Home News KEA: ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ KEA ಯಿಂದ ಅರ್ಜಿ ಆಹ್ವಾನ!!

KEA: ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ KEA ಯಿಂದ ಅರ್ಜಿ ಆಹ್ವಾನ!!

Hindu neighbor gifts plot of land

Hindu neighbour gifts land to Muslim journalist

KEA: ಎಂಟು ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸರ್ಕಾರಿ ಸಂಸ್ಥೆ, ನಿಗಮ, ಸಂಸ್ಥೆಗಳಲ್ಲಿ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವಂತ ವಿವಿಧ ವೃಂದದ 708 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಹುದ್ದೆಗಳ ವಿವರ:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ- 18+07 ಹುದ್ದೆಗಳು

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ – 07+ 14 ಹುದ್ದೆಗಳು

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ಬೆಂಗಳೂರು – 40+4 ಹುದ್ದೆಗಳು

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ- 63+253 ಹುದ್ದೆ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ- 19 ಹುದ್ದೆ

ಕೃಷಿ ಮಾರಾಟ ಇಲಾಖೆ- 180 ಹುದ್ದೆಗಳು

ತಾಂತ್ರಿಕ ಶಿಕ್ಷಣ ಇಲಾಖೆ – 50+43 ಹುದ್ದೆಗಳು

ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದಲ್ಲಿ – 10 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ

ಪ್ರಥಮ ದರ್ಜೆ ಸಹಾಯಕರಿಗೆ – ಪದವಿ

ದ್ವಿತೀಯ ದರ್ಜೆ ಸಹಾಯಕರಿಗೆ – ದ್ವಿತೀಯ ಪಿಯುಸಿ

ಸಹಾಯಕ ಸಂಚಾರ ನಿರೀಕ್ಷಕರ ಹುದ್ದೆಗೆ- ಕಲಾ, ವಾಣಿಜ್ಯ, ವಿಜ್ಞಾನ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ನಿರ್ವಾಹಕರ ಹುದ್ದೆ – ಪಿಯುಸಿ

ಸಹಾಯಕ ಲೆಕ್ಕಿಗ – ಬಿಕಾಂ

ಅಧಿಕಾರಿ – ಪದವಿ ಜೊತೆಗೆ ಎಂಬಿಎ

ಕಿರಿಯ ಅಧಿಕಾರಿ- ಎಂಎಸ್ಸಿ ಕೆಮಿಸ್ಟ್ರಿ

ಸಹಾಯಕ ಗ್ರಂಥಪಾಲಕರು – ಎಂಎಸ್ಸಿ ಲೈಬ್ರರಿ ಸೈನ್ಸ್

ಗ್ರಂಥಪಾಲಕರು – ಎಂಲಿಬ್

ಜೂನಿಯರ್ ಪ್ರೋಗ್ರಾಮರ್- ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ಸೈನ್ಸ್ ಅಥವಾ ಎಂಸಿಎ

ಸಹಾಯಕ ಇಂಜಿನಿಯರ್- ಸಿವಿಲ್ ಇಂಜಿನಿಯರಿಂಗ್

ಸಹಾಯಕ ಅಭಿಯಂತರರು- ಬಿಇ ಸಿವಿಲ್

ಕಿರಿಯ ಅಭಿಯಂತರರು- ಡಿಪ್ಲೋಮಾ ಸಿವಿಲ್

ಮಾರುಕಟ್ಟೇ ಮೇಲ್ವಿಚಾರಕರು – ಬಿಎಸ್ಸಿ ಅಕ್ರಿಕಲ್ಚರ್ ಮಾರ್ಕೇಟಿಂಗ್.

ವಯೋಮಿತಿ

ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷಗಳು

ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 41 ವರ್ಷ

ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 43 ವರ್ಷ

ಈ ಮೇಲ್ಕಂಡ 394 ಕೆಇಎ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ, ಇತರೆ ಮಾಹಿತಿಗೆ ಸಂಬಂಧಿಸಿದಂತೆ https://cetonline.karnataka.gov.in/kea/ ಜಾಲತಾಣಕ್ಕೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ:B.K. Hariprasad on RSS: ಆರ್‌ಎಸ್‌ಎಸ್‌ ಭಾರತದ ತಾಲಿಬಾನ್‌: ಬಿ.ಕೆ.ಹರಿಪ್ರಸಾದ್‌