್ನೋ ಮಾಲೀಕ ಕೋಪ

ಅಯೋಧ್ಯೆಗೆ ಭೇಟಿ ನೀಡಿ ಪ್ರಭು ಶ್ರೀರಾಮನಿಗೆ(Shreeram) ವಂದಿಸಿದ ವಿಚಾರವನ್ನು ಸ್ವತಃ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರೇ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ಅಯೋಧ್ಯಾ ಶ್ರೀರಾಮ ಮಂದಿರವನ್ನು ‘ಶಾಂತಿಯ ಸ್ಥಳ’ ಎಂದು ಬಣ್ಣಿಸಿದ್ದಾರೆ. ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ಅವರು ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Politics: ರಾಜ್ಯದಲ್ಲಿ ಕಾಂಗ್ರೆಸ್’ಗೆ 20+ ಸ್ಥಾನ ?!

ಅಲ್ಲದೆ ಈ ಆ ವಿಡಿಯೋದಲ್ಲಿ ಅಯೋಧ್ಯೆಯ ರಾಮ್ ಲಲ್ಲಾ ವಿಗ್ರಹದ ಮುಂದೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನಮಸ್ಕರಿಸುತ್ತಿರುವುದನ್ನು ಕಾಣಬಹುದು. ಅವರು ನಮಸ್ಕರಿಸಿದ ವೇಳೆ ಹಿನ್ನಲೆಯಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು ಕೇಳಿಬಂದಿದೆ.

ತಮ್ಮ ಅಯೋಧ್ಯೆಯ ಭೇಟಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ನಾನು ಅಯೋಧ್ಯೆಗೆ ಭೇಟಿ ನೀಡುತ್ತಲೇ ಇದ್ದೇನೆ. ಜನವರಿ ತಿಂಗಳಲ್ಲಿ ಪ್ರಾಣ ಪ್ರತಿಷ್ಠೆಗೂ ಮುನ್ನ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದೆ. ಇಲ್ಲಿಗೆ ಭೇಟಿ ನೀಡಿದ್ದು ನನಗೆ ಅಪಾರವಾದ ಶಾಂತಿಯನ್ನು ನೀಡುತ್ತದೆ. ಇದು ನಮಗೆ ಕೇವಲ ಸಂತೋಷದ ವಿಷಯವಲ್ಲ, ಬದಲಾಗಿ ಅಯೋಧ್ಯೆಗೆ ಬಂದು ಶ್ರೀರಾಮನನ್ನು ಪೂಜಿಸುತ್ತಿರುವುದು ಹೆಮ್ಮೆ’ ಎಂದು ಹೇಳಿದ್ದಾರೆ.