

Kasaragodu: ಕಾಸರಗೋಡು (Kasaragodu) ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್,ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ,ಕಾಸರಗೋಡು ಇದರ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27 ಗುರುವಾರ ದಂದು ನಡೆಯುವ ಒಂದು ದಿನದ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ವಿ ಕೆ ಎಂ ಕಲಾವಿದರು ( ರಿ.) ಬೆಂಗಳೂರು ಇವರ ನೇತೃತ್ವದಲ್ಲಿ ಕರ್ನಾಟಕ ಗಡಿನಾಡ ಉತ್ಸವ ,ವಿಶ್ವ ರಂಗಭೂಮಿ ದಿನಾಚರಣೆ,ಸುಗಮ ಸಂಗೀತ ಗಾಯನ ಮತ್ತು ಬೆಂಗಳೂರು ಕನ್ನಡ ನಾಟಕೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಅವರಿಗೆ ಆಹ್ವಾನ ನೀಡಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯ್ಷತೆಯನ್ನು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷ ಶಿವರಾಮ ಕಾಸರಗೋಡು ವಹಿಸಿದ್ದರು. ಸಮ್ಮೇಳನ ಸಂಘಟನಾ ಸಮಿತಿಯ ಪ್ರಧಾನ ಸಂಚಾಲಕರಾದ ಶಂಕರ್ ಕೆ . ಜೆಪಿ ನಗರ ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನ ವನ್ನು ಮಂಜೇಶ್ವರದ ಸಾಂಸ್ಕೃತಿಕ _ಸಾಮಾಜಿಕ ರಾಯಭಾರಿ ಶ್ರೀ ಸದಾಶಿವ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಬಿಡುಗಡೆಗೊಳಿಸಿದರು. ಸಾಮಾಜಿಕ ಸಾಂಸ್ಕೃತಿಕ , ಧಾರ್ಮಿಕ ಮುಂದಾಳು ಕೆ ಎನ್ ವೆಂಕಟರಮಣ ಹೊಳ್ಳ ಕಾಸರಗೋಡು , ಅಮ್ಮ ಇವೆಂಟ್ ಮ್ಯಾನೇಜ್ ಮೆಂಟಿನ ಮಾಲಕ ಕುಶಲ ಕುಮಾರ್ ಕೆ.ಕನ್ನಡ ಗ್ರಾಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು . ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ ದಂದು ಬೆಳಿಗ್ಗೆ ಗಂಟೆ 6:30- 8:30 ವರೆಗೆ ಸುಪ್ರಭಾತ, ಸಮೂಹದಾಸ ಸಂಕೀರ್ತನ ಗಾಯನೋತ್ಸವ ಗಂಟೆ 8:30ಕ್ಕೆ ಕನ್ನಡ ಭುವನೇಶ್ವರಿ ಮೆರವಣಿಗೆ ಗಂಟೆ 9 .00ಕ್ಕೆ ಧ್ವಜಾರೋಹಣ ಗಂಟೆ 9:30ಕ್ಕೆ ಸಮ್ಮೇಳನ ಉದ್ಘಾಟನೆ ಗಂಟೆ 11.00 ಕ್ಕೆ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ, ರಾಜ್ಯಮಟ್ಟದ ವಿದ್ಯಾರ್ಥಿ ಚುಟುಕು ಕವಿಗೋಷ್ಠಿ, ರಾಜ್ಯಮಟ್ಟದ ಚುಟುಕು ಕಥಾ ಗೋಷ್ಠಿ ಗಂಟೆ 3.00 ಕ್ಕೆ ಸಮಾರೋಪ ಸಮಾರಂಭ ಸಂಜೆ ಗಂಟೆ 4:30 ಕ್ಕೆ ಕರ್ನಾಟಕ ಗಡಿನಾಡ ಉತ್ಸವ, ವಿಶ್ವ ರಂಗಭೂಮಿ ದಿನಾಚರಣೆ, ಸುಗಮ ಸಂಗೀತ ಗಾಯನ ಮತ್ತು ಬೆಂಗಳೂರು ಕನ್ನಡ ನಾಟಕೋತ್ಸವ ನಡೆಯಲಿದೆ. ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಪ್ರಾಯೋಜತ್ವದಲ್ಲಿ ವಿ ಕೆ ಎಂ ಕಲಾವಿದರು(ರಿ) ಬೆಂಗಳೂರು ಇದರ ನೇತೃತ್ವದಲ್ಲಿ ‘ ವರ ಭ್ರಷ್ಟ’ ಕನ್ನಡ ನಾಟಕ ,ಅಂಗುಲೀಮಾಲ’ ಕನ್ನಡ ನಾಟಕ , ‘ಲಚ್ಚಿ ‘ ಸಾಮಾಜಿಕ ನಾಟಕ , ‘ಖರೇ ಖರೇ ಸಂಗ್ಯಾ ಬಾಳ್ಯಾ ಚಾರಿತ್ರಿಕ ನಾಟಕ, ನಡೆಯಲಿದೆ.
ರಾಜ್ಯಮಟ್ಟದ ವಿವಿಧ ಚುಟುಕು ಸ್ಪರ್ಧೆಗಳಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಮತ್ತು ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸಲು ಹೆಸರನ್ನು ನೋಂದಾಯಿಸಿದ ಕವಿಗಳಿಗೆ ಸಮಾರೋಪ ಸಮಾರಂಭದಲ್ಲಿ ಚುಟುಕು ಯುಗಾಚಾರ್ಯ ಡಾಕ್ಟರ್ ಎಂ.ಜಿ.ಆರ್ ಅರಸ್ ಮೈಸೂರು ಚುಟುಕು ಕಾವ್ಯ ಪ್ರಶಸ್ತಿಯನ್ನು 108 ಕವಿಗಳಿಗೆ ನೀಡಿ ಗೌರವಿಸಲಾಗುವುದು .













