Home News ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ವತಿಯಿಂದ ಶಿಕ್ಷಕರಿಗೆ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ...

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ವತಿಯಿಂದ ಶಿಕ್ಷಕರಿಗೆ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

Hindu neighbor gifts plot of land

Hindu neighbour gifts land to Muslim journalist

ದ.ಕ. ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ (ರಿ) ಇದರ ವತಿಯಿಂದ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ಮತ್ತು ಸೇವಾಭದ್ರತೆಯನ್ನು ಕಲ್ಪಿಸುವಂತೆ ಮನವಿ ಸಲ್ಲಿಸಲಾಯಿತು.

ನಿಯಮಬಾಹಿರವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳ ಮೇಲೆ ಡೇರಾ ಪ್ರಾಧಿಕಾರದಡಿ ಕ್ರಮ ಜರುಗಿಸುವಂತೆ ಬಳಗದ ಪರವಾಗಿ ಮನವಿ ಮಾಡಲಾಯಿತು.

ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರರವರು ಶಿಕ್ಷಕರ ಸಮಸ್ಯೆಯನ್ನು ಆಲಿಸಿದ ಬಳಿಕ ‘ಡೇರಾ’ ಪ್ರಾಧಿಕಾರದ ಅಡಿಯಲ್ಲಿ ಸಾಧ್ಯವಿರುವ ಕ್ರಮವನ್ನು ತೆಗೆದುಕೊಳ್ಳುತ್ತೇನೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅರವಿಂದ ಶ್ಯಾನಭಾಗ, ರಾಧಾಕೃಷ್ಣ ಪ್ರಭು, ಇಸ್ಮಾಯಿಲ್ ಬ್ಯಾರಿ, ಜೋಯಲ್ ಪಿಂಟೊ ಮತ್ತಿತರರು ಹಾಜರಿದ್ದರು.