Home National Dakshina kannada News: ಕಾಲುಬಾಯಿ ಜ್ವರ; ಗಡಿಭಾಗದಲ್ಲಿ ಜಾನುವಾರು ಸಾಗಾಟ ನಿಷೇಧ- ಜಿಲ್ಲಾಧಿಕಾರಿ ಆದೇಶ!!!

Dakshina kannada News: ಕಾಲುಬಾಯಿ ಜ್ವರ; ಗಡಿಭಾಗದಲ್ಲಿ ಜಾನುವಾರು ಸಾಗಾಟ ನಿಷೇಧ- ಜಿಲ್ಲಾಧಿಕಾರಿ ಆದೇಶ!!!

Kerala cattle Ban
Image source: Saval news

Hindu neighbor gifts plot of land

Hindu neighbour gifts land to Muslim journalist

Kerala cattle Ban: ಕೇರಳ ರಾಜ್ಯದಲ್ಲಿ ಜಾನುವಾರುಗಳಿಗೆ ಗೊರಸು ರೋಗ ಎಂದೆನ್ನುವ ಕಾಲುಬಾಯಿ ರೋಗ ಕಂಡುಬಂದಿದ್ದು ಅದು ವೈರಸ್‍ನಿಂದ ಬಹುಬೇಗ ಆರೋಗ್ಯವಂತ ಜಾನುವಾರುಗಳಿಗೆ ಹರಡುತ್ತದೆ. ಜಾನುವಾರುಗಳಿಗೆ ಕೇರಳದಲ್ಲಿ ಕಾಲು ಬಾಯಿ ಜ್ವರ ಅಧಿಕವಾಗಿರುವುದರಿಂದ, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಕೇರಳದಿಂದ ಕರ್ನಾಟಕಕ್ಕೆ ಜಾನುವಾರು ಸಾಗಾಟವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತವು ನಿಷೇಧ (Kerala cattle Ban)ಹೇರಿ ಆದೇಶ ಜಾರಿಗೊಳಿಸಿದೆ.

ಕಾಲುಬಾಯಿ ಜ್ವರ ಜಿಲ್ಲೆಗೆ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿರುವುದರಿಂದ ಕೇರಳದಲ್ಲಿ ರೋಗ ಹತೋಟಿಗೆ ಬರುವವರೆಗೆ ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವ ಹಾಗೂ ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಜಾನುವಾರುಗಳನ್ನು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ದಕ್ಷಿಣ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಆದೇಶ ಹೊರಡಿಸಿದ್ದಾರೆ.

ಕೇರಳದ ಪಶು ಸಂಗೋಪನಾ ಇಲಾಖೆ ಕಟ್ಟೆಚ್ಚರ ವಹಿಸಿದ್ದರೂ ಈ ರೋಗ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಗಡಿ ಚೆಕ್ ಪೋಸ್ಟ್ ಗಳ ನಿಗಾ ಇರಿಸಲಾಗಿದೆ. ಕೇರಳದ ಕಾಸರಗೋಡು, ಕಣ್ಣೂರು, ಮಲಪ್ಪುರ, ತ್ರಿಶೂರ್, ಆಲಪ್ಪುಯ, ಪತ್ತನಂತಿಟ್ಟ ಮತ್ತು ತಿರುವನಂತಪುರ ಜಿಲ್ಲೆಗಳ 51 ಕೇಂದ್ರಗಳಲ್ಲಿ ರೋಗ ಪತ್ತೆಯಾಗಿದೆ.

ಮುಖ್ಯವಾಗಿ ಕೇರಳದಲ್ಲಿ ಹೊರರಾಜ್ಯಗಳಿಂದ ಆಮದು ಮಾಡಿಕೊಳ್ಳುವ ಜಾನುವಾರುಗಳಲ್ಲಿ ಪತ್ತೆಯಾಗಿರುವ ಕಾಲುಬಾಯಿ ಜ್ವರದಿಂದಾಗಿ ಜುಲೈ ತಿಂಗಳಲ್ಲೇ 61 ಹಸುಗಳು ಬಾಧಿತವಾಗಿವೆ. ಒಟ್ಟು 840 ಹಸುಗಳು ಈಗ ಕೇರಳ ರಾಜ್ಯದಲ್ಲಿ ಬಾಧಿತವಾಗಿವೆ. ಅವುಗಳಲ್ಲಿ 41 ಕರುಗಳು. ಈ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಏಷ್ಯಾ 1 ಮತ್ತು ಎ ಸೆರೋಟೈಪ್ ಗಳಿಗೆ ಸೇರಿದ ವೈರಸ್ ಗಳು ಈ ಬಾರಿ ಕೇರಳದಲ್ಲಿ ರೋಗಕ್ಕೆ ಕಾರಣವಾಗಿದ್ದು, ಕರುಗಳಲ್ಲಿ ತೀವ್ರತರದ ಲಕ್ಷಣಗಳು ಕಂಡುಬರುತ್ತಿವೆ. ಭುವನೇಶ್ವರದಲ್ಲಿರುವ ಕಾಲು ಮತ್ತು ಬಾಯಿ ರೋಗ ನಿರ್ಣಯಕ್ಕಾಗಿ ಮಾದರಿಗಳನ್ನು ಕೇಂದ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರೋಗ ನಿಯಂತ್ರಣದ ಅಂಗವಾಗಿ ಮುಖ್ಯ ಪಶುವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಅಗತ್ಯ ಲಸಿಕಾದಳ ಮತ್ತು ಚಿಕಿತ್ಸಾದಳಗಳನ್ನು ರಚಿಸಲಾಗಿದೆ.

ಜಿಲ್ಲೆಗಳಲ್ಲಿ ಪೀಡಿತ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಸಂಪೂರ್ಣ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ರಿಂಗ್ ಲಸಿಕೆಯನ್ನು ಸುಮಾರು 4 ಸಾವಿರಕ್ಕೂ ಅಧಿಕ ಕರುಗಳಿಗೆ ಹಾಕಲಾಗಿದೆ.

ಇನ್ನು ಪಶು ಚಿಕಿತ್ಸಾಲಯಗಳ ಮೂಲಕ ಸೋಂಕಿತ ಪ್ರಾಣಿಗಳಿಗೆ ಉಚಿತ ಪಶು ಚಿಕಿತ್ಸೆ ನೀಡಲಾಗುತ್ತದೆ. ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ರೋಗದ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳೂ ಲಭ್ಯ. ಅದಲ್ಲದೆ ಎಲ್ಲ ಜಿಲ್ಲೆಗಳಲ್ಲಿ ಗೊರಸುರೋಗಕ್ಕೆ ಸಂಬಂಧಿಸಿದ ಪರಿಶೀಲನೆಯನ್ನು ಮಾಡಲಾಗುತ್ತಿದೆ.

ಮುಖ್ಯವಾಗಿ ಹೈನುಗಾರರು ಕಾಲುಬಾಯಿ ರೋಗ ತಡೆಗಟ್ಟಲು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ವಹಿಸಬೇಕು. ಹಾಲು ಕರೆಯುವವರ ವೈಯಕ್ತಿಕ ನೈರ್ಮಲ್ಯ ಮತ್ತು ಹಾಲು ಕರೆಯುವಿಕೆ ಸ್ವಚ್ಛತೆ ಬಹಳ ಮುಖ್ಯ. ಜಾನುವಾರುಗಳು ಇರುವ ಪ್ರದೇಶದಲ್ಲಿ ಕೀಟಗಳು ನೊಣಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ.

ಸದ್ಯ ಕಾಲುಬಾಯಿ ರೋಗ ಜಾನುವಾರುಗಳಿಗೆ ಮರಣಾಂತಿಕವಾಗಿರುವುದರಿಂದ ಕೇರಳ ರಾಜ್ಯಕ್ಕೆ ಜಾನುವಾರು ಸಾಗಾಟ ಮಾಡುವುದನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಕೊನೆಯ ಗ್ರಾಮ ಯಾವುದು ಗೊತ್ತಾ ? ಅರೆ, ಇದೇನು ಫಸ್ಟ್ – ಲಾಸ್ಟ್ ವಿಲೇಜ್ ?!