Home News KEA: CET ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ KEA – ಇನ್ನು ಮೊಬೈಲ್ ಆ್ಯಪ್​ ನಲ್ಲೇ...

KEA: CET ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ KEA – ಇನ್ನು ಮೊಬೈಲ್ ಆ್ಯಪ್​ ನಲ್ಲೇ ಅರ್ಜಿ ಸಲ್ಲಿಕೆ

Hindu neighbor gifts plot of land

Hindu neighbour gifts land to Muslim journalist

KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಇನ್ನು ಮುಂದೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ.

ಹೌದು, ಸಿಇಟಿ ಆಕಾಂಕ್ಷಿಗಳು ಇನ್ನು ಮುಂದೆ ಅರ್ಜಿ ಸಲ್ಲಿಸಲು ಸೈಬರ್ ಸೆಂಟರ್ ಗೆ ಹೋಗಬೇಕಾಗಿಲ್ಲ. ಯಾಕೆಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹೊಸ ಮೊಬೈಲ್ ಆ್ಯಪ್ ಮತ್ತು ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ. ಆ ಮೂಲಕ ಸಿಇಟಿ ಅರ್ಜಿ ಸಲ್ಲಿಸಲು ಸೈಬರ್​​ ಸೆಂಟರ್​ಗೆ ಹೋಗಬೇಕಾಗಿಲ್ಲ. ಮೊಬೈಲ್ ಆ್ಯಪ್​​, ಪೋರ್ಟಲ್​ನಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ.

ಅಂದಹಾಗೆ ಸೈಬರ್ ಸೆಂಟರ್​​ನಲ್ಲಿ ತಪ್ಪಾಗಿ ಅರ್ಜಿ ಸಲ್ಲಿಸಿ ಅಭ್ಯರ್ಥಿಗಳು ಪರದಾಡುತ್ತಿದ್ದರು. ಇದೇ ಕಾರಣದಿಂದ ಅರ್ಹರಿಗೆ ಸಿಇಟಿ ಸೀಟ್​ ಮಿಸ್ ಆಗುತ್ತಿತ್ತು. ಹಾಗಾಗಿ ಕೆಇಎ ಮೊಬೈಲ್ ಆ್ಯಪ್, ಚಾಟ್ ಬಾಟ್ ಮತ್ತು ಪೊರ್ಟಲ್​​ ಅನ್ನು ಬಿಡುಗಡೆ ಮಾಡಿದೆ. ಹೊಸ ಮೊಬೈಲ್​ ಆ್ಯಪ್​ನಿಂದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.

ಆಪ್ ನಲ್ಲಿ ಏನಿದೆ?

ಸಿಇಟಿ ಪರೀಕ್ಷೆಯ ಸಮಸ್ಯೆಗಳು, ಕಾಲೇಜುಗಳ ಸಮಗ್ರ ಮಾಹಿತಿ, ಆಯ್ಕೆ ಮಾಡುವ ಇಂಜಿನೀಯರಿಂಗ ಕಾಲೇಜು ಶುಲ್ಕ ಎಷ್ಟು? ಆ ಕಾಲೇಜಿನಲ್ಲಿ ಹಾಸ್ಟೇಲ್ ಶುಲ್ಕ ಏನಿದೆ? ಇತರೇ ಸೌಲಭ್ಯಗಳು ಏನಿದೆ ಎಂದು ಹಲವಾರು ಪ್ರಶ್ನೆಗಳಿಗೆ ಆ್ಯಪ್ ನಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ.