Home News ಮಾ.2 : ದೇಲಂಪಾಡಿಯಲ್ಲಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮರಣಾಂಜಲಿ

ಮಾ.2 : ದೇಲಂಪಾಡಿಯಲ್ಲಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮರಣಾಂಜಲಿ

Hindu neighbor gifts plot of land

Hindu neighbour gifts land to Muslim journalist

Kasaragodu: ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಮತ್ತು ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸಹಕಾರದಲ್ಲಿ ಯಕ್ಷಗಾನ ಪ್ರಸಂಗಕರ್ತ, ಸಾಹಿತಿ, ಕಲಾವಿದರಾದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬದುಕು-ಬರಹದ ಬಗ್ಗೆ ಮೆಲುಕು ಹಾಕುವ ಸ್ಮರಣಾಂಜಲಿ ಕಾರ್ಯಕ್ರಮವು ಮಾ.2ರಂದು ಅಪರಾಹ್ನ 2ರಿಂದ ದೇಲಂಪಾಡಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮುಂಚಿತವಾಗಿ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜೆ ಹಾಗೂ ಭಗವದ್ಗೀತಾ ಪಾರಾಯಣ ನಡೆಯಲಿದೆ.

ಸಭೆಯ ಅಧ್ಯಕ್ಷತೆಯನ್ನು ಹಿರಿಯ ವೈದ್ಯ ಸಾಹಿತಿ ಡಾ. ರಮಾನಂದ ಬನಾರಿ ವಹಿಸಲಿದ್ದಾರೆ. ಡಾ. ಕೆ ವಾಮನ್ ರಾವ್ ಬೇಕಲ್ – ಸಂಧ್ಯಾರಾಣಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ನಿವೃತ್ತ ಮುಖ್ಯ ಶಿಕ್ಷಕ ಡಿ. ರಾಮಣ್ಣ ಮಾಸ್ಟರ್ ಅವರು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸಂಸ್ಮರಣೆ ಮಾಡುವರು. ಪುತ್ತೂರಿನ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡುವರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆ ಹಾಗೂ ಡಾ. ಶಾಂತಾ ಪುತ್ತೂರು ಉಪಸ್ಥಿತರಿರುವರು. ದೇಲಂಪಾಡಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಜಲಜಾಕ್ಷಿ ರೈ, ಸಾಹಿತಿ ಅಪೂರ್ವ ಕಾರಂತ್ ಪುತ್ತೂರು, ಪರಿಷತ್ತಿನ ಕೇಂದ್ರ ಸಮಿತಿಯ ಕಾರ್ಯದರ್ಶಿ ವಸಂತ ಕೆರೆಮನೆ, ಪುಟಾಣಿಗಳಾದ ಪ್ರತೀಕ್, ಯಮಿತಾ, ಅರ್ಚನಾ, ತೇಜಸ್ವಿ, ಸ್ವಾತಿ, ಭವಿಷ್ಯ ಭಾಗವಹಿಸುವರು. ಬಳಿಕ ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದೆ. ಗೋಷ್ಠಿಯಲ್ಲಿ ದೇಲಂಪಾಡಿ ಶಾಲಾ ವಿದ್ಯಾರ್ಥಿಗಳಾದ ಶಿಲ್ಪಾ ಎಂ, ಯಮಿತಾ, ಹನಿ ಬಿ. ಪೂಜಸ್ವಿ ಎಂ, ಶ್ರಾವ್ಯಶ್ರೀ, ಚೈತ್ರಾಲಿ, ಅದಿತಿ ಹಾಗೂ ಮುಕ್ತ ವಿಭಾಗದಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಆದ್ಯಂತ್ ಅಡೂರು. ಪವಿತ್ರ ಎಂ ಬೆಳ್ಳಿಪ್ಪಾಡಿ, ಸರೋಜಾ ಅಡೂರು, ಕೀರ್ತನ ಸುವರ್ಣ, ಶಶಿಕಲಾ ಟೀಚರ್ ಕುಂಬಳೆ, ಕೆ ಎಸ್ ದೇವರಾಜ್ ಆಚಾರ್ಯ ಸೂರಂಬೈಲ್, ಚಿತ್ರಕಲಾ ದೇವರಾಜ್ ಆಚಾರ್ಯ ಸೂರಂಬೈಲ್. ಎಂ ಎ ಮುಸ್ತಫಾ ಬೆಳ್ಳಾರೆ, ಶಾರದಾ ಮೊಳೆಯಾರ್ ಎಡನೀರು, ಸುಭಾಷಿಣಿ ಚಂದ್ರ ಕನ್ನಟಿಪ್ಪಾರೆ, ಅಪೂರ್ವ ಕಾರಂತ್ ಪುತ್ತೂರು, ಜ್ಞಾನೇಶ್ವರಿ ಬಿ, ನಾಟಕ ಭಾರ್ಗವ ಕೆಂಪರಾಜು ಮೈಸೂರು, ಶೇಖರ ಎಂ ದೇಲಂಪಾಡಿ, ವಿ. ಹರೀಶ್ ನೆರಿಯ. ಪೂರ್ಣಿಮಾ ಕಾರಿಂಜ, ವಿಜಯರಾಜ ಪುಣಿಂಚಿತ್ತಾಯ, ಬೆಳ್ಳೂರು, ರಾಧಾಕೃಷ್ಣ ಭಟ್ ಕುರುಮುಜ್ಜಿ, ಗಿರೀಶ್ ಪೆರಿಯಡ್ಕ, ಮಲ್ಲಿಕಾ ಜೆ ರೈ ಪುತ್ತೂರು, ಅನಿತಾ ಶೆಣೈ ಮೊದಲಾದವರು ಭಾಗವಹಿಸಲಿದ್ದಾರೆ.